ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ
ಜಿಲ್ಲಾ ಪೊಲೀಸ್ ಇಲಾಖೆ, ಆಗುಂಬೆ ಪೊಲೀಸ್ ಠಾಣೆ, ನಕ್ಸಲ್ ನಿಗ್ರಹ ಪಡೆ, ಜಿಲ್ಲಾ ಪಂಚಾಯಿತಿ ಶಿವಮೊಗ್ಗ, ತಾಲ್ಲೂಕು ಪಂಚಾಯಿತಿ ತೀರ್ಥಹಳ್ಳಿ, ಗ್ರಾಮ ಪಂಚಾಯಿತಿ ಆಗುಂಬೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ, ರಕ್ತನಿಧಿ ಕೇಂದ್ರ ಮೆಗ್ಗಾನ್, ಲಯನ್ಸ್ ಕ್ಲಬ್ ಆಗುಂಬೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೀಣಾ ಗಿರೀಶ್ ವಹಿಸಿದ್ದರು. ಪೊಲೀಸ್ ಉಪಾಧೀಕ್ಷಕ ಗಜಾನನ ವಾಮನ ಸುತಾರ ಹಾಗೂ ಪೊಲೀಸ್ ತೀರ್ಥಹಳ್ಳಿ ವೃತ್ತ ನಿರೀಕ್ಷಕ ಅಶ್ವಥ್ ಗೌಡ, ಆಗುಂಬೆ ಪೊಲೀಸ್ ಉಪನಿರೀಕ್ಷಕ ರಂಗನಾಥ ಅಂತರಗಟ್ಟಿ, ಸಿಬ್ಬಂದಿಗಳಾದ ಅನಿಲ್ ಕುಮಾರ್, ಸುನಿಲ್, ಪ್ರಮುಖರಾದ ಅರುಣ್ ಗುಡ್ಡೆಕೇರಿ, ಮಯೂರ್ ಹೆಗಡೆ, ಸುಧೀರ ಮಲ್ಯ ಇದ್ದರು.


.jpeg)
.jpeg)

