ಬಿಜೆಪಿ ವರಿಷ್ಠರ ಗಮನ ಸೆಳೆದ ಕುಪ್ಪಳಿ ಮತಕ್ಷೇತ್ರ

ಕಾಂಗ್ರೆಸ್‌ ಭದ್ರಕೋಟೆಯನ್ನು ಛಿದ್ರ ಮಾಡಿದ ಬಿಜೆಪಿ
ತಾಲ್ಲೂಕಿನಲ್ಲಿಯೇ ಶೇಕಡಾ 63% ಮತ ಬಿಜೆಪಿ ಪಾಲು

ಬಿಜೆಪಿಯ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಭರ್ಜರಿಯಾಗಿ ತಮ್ಮ ಸಮೀಪದ ಎದುರಾಳಿ ಕಾಂಗ್ರೆಸ್‌ನ ಗೀತಾ ಶಿವರಾಜಕುಮಾರ್‌ ಅವರನ್ನು ಸೋಲಿಸಿ ಸತತ ನಾಲ್ಕನೆ ಬಾರಿ ಸಂಸತ್‌ ಪ್ರವೇಶಿಸುತ್ತಿದ್ದಾರೆ. ಬಹುತೇಕ ಶಿವಮೊಗ್ಗ ಜಿಲ್ಲೆಯ ಎಲ್ಲಾ ಕಡೆ ರಾಘವೇಂದ್ರ ಕಾಂಗ್ರೆಸ್‌ಗಿಂತಲೂ ಅಧಿಕ ಮತ ಪಡೆದುಕೊಂಡಿದ್ದಾರೆ.

ತೀರ್ಥಹಳ್ಳಿಯ ಮಟ್ಟಿಗೆ ಈ ಬಾರಿ ಕುಪ್ಪಳಿ ಮತ ಕ್ಷೇತ್ರ ಬಿಜೆಪಿ ವರಿಷ್ಠರ ಗಮನ ಸೆಳೆದಿದೆ. ಕಾರಣ ಇಲ್ಲಿಯ ತನಕ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಕುಪ್ಪಳಿಯಲ್ಲಿ ಈ ಬಾರಿ ಬಿ.ವೈ.ರಾಘವೇಂದ್ರ ಒಟ್ಟಾರೆ 11,913 ಮತಗಳನ್ನು ಪಡೆದಿರುವುದಲ್ಲದೇ ಕಾಂಗ್ರೆಸ್‌ ವಿರುದ್ಧ 5,975 ಮತಗಳ ಭರ್ಜರಿ ಲೀಡ್‌ ಗಳಿಸಿದ್ದಾರೆ. ಇದು ತೀರ್ಥಹಳ್ಳಿಯಲ್ಲೇ ಅತೀ ಹೆಚ್ಚಿನ ಲೀಡ್‌ ಆಗಿ ದಾಖಲಾಗಿದೆ. ವಿಶೇಷವೆಂದರೆ ಕುಪ್ಪಳಿ ಕ್ಷೇತ್ರದ ಒಟ್ಟು 30 ಬೂತ್‌ಗಳಲ್ಲಿ ಬಿಜೆಪಿ 29ರಲ್ಲಿ ಪ್ರಚಂಡ ಮುನ್ನಡೆ ಪಡೆದುಕೊಂಡಿದೆ. ಇದಲ್ಲದೇ ಒಟ್ಟಾರೆ ಮತದಾನದಲ್ಲಿ ಶೇಕಡಾ 63ರಷ್ಟು ಪ್ರಮಾಣದ ಮತವನ್ನು ಪಡೆದುಕೊಳ್ಳುವ ಮೂಲಕ ಕಾಂಗ್ರೆಸ್‌ ಪಕ್ಷ ದಂಗಾಗುವಂತೆ ಮಾಡಿದ್ದಾರೆ.

ವಾಸ್ತವವಾಗಿ ಕಾಂಗ್ರೆಸ್‌ ಸರ್ಕಾರದ ಜನಪ್ರಿಯ ಯೋಜನೆಗಳಾದ ಪಂಚ ಗ್ಯಾರಂಟಿ ಮತ್ತು ಈ ಬಾರಿ ಕುಟುಂಬದ ಮಹಿಳೆಗೆ 1 ಲಕ್ಷ ರೂಪಾಯಿಗಳ ಗ್ಯಾರಂಟಿ ಭರವಸೆಯನ್ನು ಮೀರಿ ಈ ಪ್ರಮಾಣದ ಮತ ಗಳಿಕೆ ಆಗಿರುವುದು ಬಿಜೆಪಿ ಪಕ್ಷದ ಸಿದ್ಧಾಂತ ಬಿ.ವೈ. ರಾಘವೇಂದ್ರರ ಅಭಿವೃದ್ಧಿ ಪರ ಹಾಗೂ ಆರಗ ಜ್ಞಾನೇಂದ್ರರ ಜನಪರ ರಾಜಕಾರಣಕ್ಕೆ ದೊರೆತ ದಿಗ್ವಿಜಯ ಎಂದು ಕುಪ್ಪಳಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಸುದೇವ್‌ ಹಾರೋಗೊಳಿಗೆ, ಪ್ರಧಾನ ಕಾರ್ಯದರ್ಶಿಗಳಾದ ಪಿ.ಅಣ್ಣಪ್ಪ ಹಾಗೂ ನಟರಾಜ್‌ ಹುಲ್ಕುಳಿ ತಿಳಿಸಿದ್ದು ಈ ಮಟ್ಟಿನ ದಾಖಲೆ ಪ್ರಮಾಣದ ಮುನ್ನಡೆಗಾಗಿ ಶ್ರಮಿಸಿದ ಬಿಜೆಪಿ ಪಕ್ಷದ ಪ್ರತಿಯೊಬ್ಬರನ್ನು ಅಭಿನಂದಿಸಿದ್ದು ಮತದಾರರಿಗೆ ಹಾರ್ದಿಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post