ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪಿಸಿಲ್ಲ

ದಲಿತ ಜನ ದಡ್ಡರು ಹ್ಯಾಗೆ ಬೇಕಾದರೂ ಮರಳು ಮಾಡಬಹುದು
ಕಾಂಗ್ರೆಸ್‌ ದಲಿತ ವಿರೋಧಿ ನೀತಿ ಪ್ರಶ್ನಿಸಬೇಕಲ್ವಾ…
ನಾನು ಬದುಕಿರುವುದೇ ಕಿಮ್ಮನೆಗೆ ಅಸಹನೆ
– ಆರಗ ಜ್ಞಾನೇಂದ್ರ

ವಿಧಾನಸಭಾ ಚುನಾವಣೆಯಲ್ಲಿ ನಾನು ಗೆದ್ದು ನೀವು ಸೋತಿದ್ದೀರಿ. ಆ ಸೋಲನ್ನು ಸ್ವೀಕಾರ ಮಾಡುವುದಕ್ಕೂ ಒಂದು ಸಂಸ್ಕಾರ ಬೇಕು. ನಾನು 5 ಸಾರಿ ಸೋತಿದ್ದೇನೆ. ಸೋತಾಗ ನಿಮ್ಮ ಬಗ್ಗೆ ಬೆರಳು ತೋರಿಸುವುದು, ಚಾರಿತ್ರ್ಯ ಹರಣ ಮಾಡುವುದನ್ನು ಮಾಡಲಿಲ್ಲ. ನೀವೀಗಾ ಸೋಲಿನ ಜಿದ್ದು ತೀರಿಸುವ ಪ್ರಯತ್ನ ಮಾಡುತ್ತಿದ್ದೀರಿ. ನನ್ನನ್ನು ನೇಣುಗಂಬಕ್ಕೆ ಏರಿಸಬೇಕು ಎಂಬುದನ್ನು ಹೇಳಿದನ್ನು ಕೇಳಿಲ್ಲ. ಆ ಮಟ್ಟಕ್ಕೂ ಹೋಗಿದ್ದೀರಿ. ನಾನು ಜೀವಂತವಾಗಿ ಬದುಕಿರುವುದೇ ನಿಮಗೆ ಸಹನೆ ಇಲ್ಲ ಎಂದು ಪರೋಕ್ಷವಾಗಿ ಕಿಮ್ಮನೆ ರತ್ನಾಕರ್‌ ಹೆಸರು ಹೇಳದೆ ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ.

ಆಡದ ಮಾತುಗಳನ್ನು ಹಿಡಿದುಕೊಂಡು ರಾಜ್ಯಾದ್ಯಂತ ಸುದ್ದಿ ಮಾಡುವ ಪ್ರಯತ್ನ ವಿರೋಧಿಗಳು ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿ ಯಾವುದೇ ಮಾತುಗಳನ್ನು ಆಡಿಲ್ಲ. ವಿಧಾನಸಭೆಯಲ್ಲಿ ಅವರೊಂದಿಗೆ ಕುಳಿತು ಕೆಲಸ ಮಾಡಿದ್ದೇನೆ. ಯಾವುದೇ ಸಮುದಾಯದ ವಿರುದ್ಧವಾಗಿ ವೈಯಕ್ತಿಕ ಬಣ್ಣ, ಜಾತಿನಿಂದನೆ ನನ್ನಿಂದ ಆಗಿಲ್ಲ. ಅನಾವಶ್ಯಕವಾಗಿ ಖರ್ಗೆ ಹೆಸರನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಶುಕ್ರವಾರ ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಆರಗ ಜ್ಞಾನೇಂದ್ರ ಆರೋಪಿಸಿದರು.

ವೈಯಕ್ತಿಕವಾಗಿ ನಿಂದಿಸಿ ಕೀಳುಮಟ್ಟದ ರಾಜಕೀಯ ಮಾಡುವುದಿಲ್ಲ. ವಿಷಾಧ ವ್ಯಕ್ತಪಡಿಸಿದ್ದರು ಕಾಂಗ್ರೆಸ್‌ ಮಿತ್ರರು ಪ್ರಚೋದನೆ ನೀಡಿ ಪ್ರಕರಣ ದಾಖಲಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಹೆದರುವ ಪ್ರಶ್ನೆ ಇಲ್ಲ. ಎದುರಿಸುವ ಶಕ್ತಿ ದೇವರು ಕೊಟ್ಟಿದ್ದಾನೆ. ನಾನು ಮುತ್ಸದಿ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪಿಸಿದ್ದರೆ ಯಾವ ಶಿಕ್ಷೆ ನೀಡಿದರು ಅನುಭವಿಸಲು ಸಿದ್ದ. ಬಾಯಿ ತಪ್ಪಿನಿಂದ ಆಗಿದೆ ಎಂದಿದ್ದರು ಕಾಂಗ್ರೆಸ್‌ ಖರ್ಗೆ ಹೆಸರು ಪ್ರಸ್ತಾಪಿಸಿ ಅವರನ್ನು ಸಣ್ಣವರನ್ನಾಗಿಸುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಕಸ್ತೂರಿ ರಂಗನ್‌ ವರದಿ ಜಾರಿಗೆ ಬದ್ಧ ಎಂದು ಹೇಳಿಕೆ ನೀಡಿದ್ದು ಮಲೆನಾಡಿಗರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂಬ ಆತಂಕ ಹೆಚ್ಚಾಗಿದೆ. ಬಯಲು ಸೀಮೆಯ ಜನರು ಅತ್ಯಂತ ಶ್ರಮಜೀವಿಗಳು. ಬಿಸಿಲಿನ ಬೇಗೆಯಲ್ಲಿಯೂ ಹೊಲಗಳಲ್ಲಿ ಕಷ್ಟಪಟ್ಟು ದುಡಿದು ಬದುಕುತ್ತಾರೆ. ಅದನ್ನು ಪ್ರಸ್ತಾಪಿಸುವಾಗ ತಪ್ಪುಗಳು ಆಗಿವೆ. ಅವರು ಮಲೆನಾಡಿನ ಅರಣ್ಯದ ಕುರಿತು ವಿಶೇಷ ಆಸಕ್ತಿ ವಹಿಸಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಿದ್ದರಿಂದ ಅಪಾರ್ಥ ಸೃಷ್ಟಿಯಾಗಿದೆ. ಅರಣ್ಯ ಸಚಿವರನ್ನು ಕಿಚಾಯಿಸುವುದು, ಅವಮಾನಿಸುವುದು ನನ್ನಿಂದ ಆಗಿಲ್ಲ ಎಂದರು.

ಕಸ್ತೂರಿ ರಂಗನ್‌ ವರದಿ ಏಕವ್ಯಕ್ತಿ ಅಭಿಪ್ರಾಯವಾಗಿದ್ದು ಮಲೆನಾಡಿನ ವಾಸ್ತವ ಚಿತ್ರಣ ದಾಖಲಾಗಿಲ್ಲ. ರಾಜ್ಯ ಸರ್ಕಾರ ವಕೀಲರನ್ನು ನೇಮಿಸಿ ಹಸಿರುಪೀಠಕ್ಕೆ ನಿವೇದನೆ ಮಾಡಿಕೊಳ್ಳುವ ಅಗತ್ಯ ಇದೆ. ಅಡಿಕೆ ಕ್ಯಾನ್ಸರ್‌ ಕಾರಕ ಎಂದು ವರದಿ ನೀಡಿದ್ದೇ ಕಾಂಗ್ರೆಸ್‌ ಸರ್ಕಾರ. ಪಶ್ಚಿಮ ಘಟ್ಟದ ಜನರ ರಕ್ಷಣೆಯ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು. ಜನರ ಮುಂದೆ ದ್ವಿಮುಖ ನೀತಿ ಅನುಸರಿಸುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು

ಪತ್ರಿಕಾಗೋಷ್ಟಿಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಪರಿಶಿಷ್ಟ ಮೋರ್ಚಾ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್‌, ಮುಖಂಡರಾದ ನಾಗರಾಜ ಶೆಟ್ಟಿ, ಆರ್.‌ ಮದನ್‌, ನವೀನ್‌ ಹೆದ್ದೂರು, ಬೇಗುವಳ್ಳಿ ಕವಿರಾಜ್‌, ರಕ್ಷಿತ್‌ ಮೇಗರವಳ್ಳಿ, ಚಂದುವಳ್ಳಿ ಸೋಮಶೇಖರ್‌, ಸಂದೇಶ್‌ ಜವಳಿ ಇದ್ದರು.

ದಲಿತ ಜನ ದಡ್ಡರು

ದಲಿತರ ಬಗ್ಗೆ ಕಾಂಗ್ರೆಸ್‌ ನಿಲುವು ಏನು ಎಂಬುದು ಈಗಾಗಲೇ ನಮಗೆ ಗೊತ್ತಿದೆ. ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ ದಲಿತ ಶಾಸಕರು ನಿಮ್ಮ ಪಕ್ಷದವರೇ ಆದರು ಅವರ ಮನೆಗೆ ಬೆಂಕಿ ಹಾಕಿದವರನ್ನು ಅಮಾಯಕರು ಎಂದು ಮೊನ್ನೆಮೊನ್ನೆ ಹೇಳಿದ್ದೀರಿ. ಬಹಳ ಜನ ಬಿಡುಗಡೆಯಾದರೂ ಆಗಬಹುದು. ಹಾಗಾಗಿ ದಲಿತರ ಬಗ್ಗೆ ನಿಮ್ಮ ನಿಲುವು ಏನು. ಹಾಗೇನೆ 34,000 ಕೋಟಿ ರೂಪಾಯಿ ಬಜೆಟ್‌ ಪುಸ್ತಕದಲ್ಲಿ ತೋರಿಸಿ 17,000 ಕೋಟಿ ರೂಪಾಯಿ ಗ್ಯಾರಂಟಿ ಯೋಜನೆಗೆ ತೆಗೆದಿದ್ದೀರಿ. ಯಾಕೆ ಅಂತಂದ್ರೆ ಈ ದಲಿತ ಜನ ದಡ್ಡರು. ಹ್ಯಾಗೆ ಬೇಕಾದರೂ ಅವರನ್ನು ಮರಳು ಮಾಡಬಹುದು ಅನ್ನುವಂತಹದ್ದು ನಿಮ್ಮ ಉದ್ದೇಶ ಇರಬಹುದು. ಆದರೆ ಬಿಜೆಪಿ ಅದರ ವಿರುದ್ಧ ಪ್ರತಿಭಟನೆ ಮಾಡುತ್ತದೆ. ತೀರ್ಥಹಳ್ಳಿ ಮಿತ್ರರು ದಲಿತ ಮುಖಂಡರ ಮೂಲಕ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ. ಆ ದಲಿತ ಮುಖಂಡರಿಗೆ ನಾನು ಕೇಳುತ್ತೇನೆ. ರಾಜ್ಯ ಸರ್ಕಾರ ಪರಿಶಿಷ್ಟರ ಅಭಿವೃದ್ಧಿಗೆ ತೆಗೆದಿಟ್ಟ ಹಣವನ್ನು ಅಪ್ರತ್ಯಕ್ಷವಾಗಿ ಗ್ಯಾರಂಟಿಗೆ ಹಾಕಿದ್ದಾರಲ್ಲ. ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು. ಅದು ಇಡೀ ಜನಾಂಗಕ್ಕೆ ಮಾಡಿರುವ ಘೋರ ಅಪರಾಧ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿಸಬೇಕಲ್ವಾ ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post