ರೈತರು ಸರ್ಕಾರಿ ಸೌಲಭ್ಯ ಬಳಸಿಕೊಳ್ಳಬೇಕು

ಉಚಿತ ಪಂಪ್‌ಸೆಟ್‌ ಸಂಪರ್ಕ ಪಡೆದ ರೈತರ ಆಧಾರ್‌ ನೊಂದಾಣಿ ಕಡ್ಡಾಯ.
ಅರಣ್ಯ ಇಲಾಖೆಯಿಂದ ಸಮಗ್ರ ರೈತಸ್ನೇಹಿ ಅರಣೀಕರಣ

ಸರ್ಕಾರದ ರೈತಸ್ನೇಹಿ ಯೋಜನೆಯ ಬಗ್ಗೆ ಸೂಕ್ತ ಮಾಹಿತಿ ಸಿಗುತ್ತಿಲ್ಲ. ಇದನ್ನು ಮನಗಂಡು ಕೃಷಿಕ ಸಮಾಜ ರೈತರಿಗೆ ಮಾಹಿತಿ ಕಾರ್ಯಗಾರ ಹಮ್ಮಿಕೊಂಡಿದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬುಧವಾರ ಹೊನ್ನೇತಾಳು ಗ್ರಾಮದ ಪ್ರಗತಿಪರ ಕೃಷಿಕ ಮೇದೊಳಿಗೆ ರಾಮಸ್ವಾಮಿ ಅವರ ಕೃಷಿ ಜಮೀನು ಆವರಣದಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ನಡೆದ ಮಾಹಿತಿ ಕಾರ್ಯಗಾರದಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.

ಆರ್ಟಿಸಿ ದಾಖಲೆ ಮಾಹಿತಿ ನೀಡಿ 10 ಎಚ್‌.ಪಿ. ಒಳಗಿನ ಪಂಪ್ಸೆಟ್ವಿದ್ಯುತ್ಸಂಪರ್ಕ ಪಡೆದಿರುವ ರೈತ ಕುಟುಂಬದ ಸದಸ್ಯರು ಆಧಾರ್ ನೊಂದಣಿ ಮಾಡುವುದು ಕಡ್ಡಾಯವಾಗಿದೆ. ನೊಂದಾಣಿಯನ್ನು ಇಲಾಖೆಯ ಉಪಯೋಗಕ್ಕೆ ಮಾತ್ರ ಬಳಕೆ ಮಾಡಲಾಗುತ್ತದೆ. ರೈತರು ಆತಂಕ ಪಡುವ ಅಗತ್ಯ ಇಲ್ಲ” ಎಂದು ಮೆಸ್ಕಾಂ ಎಇಇ ಪ್ರಶಾಂತ್ಕುಮಾರ್ತಿಳಿಸಿದರು.

ಹೆಣ್ಣು ಕರು ಜನನಕ್ಕೆ ಪ್ರನಾಳ ವೀರ್ಯವನ್ನು ವಿತರಿಸಲಾಗುತ್ತಿದೆ. ಪ್ರತಿ ವೀರ್ಯಕ್ಕೆ 250 ರೂಪಾಯಿ ಶುಲ್ಕ ನಿಗಧಿಪಡಿಸಲಾಗಿದೆ. ಉಚಿತ ವಿತರಣೆಗೆ ಬಾರಿ ಬೇಡಿಕೆ ಇದೆ. ಎಸ್ಎಸ್ಎಲ್ಸಿ ವಿದ್ಯಾರ್ಹತೆ ಪಡೆದ ಯುವಕರಿಗೆ ಜಾನುವಾರು ಆರೈಕೆ ತರಬೇತಿ ನೀಡಲಾಗುತ್ತಿದೆ. ಆಸಕ್ತರು ಇಲಾಖೆಯನ್ನು ಸಂಪರ್ಕಿಸಬಹುದು” ಎಂದು ಪಶು ಸಂಗೋಪಾನ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜ್ತಿಳಿಸಿದರು.

ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿ ಜುಲೈ 31 ಕೊನೆಯ ದಿನವಾಗಿದೆ. ಅಡಿಕೆ ಸಂಸ್ಕರಣೆ, ಯಂತ್ರೋಪಕರಣ ಸಹಾಯಧನ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 2.52 ಕೋಟಿ ಹಣ ಬಿಡುಗಡೆಗೆ ಬಾಕಿ ಇದ್ದು 2024-25ನೇ ಸಾಲಿಗೆ 5 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಹಾಯಧನ ಪಡೆಯಲು ಪ್ರೂಟ್ತಂತ್ರಾಂಶದಲ್ಲಿ ಹೆಸರು ನೋಂದಾಣಿ ಕಡ್ಡಾಯ” ಎಂದು  ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ  ಸೋಮಶೇಖರ್ಹೇಳಿದರು.

ಅರಣ್ಯ ಇಲಾಖೆ ರೈತ ಸ್ನೇಹಿಯಾಗಿ ಅರಣ್ಯೀಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಉಚಿತ ಸಸಿ ವಿತರಿಸಲಾಗುತ್ತಿದೆ. ಒಬ್ಬ ರೈತನಿಗೆ 400 ಸಸಿಗಳನ್ನು ಪಡೆಯಲು ಅವಕಾಶ ಇದೆ. ಹೆಚ್ಚು ಮಳೆ ಸುರಿಯುವ ಆಗುಂಬೆ ಭಾಗಕ್ಕೆ ಹೊಂದಿಕೊಳ್ಳುವ ಜಾತಿಯ ಸಸಿಗಳನ್ನು ಅರಣ್ಯ ಇಲಾಖೆ ನರ್ಸರಿಗಳಲ್ಲಿ ಬೆಳೆಸುತ್ತಿದೆ” ಎಂದು ಆಗುಂಬೆ ಉಪ ವಲಯಾರಣ್ಯಧಿಕಾರಿ ಸುನಿಲ್ಮಾಹಿತಿ ನೀಡಿದರು.

ಮ್ಯಾಮ್ಕೋಸ್ಉಪಾಧ್ಯಕ್ಷ ಹುಲ್ಕುಳಿ ಮಹೇಶ್‌, ಕೃಷಿಕ ಸಮಾಜದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್, ಉಪಾಧ್ಯಕ್ಷ ಕಿಮ್ಮನೆ ಕೃಷ್ಣಮೂರ್ತಿ, ಜಿಲ್ಲಾ ಸಮಿತಿ ನಿರ್ದೇಶಕ ಹಾಲಿಗೆ ನಾಗರಾಜ್‌, ಪ್ರಮುಖರಾದ ವಡೇಗದ್ದೆ ಕೃಷ್ಣಮೂರ್ತಿ, ಸಿ.ಬಿ.ಈಶ್ವರ್‌ , ಶಚೀಂದ್ರ ಹೆಗ್ಡೆ , ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್ಇದ್ದರು.






ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post