ಗುಡ್ಡೇಕೇರಿ ಸರ್ಕಾರಿ ಶಾಲೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ

ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಸ್ಪರ್ಧೆ
ವಿದ್ಯಾರ್ಥಿಗಳ ಸಾಧನೆಗೆ ಗ್ರಾಮಸ್ಥರ ಅಭಿನಂದನೆ

ಕಳೆದೆರಡು ವರ್ಷಗಳಿಂದ ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಗುಡ್ಡೇಕೇರಿ ಶಾಲೆಯ ಮಕ್ಕಳು ವಿಶೇಷ ಸಾಧನೆ ಮಾಡಿದ್ದಾರೆ. ಈ ವರ್ಷ ತಾಲೂಕು ಹಂತದಿಂದಲೇ ಚಾಂಪಿಯನ್ಸ್ ಪಟ್ಟ ಪಡೆದುಕೊಂಡು, ಜಿಲ್ಲಾ ಮಟ್ಟಕ್ಕೆ ಕಾಲಿಟ್ಟ ಖೋ ಖೋ ತಂಡಗಳು ರನ್ನರ್ ಆಪ್ ಪ್ರಶಸ್ತಿ ಪಡೆದಿವೆ. ಬೆಂಗಳೂರು ವಿಭಾಗ ಮಟ್ಟಕ್ಕೆ ಅಶ್ವಿನ್, ಅಪ್ವಾನ್, ಶಾಹಿಲ್, ಅಕ್ಷತಾ, ವರ್ಷಾ, ಸಹನಾ ಆಯ್ಕೆಯಾದರು. ಸಹನಾ ಹಾಲ್ಕುಂದ, ವರ್ಷಾ ಮೆದೋಳಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಐತಿಹಾಸಿಕ ಸಾಧನೆ‌ ಮಾಡಿದ್ದಾರೆ.

ಈ ಸಾಧನೆಗೆ ಕಾರಣರಾದ ಎಲ್ಲಾ ಮಕ್ಕಳಿಗೂ, ತರಬೇತಿ ನೀಡಿದ  ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಬೀರಪ್ಪ ಇಟಗಿ, ಕ್ರೀಡೆಯ ಬೆನ್ನೆಲುಬು ಆಗಿ ನಿಂತ ವಿರೇಶ್ ಸರ್, ಖೋ ಖೋ ಕೋಚಿಂಗ್ ಜವಾಬ್ದಾರಿ ಹೊತ್ತ ಪ್ರೀತಿ ಶರತ್, ಶಾಲೆಯಲ್ಲಿ ದಶಕದಿಂದಲೂ ತರಬೇತಿ ನೀಡುತ್ತಾ ಬಂದ ಬೆನ್ನಿ ತೀರ್ಥಹಳ್ಳಿ, ಮಂಜು ಕುರುವಳ್ಳಿ, ಅಭಿ ರಂಜದಕಟ್ಟೆ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ನಿರಂಜನ್ ಮೂರ್ತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಾದ ಗಣೇಶ್, ಅವರಿಗೂ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್, ರೇವತಿ ಮೇಡಂ, ಆನಂದನ್, ಮಹಂತೇಶ್, ಶೌಕತ್ ಆಲಿ, ಸೌಮ್ಯ,
ಪ್ರದೀಪ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಎಂ ಜಿ ಹಾಗೂ ಎಲ್ಲಾ ಸದಸ್ಯರಿಗೂ, ಜನಪ್ರತಿನಿಧಿಗಳಿಗೂ, ಗ್ರಾಮಸ್ಥರಿಗೂ, ಹಿರಿಯ ವಿದ್ಯಾರ್ಥಿಗಳಿಗೂ, ಬೆಂಗಳೂರು ವಿಭಾಗ ಮಟ್ಟದಲ್ಲಿ ಆಡಿದ ಅಕ್ಷತಾ ಹೆಚ್ ಯು, ಆಪ್ವಾನ್,‌ ಶಾಹಿಲ್, ಅಶ್ವಿನ್, ಮಕ್ಕಳಿಗೆ ಕ್ರೀಡಾ ಸಮವಸ್ತ್ರ ನೀಡಿದ ಸುರೇಶ್ ಇಂಜಿನಿಯರ್ ಕತಾರ್, ಮಂಜು ಕುರುವಳ್ಳಿ, ವನಮಾಲಯ್ಯ ಇಳಿಮನೆ ಇವರಿಗೂ ಹಾಗೂ ನಮ್ಮ ಶಾಲೆಯ ಬೆನ್ನೆಲುಬು ಸ್ಮಿತಾ ಮೇಡಂ ಹಾಗೂ  ಕ್ವೆಸ್ ಕಾರ್ಪ್ ಬೆಂಗಳೂರು, ಗುಡ್ಡೇಕೇರಿ, ಹೊನ್ನೆತಾಳು ಪ್ರಾಥಮಿಕ ಶಾಲಾ ಬಳಗಕ್ಕೂ, ಸಹಕರಿಸಿದ ದಾನಿಗಳನ್ನು ಶಾಲಾಭಿವೃದ್ಧಿ ಸಮಿತಿ ಸ್ಮರಿಸಿಕೊಂಡಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post