ಬೃಹತ್ ಹಲಸಿನ ಮರ ಕಡಿತಲೆ

ಅರಣ್ಯ ಅಧಿಕಾರಿ ಮನೆಗೆ ಅಕ್ರಮ ನಾಟ ಸಾಗಣೆ..?
200 ವರ್ಷದ ಹಳೆಯ ಮರಕ್ಕೆ ಕೊಡಲಿ
ಅರಣ್ಯದಲ್ಲಿ ಮರ ಕಡಿದು ನಾಟ ಮಾಡಿ ಸಾಗಿಸಿದರು...?

ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಸಮೀಪದ ಪಡುವಳ್ಳಿಯ ಕಿರು ಅರಣ್ಯ ಪ್ರದೇಶದಲ್ಲಿ ಇದ್ದ ಸುಮಾರು 200 ವರ್ಷಗಳ ಹಳೆಯ ಹಲಸಿನ ಮರ ಧರೆಗುರುಳಿಸಲಾಗಿದೆ. ಸ್ಥಳದಲ್ಲೇ 250ಕ್ಕೂ ಹೆಚ್ಚು ಅಡಿಗಳ ಮರದ ಹಲಗೆ, ನಾಟವನ್ನು ಮಾಡಿ ನೂತನವಾಗಿ ನಿರ್ಮಾಣ ಆಗುತ್ತಿರುವ ಅರಣ್ಯ ಅಧಿಕಾರಿಯ ಮನೆಯೊಂದಕ್ಕೆ ಸಾಗಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಪ್ರಕರಣದಲ್ಲಿ ಅರಣ್ಯ ಅಧಿಕಾರಿ ನೇರವಾಗಿ ಭಾಗಿಯಾಗಿರುವ ಸಂಬಂಧ ಸಾರ್ವಜನಿಕರು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಆಗುಂಬೆ ಭಾಗದಲ್ಲಿ ಅರಣ್ಯ ಇಲಾಖೆ ಮತ್ತು ಪ್ರಭಾವಿ ನಾಯಕರ ಜಂಟಿ ಕಾರ್ಯಾಚರಣೆಯಲ್ಲಿ ಇಂತಹ ಅನೇಕ ಪ್ರಕರಣಗಳು ಹೆಚ್ಚುತ್ತಿದೆ. ಬಡವರ ಮೇಲೆ ಮಾತ್ರ ಅರಣ್ಯ ದರ್ಪ ತೋರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಎಲ್ಲಾ ಕಾನೂನುಗಳು ಬಡವರ ಮೇಲೆ ಸವಾರಿ ನಡೆಸಲು ಮಾತ್ರ ಇದೆ ಎಂಬ ಧೋರಣೆಯಲ್ಲಿ ಇಲಾಖೆ ಮತ್ತು ಕೆಲವು ನಾಯಕರು ಕಾರ್ಯಾಚರಣೆ ನಡೆಸುತ್ತಿರುವ ನೂರಾರು ಪ್ರಕರಣಗಳು ಸ್ಥಳೀಯವಾಗಿ ಹೆಚ್ಚುತ್ತಿದೆ.


ಕಾಡು ಪ್ರಾಣಿ ಮಾನವ ಸಂಘರ್ಷ ಹೆಚ್ಚುತ್ತಿರುವ ಸನ್ನಿವೇಷದಲ್ಲಿ ನೂರಾರು ಕಾಡು ಪ್ರಾಣಿಗಳಿಗೆ ಕಾಲಕಾಲಕ್ಕೆ ಆಹಾರ, ಆಸೆರೆ ನೀಡುತ್ತಿದ್ದ ಹಲಸಿನ ಮರ ಕಡಿತಲೆ ಮಾಡಿರುವ ಬಗ್ಗೆ ಪರಿಸರ ಆಸಕ್ತರ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅರಣ್ಯವನ್ನು ರಕ್ಷಿಸುವ ಅಧಿಕಾರಿಗಳೆ ತಂಡ ರಚಿಸಿ ಮರ ಕಡಿಯುವ ಬಗ್ಗೆ ವ್ಯಾಪಕ ಟೀಕೆ ಆರಂಭವಾಗಿದೆ. ಮನೆಯ ಪೀಠೋಪಕರಣಕ್ಕೆ ಅಧಿಕಾರಿಗಳು ಮರಗಳ ಆಯ್ಕೆ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಆಗುಂಬೆ ವಲಯಾರಣ್ಯ ವ್ಯಾಪ್ತಿಯಲ್ಲಿ ಇಂತಹ ಪ್ರಕರಣ ನಿರಂತರವಾಗಿ ನಡೆಯುತ್ತಿದೆ. ಮರ ಕಡಿಯುವ ಮಿಷನ್ ಸಂಖ್ಯೆ ಹೆಚ್ಚಾದಂತೆ ಧರೆಗುರುಳುವ ಮರಗಳು ಹೆಚ್ಚುತ್ತಿದೆ. ರಸ್ತೆಯ ಇಕ್ಕೆಲ ಅಲ್ಲದೆ, ಕಾಡುಗಳ ಒಳಗಡೆಯೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮರಗಳನ್ನು ಆಯ್ಕೆ ಮಾಡಿ ಕೊಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇಲಾಖೆ ಮರ ಕಡಿಯುವ ಅಕ್ರಮಕ್ಕೆ ಸಾಕಷ್ಟು ಹಲಸಿನ ಮರ ನಿರ್ಮೂಲನೆ ಮಾಡುತ್ತಿದೆ ಎಂಬ ದೂರುಗಳು ಇದೆ‌.

ವಿಶೇಷವೆಂದರೆ ಈ ಪ್ರಕರಣದಲ್ಲಿ ಮರವನ್ನು ನೇರವಾಗಿ ಕಡಿತಲೆ ಮಾಡಿ ಅಲ್ಲಿಯೇ ದಿನಗಟ್ಟಲೆ ನಾಟ ತಯಾರಿಸಲಾಗಿದೆ. ಬೃಹತ್ ಮರವಾಗಿರುವ ಹಿನ್ನಲೆಯಲ್ಲಿ ಅದರ ಸಾಗಾಣೆ ಅಷ್ಟು ಸಲೀಸು ಆಗಿರಲಿಲ್ಲ. ಹೀಗಾಗಿಯೇ ಸ್ಥಳದಲ್ಲಿ ಎಲ್ಲಾ ಸಹಕಾರದ ಮೇರೆಗೆ ನಾಟ ಕೆತ್ತಲಾಗಿದೆ. ನಂತರ ಅಲ್ಲಿಂದ ನೇರವಾಗಿ ಶಿವಮೊಗ್ಗಕ್ಕೆ ಕಳುಹಿಸಿದ್ದಾರೆ ಎಂಬ ದೂರುಗಳಿವೆ. ಮರವನ್ನು ರಕ್ಷಿಸುವ ಜವಾಬ್ದಾರಿ ಹೊತ್ತ ಅಧಿಕಾರಿಗಳೇ ಹೀಗೆ ಕಡಿತಲೆ ಮಾಡಿದರೆ ಅರಣ್ಯ ಉಳಿಸುವವರು ಯಾರೆಂಬ ಪ್ರಶ್ನೆ ಇದೀಗ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ‌.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post