ಕಟ್ಟಡ ಕಾರ್ಮಿಕರು ನೊಂದಾಣಿ ಮಾಡಿಕೊಳ್ಳಿ

ರಿನಿವಲ್‌ ಮತ್ತು ಇ-ಕೆವೈಸಿಗೆ ಅವಕಾಶ

ಸರ್ಕಾರಿ ಸೌಲಭ್ಯದಿಂದ ಕಾರ್ಮಿಕರು ವಂಚಿತರಾಗಬೇಡಿ - ಮಂಜುನಾಥ ಎಸ್‌, ಪೃಥ್ವಿಶ್ರಮ ಕಾರ್ಮಿಕರ ಸಂಘ ಮೇಲಿನಕುರುವಳ್ಳಿ

ತೀರ್ಥಹಳ್ಳಿಯಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್‌ (ಲೇಬರ್‌ ಕಾರ್ಡ್) ರಿನಿವಲ್‌ ಮತ್ತು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಕಾರ್ಡ್‌ ಇ-ಕೆವೈಸಿ ಆಗದಿದ್ದರೆ ಸರ್ಕಾರ ಸೌಲಭ್ಯ, ಪರಿಹಾರ ಸಿಗುವುದಿಲ್ಲ. ತಕ್ಷಣ ತಡಮಾಡದೆ ಕಾರ್ಮಿಕರು ನೊಂದಾಣಿ ಮಾಡಿಸಿಕೊಳ್ಳಿ ಎಂದು ಪೃಥ್ವಿಶ್ರಮ ಕಲ್ಲುಗಣಿ ಹಾಗೂ ನಿರ್ಮಾಣ ಶ್ರಮಿಕರ ಸರ್ವೋದಯ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಸ್‌ ಹೇಳಿದ್ದಾರೆ.

ಸರಿಯಾದ ಸಮಯಕ್ಕೆ ಇ-ಕೆವೈಸಿ ಹಾಗೂ ರಿನಿವಲ್‌ ಮಾಡಿಸಿಕೊಳ್ಳದಿದ್ದರೆ ವಿದ್ಯಾರ್ಥಿ ವೇತನ, ಮದುವೆ ಸಹಾಯ ಧನ, ವೈದ್ಯಕೀಯ ವೆಚ್ಚ, ಟೂಲ್‌ ಕಿಟ್‌, ಸಹಾಯ ಧನ ಹಾಗೂ ಇನ್ನಿತರೆ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಲವು ಬಾರಿ ನಾವು ತಿಳಿಸಿದ್ದರು ಕೂಡ ಕಾರ್ಮಿಕರು ಮಾಡಿಸಿಕೊಳ್ಳುತ್ತಿಲ್ಲ. ಕಳೆದ 3 ತಿಂಗಳಿನಲ್ಲಿ 5-6 ಕಟ್ಟಡ ಕಾರ್ಮಿಕರು ಮರಣ ಹೊಂದಿದ್ದಾರೆ. ಆದರೆ ರಿನಿವಲ್‌ ಮಾಡಿಸಿಕೊಂಡಿರದ ಕಾರಣದಿಂದಾಗಿ ಸರ್ಕಾರದಿಂದ ಮೃತರ ಕುಟುಂಬಕ್ಕೆ ಸಿಗುತ್ತಿದ್ದ 75,000 ಸಹಾಯಧನ ಪಡೆಯಲು ಸಾಧ್ಯವಾಗಿಲ್ಲ. ಕಾರ್ಡ್‌ ನೊಂದಾಣಿ ಮಾಡುವವರು ಕೂಡ ಅಸಹಾಯಕರಾಗಬೇಕಾಗುತ್ತದೆ.

ಇ-ಕೆವೈಸಿ ಮಾಡಿಸುವವರು ಮೇಲಿನಕುರುವಳ್ಳಿ ಪೃಥ್ವಿಶ್ರಮ ಕಲ್ಲುಗಣಿ ಹಾಗೂ ನಿರ್ಮಾಣ ಶ್ರಮಿಕರ ಸರ್ವೋದಯ ಸಂಘದ ಕಚೇರಿ ಮೊ.9448688166 ಅಥವಾ ತೀರ್ಥಹಳ್ಳಿ ಒನ್‌ ಇ-ಸೇವಾ ಕೇಂದ್ರದ ಜೂನಿಯರ್‌ ಕಾಲೇಜು ರಸ್ತೆಯಲ್ಲಿರುವ ಎಸಿಸಿ ಕಟ್ಟಡದ ಮೊದಲ ಮಹಡಿಯಲ್ಲಿರುವ ಕಚೇರಿಯಲ್ಲಿ ನೊಂದಾಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9448248990 ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post