ಶರಾವತಿ ಸಂಸ್ಥೆಗೆ 2.20 ಕೋಟಿ ಲಾಭ

ಯುವ ಸಹಕಾರಿ ಹೆಚ್.ವಿ. ಅಜಿತ್‌ ನೇತೃತ್ವ
ಶರಾವತಿ ಸಂಸ್ಥೆ 23ನೇ ವರ್ಷಕ್ಕೆ ಪಾದಾರ್ಪಣೆ

ಶರಾವತಿ ಪತ್ತಿನ ಸಹಕಾರ ಸಂಘ 110 ಕೋಟಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ ಹೊಂದಿಎ. ವಾರ್ಷಿಕ 174 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ನಡೆಸಿ 2.20 ಕೋಟಿ ರೂಪಾಯಿ ನಿವ್ವಳ ಲಾಭ ಪಡೆದಿದೆ ಎಂದು ಅಧ್ಯಕ್ಷ ಹೆಚ್.ವಿ. ಅಜಿತ್‌ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳು ನಿರ್ಲಕ್ಷಿಸಿದ ಮದ್ಯಮ, ಕೆಳ ಮದ್ಯಮ ವರ್ಗದವರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ನೂರಾರು ಕುಟುಂಬಗಳಿಗ ಆರ್ಥಿಕ ಉತ್ತೇಜನಕ್ಕೆ ಸಂಸ್ಥೆ ಸಹಕಾರಿಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಹಕಾರ ಸಂಸ್ಥೆಗಳು ನಷ್ಟದಿಂದ ಅವನತಿಗೆ ತಲುಪುತ್ತಿದ್ದ ಕಾಲಘಟ್ಟದಲ್ಲಿ ಕಡಿಮೆ ಬಂಡವಾಳದಿಂದ ಸಂಸ್ಥೆ ಆರಂಭಿಸಲಾಗಿದೆ. 2001ರಲ್ಲಿ 1800 ಷೇರುದಾರ ಸದಸ್ಯರು ಉತ್ತೇಜನ ನೀಡಿದ್ದರಿಂದ ಇದೀಗ ನೂರಾರು ಕುಟುಂಬಕ್ಕೆ ಸಹಕಾರವಾಗಿದೆ. ವಾರ್ಷಿಕವಾಗಿ ಇದೀಗ 46.66 ಕೋಟು ರೂಪಾಯಿ ಸಾಲ ವಿತರಿಸುವ ಹಂತಕ್ಕೆ ಸಂಸ್ಥೆ ಸದೃಢವಾಗಿ ಬೆಳೆದಿದೆ ಎಂದರು.

23ನೇ ವರ್ಷಕ್ಕೆ ಸಂಸ್ಥೆ ಕಾಲಿಟ್ಟಿದ್ದು ಷೇರುದಾರರಿಗೆ ಶೇಕಡಾ 10 ರಷ್ಟು ಡಿವಿಡೆಂಟ್‌ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ಆಡಿಟ್‌ ವರ್ಗೀಕರಣದಲ್ಲಿ
ಗ್ರೇಡ್‌ ಪಡೆದುಕೊಂಡಿದೆ. ಸಂಸ್ಥೆಯ ಸರ್ವ ಸದಸ್ಯರ ಮಹಾಸಭೆಯನ್ನು ಸೆಪ್ಟೆಂಬರ್‌ 11 ರಂದು ಸೊಪ್ಪುಗುಡ್ಡೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಷೇರುದಾರರು ಸಭೆಗೆ ಆಗಮಿಸುವಂತೆ ಕೋರಿದರು.

ಪತ್ರಿಕಾಗೋಷ್ಟಿಯಲ್ಲಿ ಸ್ಥಾಪಕ ಅಧ್ಯಕ್ಷ ಬಸವಾನಿ ವಿಜಯದೇವ್‌, ಕಾರ್ಯದರ್ಶಿ ಸುನೀತ ಬಿ.ಎಂ. ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post