ಭೂ ಬ್ಯಾಂಕ್‌ 50 ಲಕ್ಷ ರೂಪಾಯಿ ಲಾಭ

ಸೆಪ್ಟೆಂಬರ್‌ 12 ರಂದು ಸರ್ವ ಸದಸ್ಯರ ಮಹಾಸಭೆ -‌ ಬಸವಾನಿ ವಿಜಯದೇವ್

ಭೂ ಬ್ಯಾಂಕ್‌ ರಾಜ್ಯದ ಬೆರಳೆಣಿಕೆ ಲಾಭಗಳಿಸಿದ ಸಂಸ್ಥೆಗಳಲ್ಲಿ ಒಂದು

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತೀ ವರ್ಷದಂತೆ ತೀರ್ಥಹಳ್ಳಿ ಭೂ ಅಭಿವೃದ್ಧಿ ಬ್ಯಾಂಕ್‌ ಪ್ರಥಮ ಸ್ಥಾನದಲ್ಲಿದೆ. ಒಟ್ಟು 36.22 ಕೋಟಿ ರೂಪಾಯಿ ವ್ಯವಹಾರ ನಡೆಸಿ 50 ಲಕ್ಷ ರೂಪಾಯಿ ಮಿಕ್ಕಿ ಲಾಭಗಳಿಸಿದೆ. ನಬಾರ್ಡ್‌ ಪುರಸ್ಕೃತ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರಾಥಮಿಕ ಕೃಷಿ ಗ್ರಾಮೀಣ ಬ್ಯಾಂಕ್‌ ಎಂಬ ಹೆಗ್ಗಳಿಕೆ ಉಳಿಸಿಕೊಂಡು ಬಂದಿದೆ. ಮೂರು ವರ್ಷಗಳಿಂದ ಸಾಲಮನ್ನಾ, ಕೋವಿಡ್‌ ಹಿನ್ನಲೆಯಲ್ಲಾದ ಆರ್ಥಿಕ ಅಸಮತೋಲನಗಳ ನಡುವೆಯೂ ರೈತರ ಸಹಕಾರದಿಂದ ಲಾಭದಲ್ಲಿ ನಡೆಯುತ್ತಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಬಸವಾನಿ ವಿಜಯದೇವ್‌ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಒಟ್ಟು 5098 ಷೇರುದಾರರಿದ್ದು ವಿವಿಧ ಯೋಜನೆಯಡಿ ದೀರ್ಘಾವಧಿ, ಮಧ್ಯಮಾವಧಿ ಸಾಲ ನೀಡುತ್ತಾ ಬಂದಿದೆ. 17 ವರ್ಷಗಳಿಂದ ಆಡಿಟ್‌ ತಪಾಸಣೆಯಲ್ಲಿ ʼʼ ಗ್ರೇಡ್‌ ಪಡೆದಿದೆ. ಆರ್ಥಿಕ ವರ್ಷದಲ್ಲಿ ಶೇಕಡ 70.14 ರಷ್ಟು ಸಾಲ ವಸೂಲಾತಿಯಾಗಿದೆ. ಸಕಾಲದಲ್ಲಿ ಮರುಪಾತಿ ಮಾಡದೇ ನಿರಂತರ ಸುಸ್ತಿದಾರರಾದ 65 ಸಾಲಗಾರ ಸದಸ್ಯರ ಮೇಲೆ ದಾವೆ ಹೂಡಲಾಗಿದೆ. ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಸೆಪ್ಟೆಂಬರ್‌ 12 ರಂದು ನಡೆಯಲಿದೆ ಎಂದರು.

ರಾಜ್ಯ ಭೂ ಬ್ಯಾಂಕ್‌ಗೆ ಸರ್ಕಾರದ ವಿಶೇಷ ನೆರವು ಇರುವುದರಿಂದ ಸಾಲಮನ್ನಾ ಮುಂತಾದ ಕಾರಣಗಳಿಂದ ಬಹುತೇಕ ಬ್ಯಾಂಕ್‌ ನಷ್ಟದ ಸುಳಿಯಲ್ಲಿದೆ. ತೀರ್ಥಹಳ್ಳಿಯ ಭೂ ಬ್ಯಾಂಕ್‌ ಬಸವಾನಿ ವಿಜಯದೇವ್‌ ಸಾರಥ್ಯದಲ್ಲಿ ಸಾಲ ವಸೂಲಾತಿಗೆ ವಿಶೇಷ ಪ್ರಯತ್ನ ನಡೆಸುವುದರಿಂದ ಉತ್ತಮ ಶೇಕಡಾ 70 ರಷ್ಟು ವಸೂಲಾತಿಯಾಗುತ್ತಿದೆ. ಜೊತೆಗೆ ಉತ್ತಮ ಲಾಭ ಕೂಡ ಗಳಿಸಿರುವುದು ವಿಶೇಷ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post