ಈಶ್ವರಪ್ಪ-ಆರಗ ಹೊಂದಾಣಿಕೆ ರಾಜಕಾರಣ

ಈಡಿಗ ಸಮುದಾಯ ತುಳಿದು ರಾಜಕೀಯ ಬೇಳೆ ಬೇಯಿಸಿಕೊಂಡ ಆರಗ
ಮಾರಿಕಾಂಬಾ ದೇವಸ್ಥಾನಲ್ಲಿ ಮಹಿಳೆಯರು, ಪರಿಶಿಷ್ಟರಿಗೆ ಸದಸ್ಯತ್ವ ಇಲ್ಲ..
ಚುನಾವಣಾ ಬಾಂಡ್‌ ಹಗರಣದಲ್ಲಿ ಮೋದಿ ಜೈಲು ಹೋಗಬೇಕು

ಚುನಾವಣಾ ಬಾಂಡ್‌ ಹಗರಣದಲ್ಲಿ ನರೇಂದ್ರ ಮೋದಿ, ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌ ಜೈಲಿಗೆ ಹೋಗಬೇಕು. ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ನರೇಂದ್ರ ಮೋದಿ ಹತಾಶೆಗೆ ತಲುಪಿದ್ದಾರೆ. ದೇಶದಲ್ಲಿ ಕೋಮುದ್ವೇಶ ಹೆಚ್ಚಿಸಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಪೊಲೀಸ್, ಚುನಾವಣಾ ಆಯೋಗ ಸುಮೊಟೋ ಪ್ರಕರಣ ದಾಖಲಿಸಿ ಪ್ರಧಾನಿ ಮೇಲೆ ಎಫ್ಐಆರ್‌ ಹಾಕಬೇಕು ಎಂದು ಕಾಂಗ್ರೆಸ್‌ ಪಕ್ಷದ ನನ್ನ ಬೂತ್‌ ನನ್ನ ಜವಾಬ್ದಾರಿ ಅಭಿಯಾನದ ಅಂಗವಾಗಿ ಸೋಮವಾರ ಸೊಪ್ಪುಗುಡ್ಡೆಯ ನಾಡ್ತಿ ಭಾಗದ ಮನೆಗಳಿಗೆ ತೆರಳಿ ಪ್ರಚಾರ ನಡೆಸಿ ಅವರು ಮಾತನಾಡಿದರು.

ಸಂಸದ ಬಿ.ವೈ. ರಾಘವೇಂದ್ರ ಸೋಲಿಸಲು ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ.‌ ಇಷ್ಟು ವರ್ಷಗಳ ಕಾಲ ಈಡಿಗ ಸಮುದಾಯವನ್ನು ಬಿಜೆಪಿಯ ಮತಬ್ಯಾಂಕ್‌ ಮಾಡಿಕೊಂಡಿದ್ದ ಕ್ಷೇತ್ರದ ಶಾಸಕರು ಈಡಿಗ ಸಮುದಾಯದ ಮುಖಂಡರು ಬೆಳೆಯದಂತೆ ತುಳಿದರು. ಬಿಜೆಪಿ ಮುಖಂಡರ ಪಾರುಪತ್ಯದಲ್ಲಿರುವ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಮಹಿಳೆಯರು, ಪರಿಶಿಷ್ಟರಿಗೆ ಸದಸ್ಯತ್ವ ನೀಡಲು ಆಗದ ಸ್ಥಿತಿ ಇದೆ. ಬಿಜೆಪಿ ಮುಖಂಡರೊಳಗಿನ ಆರ್‌ಎಸ್‌ಎಸ್‌ ಒಳಸಂಚುಗಳನ್ನು ತಿಳಿಯದವರು ಹಿಂದುತ್ವದ ಹೆಸರಿನಲ್ಲಿ ಮೋಸ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಸಂಸತ್‌ ಒಳಗೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಗುರುತಿನ ಚೀಟಿ ಬಳಸಿಕೊಂಡು ಸ್ಮೋಕ್‌ ಬಾಂಬ್‌ ಸಿಡಿಸಿದ್ದರು. ಆದರೆ ಅದನ್ನು ಮಾದ್ಯಮಗಳು ದೊಡ್ಡ ಸುದ್ದಿಯಾಗಿ ಪ್ರತಿಬಿಂಬಿಸಿಲ್ಲ. ಅದೇ ಜಾಗದಲ್ಲಿ ಕಾಂಗ್ರೆಸ್‌ ಸಂಸದನ ಗುರುತಿನ ಚೀಟಿ ಬಳಸಿದ್ದರೆ ಕೋಮು ತುಷ್ಟೀಕರಣದಂತಹ ಆರೋಪಗಳನ್ನು ಹೊರಿಸುತ್ತಿದ್ದವು. ಕನ್ಹಯ್ಯ ಕುಮಾರ್‌ ಹೇಳಿದಂತೆ ಮೋದಿ ಬೂಟಿನಲ್ಲಿ ವಿಷ ಇದ್ದಿದ್ದರೆ ಭಾರತದಲ್ಲಿ ಅನೇಕ ಪತ್ರಕರ್ತರು ವಿಷಕ್ಕೆ ತುತ್ತಾಗಬೇಕಿತ್ತು ಎಂದು ಕುಟುಕಿದರು.

ಬೆಲೆ ಏರಿಕೆ, ನಿರುದ್ಯೋಗ, ಚುನಾವಣಾ ಬಾಂಡ್‌, ಬಡತನ ಬಿಜೆಪಿಗೆ ವಿಚಾರವಲ್ಲ. ಮುಸ್ಲಿಂ, ಹಿಂದೂಗಳನ್ನು ಪ್ರಚೋಧಿಸಿ ಗಲಭೆ ಸೃಷ್ಟಿಸುವುದನ್ನೇ ಅಧಿಕಾರ ಎಂದುಕೊಂಡಿದ್ದಾರೆ. ದೇಶದಲ್ಲಿ ಹೆಂಡ ಕುಡಿಯದೇ ಸತ್ತವರಿಲ್ಲ. ಹಸಿವಿನಿಂದ ಸತ್ತವರ ಸಂಖ್ಯೆ ಹೆಚ್ಚಿದೆ. ಆರ್ಥಿಕ, ಸಾಮಾಜಿಕ ಸಮಾನತೆ ನೀಡುವ ಕಾಂಗ್ರೆಸ್‌ ಗ್ಯಾರಂಟಿಯನ್ನು ಹಂಗಿಸುವುದರಲ್ಲಿ ಅರ್ಥವಿಲ್ಲ. ಚುನಾವಣಾ ಬಾಂಡ್‌ ವಿಚಾರದಲ್ಲಿ ನರೇಂದ್ರ ಮೋದಿ, ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌ ಜೈಲಿಗೆ ಹೋಗಬೇಕು ಎಂದರು.

ಸಿದ್ಧಾಂತದ ಬಗ್ಗೆ ಅರಿವಿಲ್ಲದ ಬಿಜೆಪಿ ಕಾರ್ಯಕರ್ತರು, ಮತದಾರರನ್ನು ನಾನು ವಿರೋಧಿಸುತ್ತಿಲ್ಲ. ಆರ್‌ಎಸ್‌ಎಸ್‌ ಸಿದ್ಧಾಂತ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಸಂಸ್ಕೃತ ಆಡಳಿತ ಭಾಷೆ ಮಾಡುವುದಾದರೆ ದೇಶದಲ್ಲಿರುವ 19 ಸಾವಿರ ಭಾಷೆಗಳ ಕಥೆ ಏನು. ಕರ್ನಾಟಕ ಸರ್ಕಾರ ಇಲ್ಲದಿದ್ದರೆ ಕನ್ನಡದ ಅಸ್ಮಿತೆ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಈಗಿರುವ ಬ್ಯಾರಲ್‌ನಂತೆ ಪೆಟ್ರೋಲ್‌ 30 ರೂಗೆ, ಡೀಸೆಲ್‌ 25 ರೂಗೆ ನೀಡುವ ಅವಕಾಶ ಇದೆ. ಆದರೆ ನರೇಂದ್ರ ಮೋದಿ ಜನರ ತಲೆ ಬೋಳಿಸಲು ಹೆಚ್ಚಿನ ತೆರಿಗೆ, ಜಿಎಸ್‌ಟಿ ವಿಧಿಸಿದ್ದಾರೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ 80 ಸಾವಿರ ಜನರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿದ್ದಾರೆ. ಅದರಲ್ಲಿ 240 ಜನರಿಗೆ ತಾಂತ್ರಿಕ ಸಮಸ್ಯೆಗಳಿಂದ ಬಂದಿಲ್ಲ. ದಾಖಲೆ ತಿದ್ದುಪಡಿ ಮಾಡಿಕೊಂಡರೆ ಅವರಿಗೂ ಶೀಘ್ರ ಯೋಜನೆಯ ಲಾಭ ದೊರೆಯುತ್ತದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ, ಮುಖಂಡರಾದ ಡಿ.ಎಸ್. ವಿಶ್ವನಾಥ ಶೆಟ್ಟಿ‌, ಬಿ.ಆರ್.‌ ರಾಘವೇಂದ್ರ ಶೆಟ್ಟಿ, ಪಡುವಳ್ಳಿ ಹರ್ಷೇಂದ್ರ, ಸುಜಿತ್‌ ಸಾಲಿಯಾನ, ಗೀತಾ, ಶಬನಮ್‌, ಸುಶೀಲ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post