ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ

ಮಧ್ಯರಾತ್ರಿ ಜಾರಿದ ಆಗುಂಬೆ ಗುಡ್ಡ

ರಸ್ತೆ ವಿಸ್ತರಣೆ ಕಾಮಗಾರಿಗೆ ಘಾಟಿ ಬಲಿ?

ಆಗುಂಬೆ ಘಾಟಿಯ 4 ಮತ್ತು 5 ನೇ ತಿರುವಿನಲ್ಲಿ ಮಧ್ಯರಾತ್ರಿ 1.30ಕ್ಕೆ ಸಣ್ಣ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದೆ. ರಾತ್ರಿ ಆಗುಂಬೆ ಮತ್ತು ಹೆಬ್ರಿ ಪೊಲೀಸರು ವಾಹನಗಳಿಗೆ ಬದಲಿ ಮಾರ್ಗಗಳನ್ನು ಸೂಚಿಸಿ ಸವಾರರಿಗೆ ಸಹಕರಿಸಿದ್ದಾರೆ.

ಮುಂಜಾನೆ ಮೊದಲ ಬಸ್ ಸಣ್ಣ ಗುಡ್ಡ ಜಾರಿದ ಪ್ರದೇಶದಲ್ಲಿ ಮುನ್ನುಗ್ಗಿದ್ದರಿಂದ ತಕ್ಕಮಟ್ಟಿಗಿನ ವಾಹನ ಸಂಚಾರ ಆರಂಭವಾಗಿದ್ದು ಭಾರಿ ಮಳೆ ಆಗಮಿಸಿದರೆ ಮತ್ತಷ್ಟು ಗುಡ್ಡ ಜರುಗುವ ಆತಂಕ ಎದುರಾಗಿದೆ.

ಕಳೆದ ವರ್ಷ ಘಾಟಿಯ 7ನೇ ತಿರುವಿನಲ್ಲಿ ಭಾರೀ ಪ್ರಮಾಣ ಗುಡ್ಡ ಕುಸಿತಗೊಂಡಿದ್ದರಿಂದ ವಾರಗಳ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಭಾರಿಯ ಗುಡ್ಡ ಕುಸಿತ ಕೂಡ ಸಂಚಾರ ಸ್ಥಗಿತ ಮರಕಳಿಸುವ ಮುನ್ಸೂಚನೆ ನೀಡಿದೆ.

ತೀರ್ಥಹಳ್ಳಿ ತಾಲ್ಲೂಕಿಗೆ ಆಗುಂಬೆ ಮತ್ತು ಅದರ ಕೆಲ ಘಾಟಿಯ ತಿರುವುಗಳು ಸೇರಿರುವುದರಿಂದ ದೇಶದಲ್ಲಿಗೆ ತೀರ್ಥಹಳ್ಳಿಗೆ ವಿಶೇಷವಾದ ಸ್ಥಾನ ಕಲ್ಪಿಸಲಾಗಿದೆ. ಯುನೆಸ್ಕೋ ಪಟ್ಟಿಯಲ್ಲಿ ಆಗುಂಬೆ ಗೋಚರಗೊಂಡಿದ್ದು ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಿಸಿದೆ. ಇನ್ನು ಆಗಮಿಸುವರ ಅನುಕೂಲಕ್ಕೆ ಮತ್ತು ಮಂಗಳೂರು, ಮಲ್ಪೆ ಬಂದರುಗಳಿಂದ ಆಗಮಿಸುವ ವಿವಿಧ ಕಾರ್ಖಾನೆ ಕಚ್ಚಾ ಸಾಮಗ್ರಿ ಸಾಗಿಸುವ ಕಾರ್ಪೊರೇಟ್ ಕೇಂದ್ರಿತ ಅಭಿವೃದ್ಧಿಗೆ ಘಾಟಿ ವಿಸ್ತರಣೆ ಅಗತ್ಯವಾಗಿದೆ. ಈ ಉದ್ದೇಶದಿಂದಲೇ ಆಗುಂಬೆ ಘಾಟಿಯಲ್ಲಿ ಚತುಷ್ಪತ ಸುರಂಗ ಮಾರ್ಗದ ಪ್ರಸ್ತಾವನೆ ಜಾರಿಗೆ ತರಲಾಗಿದೆ. ಮುಂದೊಂದು ದಿನ ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತ ತೀರ್ಥಹಳ್ಳಿಯಲ್ಲಿ ಸಂಭವಿಸಿದರೂ ಅಚ್ಚರಿ ಪಡಬೇಕಿಲ್ಲ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post