ನವೆಂಬರ್ 17: ಡಿಬಿಸಿ ಅಭಿಮಾನಿ ಬಳಗದಿಂದ ಶ್ರದ್ಧಾಂಜಲಿ ಸಭೆ

ಜಾತ್ಯಾತೀತ ನಿಲುವಿನಿಂದಲೇ ಬದುಕಿದ ವ್ಯಕ್ತಿತ್ವ
ವರಾಹಿ ಸಂತ್ರಸ್ತರಿಗೆ ಆಸರೆಯಾದ ಮುತ್ಸದಿ ರಾಜಕಾರಣಿ ಡಿ.ಬಿ. ಚಂದ್ರೇಗೌಡ
ಶಾಸಕಾಂಗದ ನಾಲ್ಕು ಸದನಗಳಲ್ಲಿ ಕಾರ್ಯ ನಿರ್ವಹಿಸಿದ್ದ ಮುತ್ಸದಿ ರಾಜಕಾರಣಿ, ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ ಡಿ.ಬಿ. ಚಂದ್ರೇಗೌಡರ ಅಗಲಿಕೆ ನೋವುಂಟು ಮಾಡಿದೆ. ದ್ವೇಷರಹಿತ ಜಾತ್ಯಾತೀತ ನಿಲುವಿನಿಂದ ಜನಮಾನದಲ್ಲಿ ನೆಲೆ ಊರಿರುವ ಆದರ್ಶ ಜನಪ್ರತಿನಿಧಿ ಚಂದ್ರೇಗೌಡ. ವರಾಹಿ ಮುಳುಗಡೆ ಸಂತ್ರಸ್ತರ ಬಗೆಗಿನ ವಿಶೇಷ ಕಾಳಜಿಯಿಂದ ಸರ್ಕಾರದ ಹಂತದಲ್ಲಿ ಹೆಚ್ಚಿನ ಪರಿಹಾರ ಕೊಡಿಸಿದ್ದರು ಎಂದು ಎಂದು ಸಂಚಾಲಕ ಡಿ.ಎಸ್. ವಿಶ್ವನಾಥ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ನೆನಪಿಸಿಕೊಂಡರು.

ಕಾಂಗ್ರೆಸ್, ಜನತಾ ಪರಿವಾರ, ಬಿಜೆಪಿ ಪಕ್ಷಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು ಯಾವ ಸಿದ್ಧಾಂತಕ್ಕೂ ಅಂಟಿಕೊಳ್ಳದೇ ತಾನು ನಂಬಿದ ಸೈದ್ದಾಂತಿಕ ನಿಲುವಿನಿಂದಲೇ ರಾಜಕಾರಣವನ್ನು ಮಾಡಿದ್ದಾರೆ. ರಾಜ್ಯ, ದೇಶದಲ್ಲಿ ಅತೀ ದೊಡ್ಡ ಹುದ್ದೆ ಅಲಂಕರಿಸಿ ಆಡಳಿತದ ಭಾಗವಾಗಿದ್ದರೂ ದ್ವೇಶ ರಾಜಕಾರಣ ಮಾಡಲಿಲ್ಲ ಎಂದು ಹೇಳಿದರು.

ವಿಧಾನಸಭಾಧ್ಯಕ್ಷ ಹುದ್ದೆಯಲ್ಲಿದ್ದಾಗ ಲಂಡನ್ನ ಕನ್ನಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ಸ್ಪೀಕರ್ ಗಳ ಸಮಾವೇಶದ ಉಪಾಧ್ಯಕ್ಷರಾಗಿ ದೇಶದ ಘನತೆ ಎತ್ತಿಹಿಡಿದಿದ್ದಾರೆ. ಕ್ಷೇತ್ರದ ಗ್ರಾಮೀಣ ರಸ್ತೆ, ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜು, ಸಂಪರ್ಕ ಸೇತುವೆಗಳನ್ನು ನೀಡಿದ್ದರು. ಗೋಪಾಲಗೌಡರ ನಂತರ ತೀರ್ಥಹಳ್ಳಿಯ ಘನತೆಯನ್ನು ರಾಜ್ಯ ಗುರುತಿಸುವಂತೆ ಮಾಡಿದ್ದರು ಎಂದರು.

ಚಂದ್ರೇಗೌಡರ ರಾಜಕೀಯ ಅವಧಿಯಲ್ಲಿ ಕ್ಷೇತ್ರಕ್ಕೆ ಮತ್ತು ರಾಜ್ಯಕ್ಕೆ ನೀಡಿದ ಕಾರ್ಯಕ್ರಮ, ಅಭಿವೃದ್ಧಿಯ ಅವಲೋಕನ ದೃಷ್ಟಿಯಿಂದ  ನವೆಂಬರ್ 17ರ ಬೆಳಿಗ್ಗೆ 10.30ಕ್ಕೆ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಡಿಬಿಸಿ ಅಭಿಮಾನಿ ಬಳಗದಿಂದ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ. ಅಭಿಮಾನಿಗಳು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಿ.ಎಸ್. ವಿಶ್ವನಾಥ ಶೆಟ್ಟಿ ಕೋರಿದರು.

ಪತ್ರಿಕಾಗೋಷ್ಟಿಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಡಿಬಿಸಿ ಅಭಿಮಾನಿ ಬಳದ ಸದಸ್ಯರಾದ ಬಿ.ಆರ್. ರಾಘವೇಂದ್ರ ಶೆಟ್ಟಿ, ಹಾಲಿಗೆ ನಾಗರಾಜ್, ವಿಲಿಯಂ ಮಾರ್ಟಿಸ್, ಡಾ.ಬಂಗಾರಪ್ಪ ಇದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post