ನೇಹಾ ಹಂತಕನನ್ನು ಗುಂಡಿಟ್ಟು ಕೊಲ್ಲಬೇಕು

ಸೋಮವಾರ ಶಿವಮೊಗ್ಗದಲ್ಲಿ ರಾಷ್ಟ್ರಭಕ್ತ ಬಳಗದಿಂದ ಪ್ರತಿಭಟನೆ
ಹಿಂದುತ್ವ ಸಿದ್ದಾಂತಕ್ಕಾಗಿ ನನ್ನ ಹೋರಾಟ
ಆರಗ ಜ್ಞಾನೇಂದ್ರ ಕುರುಡ – ಈಶ್ವರಪ್ಪ

ಬಿಜೆಪಿ ಬಂಡಾಯ ಅಭ್ಯರ್ಥಿ ರಾಜ್ಯದ ಹಿರಿಯ ಬಿಜೆಪಿ ನಾಯಕ ಕೆ.ಎಸ್.‌ ಈಶ್ವರಪ್ಪ ತೀರ್ಥಹಳ್ಳಿಯಲ್ಲಿ ಇಂದು ಮಿಂಚಿನ ಸಂಚಾರ ನಡೆಸಿದರು. 76ರ ಇಳಿವಯಸ್ಸಿನಲ್ಲೂ ಸ್ವಲ್ಪವೂ ಕುಗ್ಗದ ಉತ್ಸಾಹದಿಂದ ಲಯನ್ಸ್‌ ಭವನದಲ್ಲಿ ತುಂಬಿ ತುಳುಕಿದ್ದ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಎಂದಿನ ಮೊನಚಾದ ಹಾಗೂ ದಿಟ್ಟ ಮಾತುಗಳಿಂದ ಕಾರ್ಯಕರ್ತರನ್ನು ಹುರಿದುಂಬಿಸಿದ ಅವರು “ನಾನು ನಿಜವಾದ ಬಿಜೆಪಿ ಕಾರ್ಯಕರ್ತರ ಮತ್ತು ಹಿಂದುತ್ವವಾದಿ. ರಾಜ್ಯ ಬಿಜೆಪಿ ಈಗ ಯಡಿಯೂರಪ್ಪ ಮತ್ತವರ ಪುತ್ರರ ಪಕ್ಷವಾಗಿದೆ. ಅವರ ಸ್ವಾರ್ಥದಿಂದ ಹಿಂದುತ್ವ ಮತ್ತು ಪಕ್ಷವನ್ನು ಉಳಿಸಬೇಕಾಗಿದೆ. ನನಗೆ ಕೂಲಿ ಮಾಡುವವರು, ಆಟೋ ಚಾಲಕರೇ ಸ್ಟಾರ್‌ ಪ್ರಚಾರಕರು ಎಂದರು.

ʻಜಿಲ್ಲೆಯಲ್ಲಿ ಶೇಕಡಾ 40ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ. ಹಿಂದುತ್ವಕ್ಕೆ ಜಯವಾಗಲಿ ಎಂಬ ಕಾರ್ಯಕರ್ತರ ಸಾಲು ಬೂತ್‌ ಮಟ್ಟದಲ್ಲಿದೆ. ಅದನ್ನು ನೋಡಲಾಗದ ಆರಗ ಜ್ಞಾನೇಂದ್ರ ಕುರುಡ. ಆತನಿಗೆ ಕಿವುಡು. ಜ್ಞಾನೇಂದ್ರ ಚೀಟಿ ಹಂಚಕ್ಕೆ ಜನ ಇಲ್ಲ ಅಂದಿದ್ದ. ಕ್ಷೇತ್ರ ಬಿಟ್ಟು ಅವನಿಗೆ ಬೇರೇನು ಗೊತ್ತಿಲ್ಲ. ಗೃಹಮಂತ್ರಿ ಆದಾಗಲೂ ರಾಜ್ಯ ಸುತ್ತುವ ಬದಲು ಕೂಪ ಮಂಡೂಕದ ರೀತಿಯಲ್ಲಿ ತೀರ್ಥಹಳ್ಳಿ ಸುತ್ತಿದ್ದ ಎಂದು ಹಿಯಾಳಿಸಿದರು.

ನಮ್ಮ ಕಾರ್ಯಕರ್ತರ ಮನೆಗಳಿಗೆ ಹೋಗದ ಆರಗ ಜ್ಞಾನೇಂದ್ರ ಈಗ ಅರ್ಧ ಗಂಟೆ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆ ಭಯ ಎದುರಾಗಿದ್ದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತಲೆಕೆಟ್ಟು ಹುಚ್ಚು ಹಿಡಿದಿದೆ. ರಾಘವೇಂದ್ರಗೆ ಸೋಲಿನ ಆತಂಕ ಎದುರಾಗಿದೆ ಎಂದರು.

ಶಿವಮೊಗ್ಗ ಕ್ಷೇತ್ರದಲ್ಲಿರುವ ಜ್ವಲಂತ ಸಮಸ್ಯೆ ಬಗೆಹರಿಸಲು ಯಾರಿಗೂ ಸಾಧ್ಯವಾಗಿಲ್ಲ. ಹಾಗಂತ ನಾನು ಸುಮ್ಮ ಸುಮ್ಮನೆ ಮಾಡುತ್ತೇನೆ ಎಂದು ಹೇಳಲ್ಲಾ. ಲೋಕಸಭಾ ಚುನಾವಣೆ ಮುಂಚಿತವಾಗಿ ಭದ್ರಾವತಿಯ ವಿಎಸ್‌ಎಲ್‌ ಕಾರ್ಖಾನೆ ಲೋಕಸಭಾ ಮುಂಚಿತವಾಗಿ ಆರಂಭಿಸುತ್ತೇನೆ ಎಂಬ ಭರವಸೆ ರಾಘವೇಂದ್ರ ನೀಡಿದ್ದರು ಅಂದ ಮಾತ್ರಕ್ಕೆ ಆರಂಭ ಆಯ್ತಾ ಎಂದು ಪ್ರಶ್ನಿಸಿದರು.

ರಾಜಕಾರಣಿಗಳು ಸತ್ತ ಮೇಲೆಯೇ ರಾಜಕಾರಣ ಬಿಡುವುದು. ಆರಗ ಜ್ಞಾನೇಂದ್ರ ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದು ಸುಳ್ಳು. ಮುಂದಿನ ಚುನಾವಣೆಯನ್ನು ನಾನೇ ನಿಂತು ಗೆಲ್ಲಿಸಿಕೊಂಡು ಬರಬೇಕಾಗುತ್ತದೆ. ಇವರು ಕಾರ್ಯಕರ್ತರಿಗೆ ಬೈದರೆ ಅವನ ಚುನಾವಣೆಯಲ್ಲಿ ಕಾಲಿಗೆ ಬೀಳುವ ಪರಿಸ್ಥಿತಿ ಉದ್ಭವವಾಗುತ್ತದೆ ಎಂದರು.

ಮಹೇಶ್‌ ಮೇಲಿನಕೊಪ್ಪ, ಗೊರಕೋಡು ಮದನ್‌, ಸುವರ್ಣ ಶಂಕರ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post