ತೀರ್ಥಹಳ್ಳಿ ವಿಧಾನಸಭಾ ಚುನಾವಣೆ ಘೋಷಿತ ಆಸ್ತಿ ವಿವರ

ಆರಗ ₹ 6.13 ಕೋಟಿ ಸಿರಿವಂತ - ಆಸ್ತಿ ಮೂರುಪಟ್ಟು ಹೆಚ್ಚಳ
ಕಿಮ್ಮನೆ 3.27 ಕೋಟಿ ಸಾಲಗಾರ - ಪತ್ನಿ ಸಿರಿವಂತೆ

ಆರಗ ಜ್ಞಾನೇಂದ್ರ ಘೋಷಿತ ಆಸ್ತಿ ವಿವರ

ಬಿಕಾಂ ಪದವಿದರರಾದ ಗೃಹಸಚಿವ ಆರಗ ಜ್ಞಾನೇಂದ್ರ ಅಪಾರ ಬೆಂಬಲಿಗರೊಂದಿಗೆ ಮಂಗಳವಾರ ಕ್ಷೇತ್ರ ಚುನಾವಣಾಧಿಕಾರಿಗೆ ಬಿಜೆಪಿ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ್ದು ನಾಮಪತ್ರದಲ್ಲಿ ಸಲ್ಲಿಸಿದ ಆದಾಯ ಪ್ರಮಾಣ ಪತ್ರದಲ್ಲಿ ತಾವು 6,13,56,692 ಸಿರಿವಂತನಾಗಿದ್ದಾರೆ. ಪತ್ನಿಯ ಬಳಿ ₹ 15,01,847 ಚರಾಸ್ತಿ ಇದೆ.

ತಮ್ಮ ಬಳಿ ₹1.50 ಲಕ್ಷ ನಗದು, 58.76 ಲಕ್ಷ ಮೌಲ್ಯದ ವಿವಿಧ ಬ್ಯಾಂಕ್, ಹಣಕಾಸು ಕಂಪನಿ, ಸಹಕಾರ ಸಂಘದ ಠೇವಣಿ, ಷೇರು, ಹೂಡಿಕೆ, ವಿಮೆ ಹೊಂದಿದ್ದಾರೆ. ₹ 8 ಲಕ್ಷ ಮೌಲ್ಯದ ಮಾರುತಿ ಎರ್ಟಿಗ, ₹80 ಸಾವಿರ ಮೌಲ್ಯದ ಓಮಿನಿ, ₹28 ಲಕ್ಷ ಮೌಲ್ಯದ ಇನೋವಾ ಕ್ರಿಸ್ಟಾ ಕಾರು ಇದೆ.  ಪತ್ನಿಯ ಬಳಿ ₹ 50 ಸಾವಿರ ನಗದು, ₹1,847 ಬ್ಯಾಂಕ್‌ ಖಾತೆಯಲ್ಲಿ ಉಳಿತಾಯ, ₹ 13.35 ಲಕ್ಷ ಮೌಲ್ಯದ 250 ಗ್ರಾಂ ಬಂಗಾರ, ₹75 ಸಾವಿರ ಮೌಲ್ಯದ 1 ಕೆ.ಜಿ. ಬೆಳ್ಳಿ ಇದೆ ಎಂದು ತಿಳಿಸಿದ್ದಾರೆ.

ಒಟ್ಟು ₹86,50 ಲಕ್ಷ ಮೌಲ್ಯದ ಜಂಬೇತಲ್ಲೂರು ಗ್ರಾಮದಲ್ಲಿ 20 ಎಕರೆ 12 ಗುಂಟೆ ಪೈಕಿ 7 ಎಕರೆ 25 ಗುಂಟೆ ಖುಷ್ಕಿ, 4 ಎಕರೆ 27 ಗುಂಟೆ ಬಾಗಾಯ್ತು, 5 ಎಕರೆ ರಬ್ಬರ್‌, 3 ಎಕರೆ ತಾಳೆ ಇದೆ. ಅಗಳಬಾಗಿಲು ಗ್ರಾಮದಲ್ಲಿ 32 ಗುಂಟೆ ತರಿ ಜಮೀನು ಇದೆ. ಬೆಂಗಳೂರಿನ ಆರ್‌ಎಂವಿ 2ನೇ ಹಂತ, ಭೂಪಸಂದ್ರದಲ್ಲಿ 4000 ಚದರಡಿಯ (50x80) ₹ 4 ಕೋಟಿ ಮೌಲ್ಯದ ನಿವೇಶನ. ಗುಡ್ಡೇಕೊಪ್ಪದಲ್ಲಿ 1628 ಚದರಡಿಯ ₹ 30 ಲಕ್ಷ ಮೌಲ್ಯದ ಹೆಂಚಿನ ವಾಸದ ಮನೆ ಹೊಂದಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ.

ಬೆಂಗಳೂರಿನ ಜಯಮಹಲ್‌ ಎಕ್ಸ್‌ಟೆನ್ಷನ್‌ ಸರ್ಕಾರಿ ವಸತಿ ಗೃಹ ಬಳಸಿಕೊಂಡಿದ್ದು ಕಟ್ಟಡಕ್ಕೆ ಸಂಬಂಧಿಸಿದ ಯಾವುದೂ ಬಾಕಿ ಹೊಂದಿಲ್ಲ. 2017-18ರಲ್ಲಿ ₹11.77 ಲಕ್ಷ, 2018-19ರಲ್ಲಿ ₹9.82 ಲಕ್ಷ, 2019-20ರಲ್ಲಿ ₹10.34 ಲಕ್ಷ, 2020-21ರಲ್ಲಿ ₹23.30 ಲಕ್ಷ, 2021-22ರಲ್ಲಿ ₹35.75 ಲಕ್ಷ ರೂಪಾಯಿ ಕೃಷಿ ಹಾಗೂ ಇತರೆ ಮೂಲಗಳಿಂದ ಆದಾಯ ತೋರಿಸಿದ್ದು ಒಟ್ಟು ₹97,06,692 ಚರಾಸ್ತಿ, ₹ 5,16,50,000 ಸ್ಥಿರಾಸ್ತಿ ಇದೆ. ಸಹಕಾರ ಸಂಘ, ಬ್ಯಾಂಕ್‌‌ನಲ್ಲಿ ₹ 6 ಲಕ್ಷ ಸಾಲ ಇದೆ ಎಂದು ನಾಮಪತ್ರದಲ್ಲಿ ಹೇಳಿಕೊಂಡಿದ್ದಾರೆ.

2018ರಲ್ಲಿ ಆರಗ ಜ್ಞಾನೇಂದ್ರರ ಒಟ್ಟು ₹ 2.14 ಕೋಟಿ ಆದಾಯ ಘೋಷಿಸಿಕೊಂಡಿದ್ದರು. ಸಾಲ ₹10.51 ಲಕ್ಷ ಹೊಂದಿದ್ದರು. ತಮ್ಮ ಬಳಿ ₹24.59 ಲಕ್ಷ ಚರಾಸ್ತಿ, ₹ 1.91 ಕೋಟಿ ಸ್ಥಿರಾಸ್ತಿ ಇದ್ದರೆ ಪತ್ನಿಯ ಬಳಿ ₹6.89 ಲಕ್ಷ ಚರಾಸ್ತಿ ಇದೆ ಘೋಷಿಸಿಕೊಂಡಿದ್ದಾರೆ.

ಕಿಮ್ಮನೆ ರತ್ನಾಕರ್ ಘೋಷಿತ ಆಸ್ತಿ ವಿವರ

ಎಲ್‌ಎಲ್‌ಬಿ ಪದವಿದರರಾದ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಂಗಳವಾರ ಕ್ಷೇತ್ರ ಚುನಾವಣಾಧಿಕಾರಿಗೆ ಕಾಂಗ್ರೆಸ್ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ್ದು ನಾಮಪತ್ರದಲ್ಲಿ ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಯಲ್ಲಿ ತಮಗೆ ₹3.27 ಕೋಟಿ ಸಾಲ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ತಮ್ಮ ಬಳಿ ₹46 ಲಕ್ಷ ಚರಾಸ್ತಿ, ₹ 1.01 ಕೋಟಿ ಸ್ಥಿರಾಸ್ತಿ ಇದ್ದರೆ ಪತ್ನಿಯ ಬಳಿ ₹29 ಲಕ್ಷ ಚರಾಸ್ತಿ, ₹ 3.32 ಕೋಟಿ ಸ್ಥಿರಾಸ್ತಿ ಇದೆ. ಪತ್ನಿಯ ವೈದ್ಯಕೀಯ ಸಾಲ ₹44 ಲಕ್ಷ ಇದೆ ಎಂದು ತಿಳಿಸಿದ್ದಾರೆ.

ತಮ್ಮ ಕೈನಲ್ಲಿ ₹ 1 ಲಕ್ಷ ನಗದು, ₹18.15 ಲಕ್ಷ ಮೌಲ್ಯದ ವಿವಿಧ ಬ್ಯಾಂಕ್‌ ಉಳಿತಾಯ, ಸಹಕಾರ ಸಂಘಗಳ ಠೇವಣಿ, ವಿಮೆ, ಹೂಡಿಕೆ, ಷೇರುಗಳು ಇದೆ. ₹ 27 ಲಕ್ಷ ಮೌಲ್ಯದ ಇನೋವಾ ಕಾರು, ₹ 7 ಲಕ್ಷ ಮೌಲ್ಯದ 10 ಕೆಜಿ ಬೆಳ್ಳಿ ಪೂಜಾ ಸಾಮಾಗ್ರಿ, ₹9 ಲಕ್ಷ ಮೌಲ್ಯದ 150 ಗ್ರಾಂ ಚಿನ್ನ ಇದೆ. ಪತ್ನಿಯ ಬಳಿ ₹ 50 ಸಾವಿರ ನಗದು, ₹ 4.47 ಲಕ್ಷ ವಿವಿಧ ಬ್ಯಾಂಕ್‌ ಉಳಿತಾಯ, ಷೇರು, ವಿಮೆ ಇದೆ. ₹ 24 ಲಕ್ಷದ 400 ಗ್ರಾಂ ಬಂಗಾರ, ₹ 2 ಲಕ್ಷ ಮೌಲ್ಯದ ಗೃಹಪಯೋಗಿ ಸಾಮಾಗ್ರಿ ಹೊಂದಿದ್ದಾರೆ.

ತಮ್ಮ ಬಳಿ ₹ 80 ಲಕ್ಷ ಮೌಲ್ಯದ ಕಿಮ್ಮನೆ ಗ್ರಾಮದಲ್ಲಿ 3 ಎಕರೆ 4 ಗುಂಟೆ ಭಾಗಾಯ್ತು, 5 ಎಕರೆ 24 ಗುಂಟೆ ಜಮೀನು ಇದೆ. ಪತ್ನಿ ಬಳಿ ಶಿವಮೊಗ್ಗದ ಪ್ರಿಯದರ್ಶಿನಿ ಲೇಔಟ್‌ನಲ್ಲಿ 1800 ಚದರಡಿಯ ₹ 10 ಲಕ್ಷ ಮೌಲ್ಯದ ನಿವೇಶನ, ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ 6800 ಚದರಡಿಯ ₹2.10 ಕೋಟಿ ಮನೆ ಹೊಂದಿದ್ದಾರೆ.

2018-19ರಲ್ಲಿ ₹12.22 ಲಕ್ಷ, 2019-20ರಲ್ಲಿ ₹6.81 ಲಕ್ಷ, 2020-21ರಲ್ಲಿ ₹5.59 ಲಕ್ಷ, 2021-22ರಲ್ಲಿ ₹6.60 ಲಕ್ಷ, 2022-23ರಲ್ಲಿ ₹6.70 ಲಕ್ಷ ವಿವಿಧ ಮೂಲಗಳಿಂದ ಆದಾಯ ಹೊಂದಿದ್ದಾರೆ. ಹೈಕೋರ್ಟ್‌ ಹಾಗೂ ಬೆಂಗಳೂರು ಸಿಎಂಎಂ ನ್ಯಾಯಾಲಯದಲ್ಲಿ ಎರಡು ಮಾನನಷ್ಟ ಪ್ರಕರಣಗಳು ಬಾಕಿ ಇದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. 

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post