ವಿಜಯೇಂದ್ರಗಾಗಿ ಪಕ್ಷ ಬಲಿ ಕೊಡಲು ತಯಾರಾದ ಯಡಿಯೂರಪ್ಪ

ನಾವು ಕಾಶ್ಮೀರದಲ್ಲಿ ಭಾರತಮಾತೆ ಧ್ವಜ ಹಾರಿಸಿದಾಗ ವಿಜಯೇಂದ್ರ ಹಸುಗೂಸು
ಯಡಿಯೂರಪ್ಪ ಕುಟುಂಬಕ್ಕೊಂದು ಬೇರೆಯವರಿಗೊಂದು ಕಾನೂನೇ.. – ಕೆ.ಎಸ್.‌ ಈಶ್ವರಪ್ಪ

ತಮ್ಮ ಪುತ್ರ ವಿಜೇಯೇಂದ್ರರನ್ನು ಮುಖ್ಯಮಂತ್ರಿ ಮಾಡಲು ಯಡಿಯೂರಪ್ಪ ಬಿಜೆಪಿ ಪಕ್ಷವನ್ನೇ ಬಲಿ ನೀಡಲು ಹೊರಟಿದ್ದಾರೆ ಎಂದು ರಾಷ್ಟ್ರ ಭಕ್ತ ಬಳಗದ ಶಿವಮೊಗ್ಗ ಲೋಕ ಸಭಾ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಗುಡುಗಿದ್ದಾರೆ. ಶಿಕಾರಿಪುರ ಹಿತ್ತಲ ಗ್ರಾಮದಲ್ಲಿ ನಡೆದ ಅಂಜನಾಪುರ ಹೋಬಳಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ದಲ್ಲಿ ಮಾತನಾಡಿದ ಅವರು

ಮೋದಿಯವರು ಕುಟುಂಬ ರಾಜಕಾರಣ ಪದ್ಧತಿಯನ್ನು ದೇಶದಲ್ಲಿ ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದಿ ದ್ದಾರೆ ಯಡಿಯೂರಪ್ಪಗೆ ಪಕ್ಷದ ಹಾಗೂ ಮೋದಿಯವರ ಮೇಲೆ ಗೌರವ ಇದ್ದಿದ್ದರೆ ತಕ್ಷಣ ಅವರ ಮಗನಿಗೆ ರಾಜೀನಾಮೆ ಕೊಡಲು ಹೇಳಬೇಕಿತ್ತು. ಆದರೆ ಕುಟುಂಬ ರಾಜಕಾರಣದ ಮೋಹದಿಂದ ವಿವೇಕ ಕಳೆದುಕೊಂಡಿರುವ ಅವರು

ಮೋದಿಯವರ ಮಾತು ಹಾಗೂ ಪಕ್ಷದ ಸಿದ್ಧಾಂತಕ್ಕೆ ಮರ್ಯಾದೆಯನ್ನೇ ನೀಡಿಲ್ಲ ಅವರ ಕುಟುಂಬಕ್ಕೆಒಂದು ನ್ಯಾಯ ಬೇರೆಯವರಿಗೆ ಇನ್ನೊಂದು ಏಕೆ? ಅವರ ಕುಟುಂಬಕ್ಕೆ ಎಲ್ಲಾ ಅಧಿಕಾರ ಬೇಕೆಂದು ಒಬ್ಬ ಮಗನ ಸಂಸದ ಮಾಡಿ ಆರು ತಿಂಗಳು ಕಾದು ಇನ್ನೊಬ್ಬ ಮಗನಿಗೆ ರಾಜ್ಯಾಧ್ಯಕ್ಷ ಮಾಡಿದ ಅವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ.ಎಂದು ಪ್ರಶ್ನೆ ಮಾಡಿದ್ದಾರೆ

ಮೋದಿ ಆಸೆ ಈಡೇರಿಸಲು ಹಾಗು ಅಪ್ಪ‌ ಮಕ್ಕಳ ಹಿಡಿತದಲ್ಲಿರುವ ಪಕ್ಷವನ್ನು ಬಿಡಿಸಲು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ನಾನು ಹಿಂದುತ್ವ ಪರ ಆದರೆ ಮುಸಲ್ಮಾನ ಹಾಗು ಕ್ರಿಶ್ಚಿಯನ್ ವಿರೋಧಿಯಲ್ಲ ಎಲ್ಲಾ ಧರ್ಮದವರನ್ನು ಸೋದರ ಭಾವನೆಯಿಂದ ನಡೆಸಿಕೊಂಡು ಹೋಗುವುದು ಹಿಂದುತ್ವದ ಸಿದ್ಧಾಂತ ವಿಜಯೇಂದ್ರನ ಮುಖ್ಯಮಂತ್ರಿ ಮಾಡಲು ಪಕ್ಷದಲ್ಲಿ ಯಡಿಯೂರಪ್ಪ ಹಿಂದುತ್ವವನ್ನು ಬಲಿ ನೀಡುತ್ತಿದ್ದಾರೆ

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ವಿಜಯೇಂದ್ರನನ್ನು ಸಿ.ಎಮ್ ಮಾಡಲು  ಪಕ್ಷದಲ್ಲಿ ಹಿರಿಯ ನಾಯಕ ಮಂತ್ರಿಯಾಗಿದ್ದ ಸಿ.ಟಿ.ರವಿಯವರಿಗೆ ರಾಜಿನಾಮೆ ಕೊಡಿಸಿ ಬಿಜೆಪಿ ರಾಷ್ಟ್ರ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಗೋವಾ ಮಹಾರಾಷ್ಟ್ರ ಎಲ್ಲಾ ಕಡೆ ತಿರುಗಿಸಿ ಈಗ  ಚಿಕ್ಕಮಗಳೂರಿನಲ್ಲಿ ಟಿಕೆಟ್ ತಪ್ಪಿಸಿ ಯಡಿಯೂರಪ್ಪ ಮೂಲೆಗುಂಪು ಮಾಡಿದ್ದಾರೆ.

ವಿಜಯೇಂದ್ರ ಇನ್ನೂ ಎಳಸು ಯಾವ ಹೋರಾಟ ಮಾಡಿದ್ದಾರೆ. ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾಗ ಉಗ್ರಗಾಮಿಗಳು ಕಾಶ್ಮೀರದ ಲಾಲ್ ಚೌಕ್ ನಲ್ಲಿ ಪಾಕಿಸ್ಥಾನ ಧ್ವಜ ಹಾರಿಸಿ ಭಾರತದಲ್ಲಿ ತಾಯಿ ಎದೆ ಹಾಲು ಕುಡಿದ ಗಂಡಸರು ಇದ್ದರೆ ಪಾಕಿಸ್ಥಾನ ಧ್ವಜ ತೆಗೆದು ಹಾಕಿ ಎಂಬ ಗೋಡೆ ಬರಹ ಬರೆದಿದ್ದರು.

ಮುರಳೀ ಮನೋಹರ್ ಜೋಷಿ, ಲಾಲ್ ಕೃಷ್ಣ ಅಡ್ವಾಣಿ, ಮೋದಿಯವರು ಉಗ್ರಗಾಮಿಗಳ ಬರಹವನ್ನು ಸವಾಲಾಗಿ ಸ್ವೀಕರಿಸಿ  ಉಗ್ರಗಾಮಿಗಳ ಗುಂಡಿಗೆ ಹೆದರದೆ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಹಾಕಿ ಲಾಲ್ ಚೌಕ್ ತಲುಪಿ ಪಾಕಿಸ್ಥಾನ ದ್ವಜವನ್ನು ಕಿತ್ತು ಭಾರತದ ತ್ರಿವರ್ಣ ಧ್ವಜವೇರಿಸಿದೆವು

ವಿಜಯೇಂದ್ರಗೆ ಅಪ್ಪ ಮಾಡಿರುವ ದುಡ್ಡು ಬಿಟ್ಟರೆ ಯಾವ ಹೋರಾಟದ ಬಗ್ಗೆ ಗೊತ್ತಿಲ್ಲ.  ಹೊತ್ತಿನ ಕೂಳಿಗೆ ಗತಿ ಇರದ ಹೊತ್ತಿನಲ್ಲಿ ಪಕ್ಷ ಕಟ್ಟಲು ಶ್ರಮಿಸಿದ ನಮ್ಮನ್ನು ವಿಜಯೇಂದ್ರ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಈ ಚುನಾವಣೆಯಲ್ಲಿ  ರಾಘವೇಂದ್ರ ಸೋಲುತ್ತಾರೆ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಾರೆ ಈ ಮೂಲಕ ಅಪ್ಪ ಮಕ್ಕಳ ಕುಟುಂಬ ರಾಜಕಾರಣ ಅಂತ್ಯವಾಗಿ ಮೋದಿಯವರ ಆಸೆ ಈಡೇರಲಿದೆ ಬಿಜೆಪಿ ಸಿದ್ದಂತ ಉಳಿದು ರಾಜ್ಯದಲ್ಲಿ ಬಿಜೆಪಿ ಪಕ್ಷ ಶುದ್ಧವಾಗಲಿದೆ.

ಶಿಕಾರಿಪುರ ವಿಧಾನ ಸಭಾ ಕ್ಷೇತ್ರದ ಹಿತ್ತಲ ಗ್ರಾಮದಲ್ಲಿ ರಾಷ್ಟ್ರ ಭಕ್ತರ ಬಳಗ ವತಿಯಿಂದ ಅಂಜನಾಪುರ ಹೋಬಳಿ ವ್ಯಾಪ್ತಿಯ ಹದಿನೆಂಟು ಗ್ರಾಮದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ಹಿತ್ತಲ ಗ್ರಾಮಕ್ಕೆ ಆಗಮಿಸಿದ ಈಶ್ವರಪ್ಪರವರನ್ನು ಹಾರ ಹಾಕಿ ಪಟಾಕಿ ಸಿಡಿಸಿ ಡೊಳ್ಳು ವಾದ್ಯಗಳ ಮೂಲಕ ಈಶ್ವರಪ್ಪ ರವರನ್ನು ಸ್ವಾಗತಿಸಿದರು. ಗ್ರಾಮ ದೇವತೆ ಮಾರಿಕಾಂಬ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು ಈ ಸಂಧರ್ಭದಲ್ಲಿ ಈಸೂರು ಸಂತೋಷ್, ನಾಗರಾಜ್ ಕಾಳಿ, ವಕೀಲರಾದ ಶಿವಪ್ಪ, ಮಹೇಶ್ವರಪ್ಪ, ಸೀತಾಲಕ್ಷ್ಮಿ, ಜು ಲಕ್ಷ್ಮಿ ರಾಧಾ ರಾಮಚಂದ್ರ, ಆಶಾ ಚನ್ನಬಸಪ್ಪ ಉಪಸ್ಥಿತರಿದ್ದರು

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post