13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ
ಯುವ ಪತ್ರಕರ್ತ ನವೀನ್ ಟಿ.ಆರ್. ಆಯ್ಕೆ

ತೀರ್ಥಹಳ್ಳಿ ವಿಶ್ವಕರ್ಮ ಸೌಹಾರ್ದ ಸಹಕಾರಿ ಸಂಘ 2023-28ರ ವರೆಗಿನ 5 ವರ್ಷಗಳ ಅವಧಿಗೆ ಶನಿವಾರ ಚುನಾವಣೆ ಪ್ರಕ್ರಿಯೆ ನಡೆಯಿತು. 13 ಸಂಖ್ಯಾಬಲದ ಸೊಸೈಟಿಯಲ್ಲಿ 2 ಮಹಿಳೆ, 2 ಬಿಸಿಎಂ 'ಎ' ಮತ್ತು 9 ಸಾಮಾನ್ಯ ವರ್ಗಕ್ಕೆ ನಿರ್ದೇಶಕ ಸ್ಥಾನ ಮೀಸಲು ನಿಗಧಿ ಪಡಿಸಲಾಗಿತ್ತು.
ಸ್ಫರ್ಧಿಸಿದ್ದ 24 ಸ್ಪರ್ಧಿಗಳ ಪೈಕಿ ಯುವ ಪತ್ರಕರ್ತ ನವೀನ್ ಟಿ.ಆರ್., ಉಪೇಂದ್ರ, ಶಂಕರಾಚಾರ್ ಬಿ.ಜಿ, ಮನೋಜ್, ಚಂದ್ರಶೇಖರ್, ನಾಗಪ್ಪ ಆಚಾರ್, ಜ್ಯೋತಿ ಎ.ಎಸ್., ಭಾಸ್ಕರ ಸಿ, ಮೋಹನ್ ಎಸ್.ಜಿ., ರಾಘವೇಂದ್ರ ಎನ್, ಶಾರದ, ರಾಘವೇಂದ್ರ ಪಿ, ಮಂಜುನಾಥ್ ಎಸ್ ಗೆಲುವು ಸಾಧಿಸಿದ್ದಾರೆ.