ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

ಈಡಿಗ ಸಮೂದಾಯಕ್ಕೆ ಬಿತ್ತು ಗುನ್ನಾ! ಯಾರಿಗೆ ಯುವಮೋರ್ಚಾ ಸಾರಥ್ಯ?
ಪ್ರಬಲರಿಗಿಲ್ಲ ಸಂಘಟನೆ ಜವಾಬ್ದಾರಿ
ಅಸಮಾಧಾನಿತರು ಬಿಜೆಪಿಯಲ್ಲಿ ಸುಸ್ತು

ಪಕ್ಷದ ಎಲ್ಲಾ ಹುದ್ದೆಗಳಿಗೆ ಪ್ರಬಲ ಸಮುದಾಯದ ವ್ಯಕ್ತಿಗಳನ್ನು ನಿಯೋಜಿಸಿರುವ ಬಿಜೆಪಿಯಲ್ಲಿ ಇದೀಗ ಈಡಿಗ ಸಮುದಾಯ ಪಾತ್ರ ಏನು ಎಂಬುದು ಯಕ್ಷಪ್ರಶ್ನೆಯಾಗಿದೆ. ಶಾಸಕರ ಆರಗ ಜ್ಞಾನೇಂದ್ರರ ಬಳಿ ಕಾರ್ಯಕರ್ತರು ಅಸಮಾಧಾನ ಹೊರಹಾಕಿದರು ಇದರಲ್ಲಿ ನನ್ನ ಪಾತ್ರ ಏನು ಇಲ್ಲ ಎಂದು ಜಾರಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಪಕ್ಷದ ತೀರ್ಮಾನ ಎಂದು ಆರಗ ಜ್ಞಾನೇಂದ್ರ ಕೈಚೆಲ್ಲಿ ಕುಳಿತಿದ್ದಾರೆ ಎಂಬ ಅಸಮಾಧಾನ ಕೇಳಿ ಬಂದಿದೆ. ಪಕ್ಷದ ಸಂಘಟನೆ ಜವಾಬ್ದಾರಿಯಿಂದ ಕೈಬಿಟ್ಟಿರುವ ಈಡಿಗ ಸಮುದಾಯಕ್ಕೆ ತೀರ್ಥಹಳ್ಳಿ ತಾಲ್ಲೂಕು ಯುವಮೋರ್ಚಾ ಜವಾಬ್ದಾರಿ ಸಿಗುವ ನಿರೀಕ್ಷೆ ಇದೆ. ಒಂದು ವೇಳೆ ಯುವಮೋರ್ಚಾ ಜವಾಬ್ದಾರಿ ಸಿಗದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಈಡಿಗ ಸಮುದಾಯ ಬೇರೆಯದ್ದೇ ನಿಲುವು ತಳೆಯುವ ಸಾಧ್ಯತೆ ಹೆಚ್ಚಿದೆ. ನಿರಂತರವಾಗಿ ಈಡಿಗರು ಬಿಜೆಪಿ ಬೆಂಬಲಿಸಿಕೊಂಡು ಬಂದಿದ್ದಾರೆ. ಯುವಮೋರ್ಚಾದಲ್ಲೂ ಈಡಿಗ ಸಮುದಾಯಕ್ಕೆ ಸ್ಥಾನ ಕೈತಪ್ಪುವ ಸಾಧ್ಯತೆ ನಿಚ್ಚಳವಾಗಿದ್ದು ಈಡಿಗ ಸಮುದಾಯ ಯುವಕರು ಬಿಜೆಪಿಯ ಮನೆಯಿಂದ ಜಾರಿಕೊಳ್ಳುವ ಸಿದ್ಧತೆ ನಡೆಸಿದ್ದಾರೆ.

ಬಿಜೆಪಿ ಸಂಘಟನೆಗೆ ಮೇಜರ್‌ ಸರ್ಜರಿ ಈಚೆಗೆ ನಡೆದಿದ್ದು ಆಂತರಿಕ ಅಸಮಾಧಾನ ಭುಗಿಲೆದ್ದಿದೆ. ತೀರ್ಥಹಳ್ಳಿ ಬಿಜೆಪಿಯಲ್ಲಿ ಒಕ್ಕಲಿಗರ ಪ್ರಾಬಲ್ಯ ಬಲವರ್ಧನೆಗೊಳ್ಳುತ್ತಿದ್ದು ಬಹುತೇಕ ಹುದ್ದೆಗಳು ಒಂದೇ ಸಮುದಾಯಕ್ಕೆ ಲಭಿಸುತ್ತಿರುವುದು ಅನೇಕ ಹಿಂದುಳಿದ ವರ್ಗಗಳ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲಿಯೂ ಹೇಳಿಕೊಳ್ಳದಿದ್ದರೂ ಆತಂಕರಿಕವಾಗಿ ಭಾರತದ ನಾಗರೀಕತೆಯಲ್ಲಿ ಒಳಗೊಳಗೆ ಸ್ವಜನಪಕ್ಷಪಾತಕ್ಕೆ ಕಾರಣವಾಗಿರುವ ಜಾತಿ ಪ್ರಾಭಲ್ಯ ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಿರುವುದು ಅನಾಗರೀಕತೆಯ ಹೊಸ ರೂಪವಾಗಿ ಭಾರತದ ಎಲ್ಲಾ ವರ್ಗವನ್ನು ಕಾಡುವಂತಾಗಿರುವುದು ಸಂವಿಧಾನದಬದ್ಧ ಹಕ್ಕುಗಳ ಲೋಪದೋಷದಂತೆ ಕಾಣಿಸಿಕೊಳ್ಳುತ್ತಿದೆ.

ತೀರ್ಥಹಳ್ಳಿ ಕ್ಷೇತ್ರದ ಹಾಲಿ ಶಾಸಕ ಆರಗ ಜ್ಞಾನೇಂದ್ರ, ನೂತನ ಬಿಜೆಪಿ ಅಧ್ಯಕ್ಷರ ಹುದ್ದೆ ಅಲಂಕರಿಸಿರುವ ಬಿಜೆಪಿ ಮುಖಂಡ ನವೀನ್‌ ಹೆದ್ದೂರು, ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಮೇಗರವಳ್ಳಿ, ಶಿವಮೊಗ್ಗ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್‌ ಕುಕ್ಕೆ ಕೂಡ ಒಕ್ಕಲಿಗ ಸಮುದಾಯ ಪ್ರಮುಖ ನಾಯಕರು. ಹೀಗಿರುವಾಗ ಶಾಸಕ ಆರಗ ಜ್ಞಾನೇಂದ್ರ “ದೀವರ ಮಕ್ಕಳು ದೇವರ ಮಕ್ಕಳು” ಎಂದು ಸುಮಾರು 20 ದಶಕಗಳಿಗೂ ಹೆಚ್ಚು ಕಾಲ ಈಡಿಗ ಸಮುದಾಯವನ್ನು ಓಲೈಸಿಕೊಳ್ಳುವ ತಂತ್ರಗಾರಿಕೆ ಬಳಸಿದ್ದರೇ ಹೊರತು ಸಮುದಾಯದ ಪ್ರಾಬಲ್ಯಕ್ಕೆ ಯಾವ ಕೊಡುಗೆ ನೀಡಿದ್ದಾರೆ ಎಂಬ ಪ್ರಶ್ನೆ ಇದೀಗ ಅನೇಕ ನಾಯಕರಲ್ಲಿ ಉದ್ಬವಿಸಿದೆ. ಇನ್ನೂ ವಿಶೇಷವೆಂಬಂತೆ ಇದಕ್ಕೆ ಪೂರಕವಾಗಿ ಬಿಜೆಪಿ ಮುಖಂಡರು ಸಮುದಾಯದ ಯಾವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು ಬಿಜೆಪಿ ಪಕ್ಷದ ಕೊಡುಗೆ ಏನು ಎಂಬುವ ಚುಚ್ಚು ಮಾತುಗಳು ಮುಖಂಡರ ಮುಜುಗರಕ್ಕೆ ಕಾರಣವಾದಂತಿದೆ.

ಇನ್ನು ಒಕ್ಕಲಿಗರ ಸಮುದಾಯದಲ್ಲೇ ಹಲವು ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದರೂ, ಅರ್ಹತೆ ಇದ್ದರೂ ಹುದ್ದೆಯ ಜವಾಬ್ದಾರಿ ಯಾಕೆ ಸಿಗಲಿಲ್ಲ. ನಮ್ಮನ್ನು ಶಾಸಕರಾಧಿಯಾಗಿ ಪಕ್ಷ ಕೈಬಿಟ್ಟಿತೇ ಎಂದು ಕೇಳಿಕೊಳ್ಳುತ್ತಿದ್ದಾರೆ. ಅಲ್ಲದೇ ಇನ್ನುಳಿದ ಸಣ್ಣ, ಅತೀ ಸಣ್ಣ ಸಮುದಾಯಗಳ ಮುಖಂಡರ ಬಗ್ಗೆ ಕಿಂಚಿತ್ತೂ ಯೋಚನೆಗಳಿಲ್ಲದೇ ಕೇವಲ ರಾಜಕೀಯ ಉದ್ದೇಶಗಳಿಗಾಗಿಯೇ ಜಾತೀ ಸಮೀಕರಣ ರೂಪುಗೊಳ್ಳುತ್ತಿದೆ ಎಂಬ ಅಸಮಾಧಾನ ಸೃಷ್ಟಿಯಾಗಿದೆ. ಪಕ್ಷಕ್ಕೆ ನಾವು ಯಾವುದೇ ತ್ಯಾಗ ಮಾಡಿದರೂ ಕೂಡ ಅವೆಲ್ಲವೂ ಕ್ಷಣಿಕ ಎಂಬ ಬಗ್ಗೆ ಇದೀಗ ಅರಿವಾಗುತ್ತಿರುವ ಪಕ್ಷದ ನಾಯಕರು ತಟಸ್ಥ ನಿಲುವು ಹೊಂದುವುದರ ಬಗ್ಗೆ ಯೋಚಿಸಲು ಆರಂಭಿಸಿದ್ದಾರೆ.

ಶಾಸಕ ಆರಗ ಜ್ಞಾನೇಂದ್ರ ಪಕ್ಷದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು ತಮ್ಮದೇನು ನಡೆಯುವುದಿಲ್ಲ ಎಂಬ ಬಗ್ಗೆ ಆಗಾಗ ಸುಳಿವು ನೀಡುತ್ತಾರೆ. ಕಾರ್ಯಕರ್ತರು, ಮುಖಂಡರ ಕೆಲಸಗಳಿಗೂ ಬೇರೆಯೊಬ್ಬರ ಸಲಹೆ ಸಹಕಾರ ಪಡೆಯುವ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಜನಸಾಮಾನ್ಯರ ಕೆಲಸಗಳಿಗೆ ಕಿಂಚಿತ್ತೂ ಬೆಲೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಶಿವಮೊಗ್ಗ ಜಿಲ್ಲಾ ಬಿಜೆಪಿಯ ಹಿರಿಯ ಮುಖಂಡರಾದ ಅಶೋಕ್‌ ಮೂರ್ತಿ, ಬೆಳ್ಳೂರು ತಿಮ್ಮಪ್ಪ, ಬೇಗುವಳ್ಳಿ ಸತೀಶ್‌, ನಿರಂಜನ್‌ ಕುಪ್ಪಗಡ್ಡೆ, ಸುರೇಶ್‌ ಸ್ವಾಮಿರಾವ್‌, ಡಾ. ಜ್ಞಾನೇಶ್‌ ಸೊರಬ, ಡಾ. ರಾಜನಂದಿನಿ ಕಾಗೋಡು, ರಾಜಶೇಖರ್‌ ಗಾಳಿಪುರ, ಹುನಗೋಡು ರತ್ನಾಕರ್‌, ಪ್ರಶಾಂತ್‌ ಕೆ.ಎಸ್., ಕವಿರಾಜ್‌ ಬೇಗುವಳ್ಳಿ, ಬಂಡಿ ದಿನೇಶ್‌ ಸೇರಿದಂತೆ ಅನೇಕ ಈಡಿಗ ಮುಖಂಡರು ಬಿಜೆಪಿ ಬೆನ್ನಿಗೆ ನಿಂತು ದುಡಿಯುತ್ತಿದ್ದಾರೆ.

ತೀರ್ಥಹಳ್ಳಿಯಲ್ಲಿ ಬಿಜೆಪಿ ಸಂಘಟನೆ ಬಲವರ್ಧನೆಗೆ ಶ್ರಮಿಸುತ್ತಿರುವ ಆರ್‌.ಮದನ್‌, ಚಂದುವಳ್ಳಿ ಸೋಮಶೇಖರ್‌, ಸೊಪ್ಪುಗುಡ್ಡೆ ರಾಘವೇಂದ್ರ, ಬೇಗುವಳ್ಳಿ ಕವಿರಾಜ್‌, ಬೇಗುವಳ್ಳಿ ಸತೀಶ್‌, ಅಶೋಕಮೂರ್ತಿ, ಬಿ.ಆರ್.‌ ಮೋಹನ್‌, ಟಿ. ಮಂಜುನಾಥ್‌, ಸಂದೇಶ ಜವಳಿ, ಹೊಸಳ್ಳಿ ಸುಧಾಕರ್‌, ಮೇಗರವಳ್ಳಿ ಪ್ರಮೋದ್ ಹೆಗ್ಡೆ, ಕುಡುಮಲ್ಲಿಗೆ ಬಾಸ್ಕರ್‌ ಶೆಟ್ಟಿ, ಕುಡುಮಲ್ಲಿಗೆ ಅಂಜೂರ ಸೇರಿದಂತೆ ಅನೇಕ ಉತ್ಸಾಹಿ ಮುಖಂಡರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಆಗುಂಬೆ ಭಾಗದಲ್ಲಿ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದ ಹಸಿರುಮನೆ ನಂದನ್ ಪಕ್ಷದ ಎಲ್ಲಾ ನಿರೀಕ್ಷೆಗಳನ್ನು ಕೈಚೆಲ್ಲಿದ್ದು ಯಾವ ನಿರ್ಧಾರವನ್ನು ಬೇಕಾದರು ತಳೆಯುವ ಸಾಧ್ಯತೆ ಹೆಚ್ಚಿದಂತೆ ಕಾಣಿಸಿಕೊಳ್ಳುತ್ತಿದೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸುಸಂದರ್ಭದಲ್ಲಿ ದೇಶದಲ್ಲಿ ಅಯೋಧ್ಯ ರಾಮನ ಪ್ರತಿಷ್ಠಾಪನೆಯಿಂದ ಸಂತೃಪ್ತಗೊಂಡಿದ್ದ ಕಾರ್ಯಕರ್ತರು ಹೇಗಾದರೂ ಮಾಡಿ ಪಕ್ಷವನ್ನು ಮತ್ತಷ್ಟು ಬಲವರ್ಧನೆ ಮಾಡಬೇಕೆಂದು ಉತ್ಸಾಹದಲ್ಲಿ ಹೊರಟಿದ್ದವರಿಗೆ ಈ ನಡೆ ಅತೀವ ನೋವಿಗೆ ಕಾರಣವಾಗಿದೆ. ಕಾರ್ಯಕರ್ತರ ಭಿನ್ನಮತದ ಶಾಪದ ಮುಂದೆ ರಾಮನ ಪವಾಡ ಕೈಚೆಲ್ಲಿದರು ಅಚ್ಚರಿ ಪಡಬೇಕಿಲ್ಲ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post