ಭೀಮೇಶ್ವರ ಸಂಗಮ ಉಳಿಸಿ ಹೋರಾಟಕ್ಕೆ ತಾರ್ಕಿಕ ಹುರುಳಿಲ್ಲ

ಯೋಜನೆ ರದ್ದು ಮಾಡಲು ಅಪಪ್ರಚಾರದ ಹೋರಾಟ
ಬಹುಗ್ರಾಮ ಕುಡಿಯುವ ನೀರು ತೀರ್ಥಹಳ್ಳಿಗೆ ಅಗತ್ಯ
ಯೋಜನೆ ಪರವಾಗಿ ನಿರ್ಣಯ ಪಡೆದಿದ್ದೇವೆ – ಗ್ರಾ.ಪಂ. ಒಕ್ಕೂಟದ ಅಧ್ಯಕ್ಷ ಟಿ.ಜೆ. ಅನಿಲ್‌

ತೀರ್ಥಹಳ್ಳಿ ತಾಲ್ಲೂಕಿನ ಭೀಮನಕಟ್ಟೆ ಸಮೀಪದಲ್ಲಿ 344 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಟಾನಕ್ಕೆ ಕಾರ್ಯಾದೇಶ ಸಿಕ್ಕಿದೆ. ಯೋಜನೆ ಆರಂಭಿಸದಂತೆ ಸ್ಥಳೀಯರಿಂದ ಅಪಪ್ರಚಾರ ನಡೆಯುತ್ತಿದೆ. ಭೀಮೇಶ್ವರ ಸಂಗಮ ಉಳಿಸಿ ಹೋರಾಕ್ಕೆ ಯಾವುದೇ ತಾರ್ಕಿಕ ನಿಲುವಿಲ್ಲ ಎಂದು ಶುಕ್ರವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷ ಟಿ.ಜೆ. ಅನಿಲ್‌ ಹೇಳಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕುಡಿಯುವ ನೀರಿಗಾಗಿ ತೆರೆಯಲಾದ ಬೋರ್‌ವೆಲ್‌ಗಳಲ್ಲಿ ಪ್ಲೋರೈಡ್‌ ಅಂಶ ಕಂಡು ಬಂದಿದೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಜನರಿಗೆ ಕುಡಿಯುವ ನೀರಿನ ಅಗತ್ಯ ಇದೆ. ಯಾವುದೇ ನೀರಿನ ಮೂಲದಿಂದಲಾದರೂ ನೀರು ಕೊಡಿ. ಅನೇಕ ಪರಿಶಿಷ್ಟ ಕಾಲೋನಿಗಳಲ್ಲಿ ಇಂದಿಗೂ ನೀರಿಗಾಗಿ ಪರದಾಡುತ್ತಿದ್ದಾರೆ. ಕೆರೆ, ಬಾವಿ, ಬೋರ್‌ವೆಲ್‌ ಅಶ್ರಿತ ಗ್ರಾಮ ಪಂಚಾಯಿತಿಗಳು ಶುದ್ಧ ನೀರು ಪೂರೈಕೆಗಾಗಿ ಯೋಜನೆ ಪರವಾಗಿ ನಿರ್ಣಯ ತೆಗೆದುಕೊಂಡಿದ್ದೇವೆ. ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದರೂ ನೀರಿನ ಕೊರತೆ ಇದೆ. ಯೋಜನೆ ರದ್ದಾದರೆ ನಮ್ಮ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

ಭೀಮನಕಟ್ಟೆ ಸಮೀಪದ ತುಂಗಾ ನದಿಯಿಂದ ನೀರು ಎತ್ತುವುದರಿಂದ ನದಿ ಹರಿವು ನಿಲ್ಲುತ್ತದೆ. ರೈತರ ಜಮೀನಿಗೆ ನೀರು ವ್ಯತ್ಯಯವಾಗುತ್ತದೆ. ಆಣೆಕಟ್ಟು ನಿರ್ಮಾಣ ಮಾಡುತ್ತಾರೆ ಎಂಬ ಅಪಪ್ರಚಾರ ಆರಂಭಗೊಂಡಿದೆ. ಯಾವುದೇ ಕಾರಣಕ್ಕೂ
ಯೋಜನೆ ರದ್ದಾಗಲು ಬಿಡುವುದಿಲ್ಲ. ಪಂಚಾಯಿತಿ ಪಟ್ಟದ ನೀರಿನ ಬವಣೆ ತೀರಿಸಲು ಸುಸಜ್ಜಿತ ನೀರಿನ ಮೂಲದಿಂದ ನೀರು ಕೊಡಿ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ರವೀಶ್‌ ಹೊಸ್ಕೆರೆ, ಗುಡ್ಡೇಕೊಪ್ಪ ಗ್ರಾ.ಪಂ. ಅಧ್ಯಕ್ಷ ರಾಘವೇಂದ್ರ ಪವಾರ್‌, ಸಿಂಗನಬಿದರೆ ಗ್ರಾ.ಪಂ. ಅಧ್ಯಕ್ಷ ನವೀನ್‌ ಕುಳ್ಳುಂಡೆ, ನೆರಟೂರು ಅಧ್ಯಕ್ಷೆ ಕವಿತಾ ಭಾಸ್ಕರ್‌, ಶೇಡ್ಗಾರ್‌ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್‌, ಹೆದ್ದೂರು ಗ್ರಾ.ಪಂ. ಅಧ್ಯಕ್ಷ ಲೋಕೇಶ್‌, ಬೆಜ್ಜವಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಸುಬ್ರಹ್ಮಣ್ಯ, ಆರಗ ಗ್ರಾ.ಪಂ. ಅಧ್ಯಕ್ಷ ಸತೀಶ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post