ಜಂಬೇತಲ್ಲೂರು ಗ್ರಾಮದ ಮಾಲ್ ಹಲ್ಕರಿನಲ್ಲಿ ದುಘಟನೆ
ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಜಂಬೇತಲ್ಲೂರು ಗ್ರಾಮದ ಮಾಲ ಹಲ್ಕಾರಿನ ಸುಶೀಲ ಸಂಜೀವ ಅವರ ಮನೆ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಧರೆಗುರುಳಿದೆ.
ಮನೆಯಲ್ಲಿದ್ದ ಅನೇಕ ಸಾಮಾಗ್ರಿಗಳು ಪುಡಿಯಾಗಿದ್ದು ಭಾರಿ ಹಾನಿ ಸಂಭವಿಸಿದೆ. ಸ್ಥಳಕ್ಕೆ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಪವಾರ್ ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.