ಸರ್ಕಾರಿ ಶಾಲೆ ಮುಚ್ಚಲು ಐಎಎಸ್‌ ಅಧಿಕಾರಿಗಳ ತೀರ್ಮಾನ ಕಾರಣ

ಖಾಸಗಿ ಶಾಲೆಗಳ ಪಾಲಿಗೆ ವರದಾನ – ಬಡವರ ಮಕ್ಕಳಿಗೆ ಶಾಪ
“ಅರಣ್ಯ ಇಲಾಖೆ ಸಾಯಿಸುವ ಸುಪಾರಿ ತೆಗೆದುಕೊಂಡಿದ್ಯಾ”
ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ತರಾಟೆ

ಖಾಸಗಿ ಶಾಲೆಗಳಿಗೆ ಲಾಭ ಮಾಡಿಕೊಡಲು ಕೆಲವು ಐಎಎಸ್‌ ಅಧಿಕಾರಿಗಳು ಬಡವರ ಮಕ್ಕಳ ಪಾಲಿಗೆ ಶಾಪವಾಗಿದ್ದಾರೆ. ಸರ್ಕಾರಿ ಶಾಲೆ ಮುಚ್ಚು ಹೋದ್ರೆ ಬಡವರ ಮಕ್ಕಳಿಗೆ ಶಿಕ್ಷಣ ಸಿಗುವುದು ಹೇಗೆ? ಐಎಎಸ್‌ ಅಧಿಕಾರಿಗಳ ಧೋರಣೆಯೇ ಅರ್ಥವಾಗುತ್ತಿಲ್ಲ. ಹಳ್ಳಿಗಳಲ್ಲಿ ಸರ್ಕಾರಿ ಶಾಲೆ ಇಲ್ಲವಾದರೆ ಬಡವರಿಗೆ ಶಿಕ್ಷಣ ಸಿಗುವುದಿಲ್ಲ. ಖಾಸಗಿ ಶಾಲಾ ವಾಹನ ಮನೆಯ ಬಾಗಿಲಿಗೆ ಬಂದು ಮಕ್ಕಳನ್ನು ಹೊತ್ತಿಕೊಂಡು ಹೋಗುತ್ತಾರೆ. ಇಂತಹ ಸ್ಥಿತಿಯಲ್ಲಿ ಇಂಗ್ಲೀಷ್‌ ಮಾಧ್ಯಮ ಶಾಲೆ ಆರಂಭಕ್ಕೂ ಸರ್ಕಾರ ಮೀನಾಮೇಷ ಎಣಿಸುವುದು ಸರಿಯಲ್ಲ ಎಂದು ಮಂಗಳವಾರ ಗ್ರಾಮೀಣಾಭಿವೃದ್ಧಿ ಭವನದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನೆಯಲ್ಲಿ ತರಾಟೆ ತೆಗೆದುಕೊಂಡರು.

ಅರಣ್ಯ ಇಲಾಖೆ ಮಳೆಗಾಲದಲ್ಲಿ ಮರ ಕಟಾವಿಗೆ ಅನುಮತಿ ನೀಡಿ ರಸ್ತೆಗಳನ್ನು ಹಾಳು ಮಾಡುತ್ತಿದೆ. ಟಿಂಬರ್‌ ಮಾಫಿಯಾದ ಜೊತೆ ಇಲಾಖೆ ಅಧಿಕಾರಿಗಳು ಸೇರಿ ಲಾಭಿ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕಡಿತಲೆ ಸಾಗಾಣೆಗೆ ಪರ್ಮಿರ್ಟ್‌ ನೀಡಬೇಡಿ. ಗ್ರಾಮೀಣ ಜನರನ್ನು ಬಳಸಿಕೊಂಡು ಅರಣ್ಯ ಇಲಾಖೆ ಗಿಡ ನೆಡುವ ಕಾರ್ಯಕ್ರಮ ಮಾಡಬೇಕು. ಗ್ರಾಮಾರಣ್ಯ ಸಮಿತಿ ರಚನೆ ಕ್ರಮ ವಹಿಸಿ ಎಂದು ಸೂಚನೆ ನೀಡಿದರು.

ಸ್ತ್ರೀರೋಗ ತಜ್ಞರನ್ನು ನೇಮಿಸಿ – ನಾಗರಾಜ ಶೆಟ್ಟಿ

ತೀರ್ಥಹಳ್ಳಿ ತಾಲ್ಲೂಕು ಜೆ.ಸಿ. ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಪ್ರಕರಣಗಳು ಹೆಚ್ಚುತ್ತಿದೆ. ಕನ್ನಂಗಿ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ತ್ರೀರೋಗ ತಜ್ಞರ ಹುದ್ದೆ ಖಾಲಿಯಿದೆ. ಹುದ್ದೆ ಭರ್ತಿ ಮಾಡಿದರೆ ಮಹಿಳೆಯರ ಆರೋಗ್ಯ ರಕ್ಷಣೆ ಮಾಡಬಹುದು ಎಂದು ಟಿಎಪಿಸಿಎಂಎಸ್‌ ಅಧ್ಯಕ್ಷ ನಾಗರಾಜ ಶೆಟ್ಟಿ ಸಭೆಯ ಗಮನ ಸೆಳೆದರು.

“ಅಂತರ್ಜಲ ತಳ ಸೇರಿ ನೀರಿನಲ್ಲಿ ಲವಣಾಂಶ ಹೆಚ್ಚುತ್ತಿದೆ. ಮೇಲೈ ನೀರು ವಿವಿಧ ಬಗೆಯಲ್ಲಿ ಕಲ್ಮಶಗೊಳ್ಳುತ್ತಿದೆ. ಶುದ್ಧ ನೀರು ಪೂರೈಸುವುದು ಯಾರ ಜವಾಬ್ದಾರಿ. ಜನ ಸತ್ತ ಮೇಲೆ ಕ್ರಮ ತೆಗೆದುಕೊಳ್ತೀರಾ ಎಂದು ಶಾಸಕ ಆರಗ ಜ್ಞಾನೇಂದ್ರ ವಿವಿಧ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅನೇಕ ದೂರುಗಳು ಕೇಳಿ ಬರುತ್ತಿದೆ. ಆಹಾರ ಗುಣಮಟ್ಟ ತಪಾಸಣೆ ನಡೆಯುತ್ತಿಲ್ಲ. ಸರ್ಕಾರ ಆಡಳಿತವನ್ನು ಹಾಳು ಮಾಡುತ್ತಿದೆ ಎಂದು ದೂರಿದರು.

“ಗ್ರಾಮೀಣ ಭಾಗದಲ್ಲಿ ಕಲುಷಿತ ನೀರಿನ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಜೆಜೆಎಂ ಯೋಜನೆ ಪ್ರಗತಿಯಲ್ಲಿದ್ದು ನೀರು ಸರಬರಾಜು ವ್ಯತ್ಯವಾಗುತ್ತಿದೆ. ಕಲುಷಿತ ನೀರು ತಪಾಸಣೆ ನಡೆಸಲು ಸೌಲಭ್ಯಗಳಿಲ್ಲ. ಈಗ ಕೇವಲ ಲವಣಾಂಶ ಗುರುತಿಸಬಹುದು. ಆರೋಗ್ಯ ಇಲಾಖೆಯಿಂದ ಕಲ್ಮಶ ನೀರಿನ ತಪಾಸಣೆ ನಡೆಸಬೇಕು” ಎಂದು ವಿವಿಧ ಗ್ರಾಮ ಪಂಚಾಯಿತಿ ಪಿಡಿಓಗಳು ಬೇಡಿಕೆ ಸಲ್ಲಿಸಿದರು.

ಕೊಟ್ಟಿಗೆ, ಬಣವೆ ಪದ ಬಳಸಬೇಡಿ - ಆರಗ
ಸ್ಥಳೀಯ ಪದಗಳ ಕಲ್ಪನೆ ಇಲ್ಲದೆ ಎಲ್ಲೋ ಕುಳಿತ ಐಎಎಸ್‌ ಅಧಿಕಾರಿಗಳು ಕಾಯ್ದೆ ಮಾಡುತ್ತಾರೆ. ಹಾನಿ ಸಂಭವಿಸಿದಾಗ ಗ್ರಾಮ ಲೆಕ್ಕಿಗರು ಕೊಟ್ಟಿಗೆ, ಬಣವೆ ಅಂತ ನಮೂದಿಸಿದರೆ ಸಂತ್ರಸ್ತರಿಗೆ ಪರಿಹಾರ ಸಿಗುವುದಿಲ್ಲ. ಮನೆಯ ಜಾನುವಾರು ಕಟ್ಟುವ ಸ್ಥಳ ಅಥವಾ ಜಾನುವಾರು ಮನೆ ಎಂದು ನಮೂದಿಸಿಬೇಕು ಎಂದು ಆರಗ ಜ್ಞಾನೇಂದ್ರ ಸಭೆಗೆ ತಿಳಿಸಿದರು.

ಅದಕ್ಕೆ ತಾಲ್ಲೂಕು ವೈದ್ಯಾಧಿಕಾರಿ ಉತ್ತರಿಸಿದ ಹೆಚ್2ಎಸ್‌ ಕಿಟ್‌ನಿಂದ ಬಹಳ ಸಲೀಸಾಗಿ ತಪಾಸಣೆ ನಡೆಸಬಹುದು. ಅದನ್ನು ನೀರುಗಂಟಿಗಳು ನಿರ್ವಹಿಸಬಹುದು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಿಡಿಓಗಳು ನಮಗೆ ತರಬೇತಿ ಆಗಿಲ್ಲ. ನಾವು ಮಾಡುವುದು ಕಷ್ಟ ಎಂದು ಅಳಲು ತೋಡಿಸಿಕೊಳ್ಳುವ ಮೂಲಕ ಎರಡು ಇಲಾಖೆಗಳು ಸಮಸ್ಯೆಯಿಂದ ದೂರ ಸರಿಯುವ ಪ್ರಯತ್ನ ನಡೆಸಿತು.

ಹೀಗೆ ವಾದ ವಿವಾದಗಳು ನಡೆಯುತ್ತಿರುವಾಗ ಮಧ್ಯೆ ಪ್ರವೇಶಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ನೀರು ಶುಧೀಕರಣ ಪರಿಶೀಲನೆಗೆ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಶೀಘ್ರ ತಪಾಸಣೆ ನಡೆಯಲಿದೆ ಎನ್ನುತ್ತಿದ್ದಂತೆ ಸಭೆ ಗಂಭೀರತೆ ಮುರಿದು ಹಾಸ್ಯಕ್ಕೆ ತಿರುಗಿತು.

ತಾಲ್ಲೂಕಿನಲ್ಲಿ ಗಾಂಜಾ ಹಾವಳಿ ಹೆಚ್ಚುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆ ನಡೆಸಲು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಬೇಕು. ಜೆ.ಸಿ. ಆಸ್ಪತ್ರೆಯಲ್ಲೇ ತಪಾಸಣೆಗೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ಬೇಡಿಕೆ ಸಲ್ಲಿಸಿದರು. ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಆರ್‌. ಗಣೇಶ್‌, ತಹಶೀಲ್ದಾರ್‌ ಜಿ.ಬಿ.ಜಕ್ಕನ ಗೌಡರ್‌, ಇಓ ಶೈಲಾ ಎನ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post