ಮುಗ್ಗರಿಸಿದ ಸ್ವಚ್ಚಭಾರತ ಆಂದೋಲನ

ಪ್ರಧಾನಿ ನರೇಂದ್ರ ಮೋದಿ ಸ್ವಚ್ಚಭಾರತ ಕನಸಿಗೆ ತೀಲಾಂಜಲಿ ಇಟ್ಟ ತೀರ್ಥಹಳ್ಳಿ ಬಿಜೆಪಿ
ಗೋವುಗಳಿಗೆ ಆಹಾರವಾದ ಪ್ಲಾಸ್ಟಿಕ್
ವಿಜಯ ಸಂಕಲ್ಪದ ಕುಡಿದ ಕೊಟ್ಟೆ ಕವರ್ ಜಾನುವಾರಿಗೆ ಮೇವು..?

ತೀರ್ಥಹಳ್ಳಿಯ ಎಪಿಎಂಸಿ ಸಮೀಪ ಇರುವ ಗದ್ದೆ ಮೈದಾನದಲ್ಲಿ ಮೊನ್ನೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ರೈತ ಸಮಾವೇಶದ ಕಾರ್ಯಕ್ರಮದ ನಂತರ ಸ್ಥಳ ಸ್ವಚ್ವತಾ ಅಭಿಯಾನ ನಡೆಯಲಿಲ್ಲ. ಊರೆಲ್ಲಾ ಸ್ವಚ್ಚತೆ ಮಾಡುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸು ಕೊಡುವ ಮುಖಂಡರುಗಳ ಪೋಟೋಗಳು ತಮ್ಮದೇ ಕಾರ್ಯಕ್ರಮ ಮಾಡಿದ ನಂತರ ಕಾಣಿಸದಿರುವುದು ವಿಪರ್ಯಾಸವೇ ಸರಿ.

ಭಾರತ ನನ್ನ ಭಾರತ...

ಆಗಬೇಕು ಸ್ವಚ್ಚಭಾರತ...

ಅಂದು ಗಾಂಧೀಜೀ ಕಂಡ ಕನಸು...

ಇಂದು ಮಾಡಲಿದ್ದಾರೆ ಮೋದೀಜೀ ನನಸು...

ಸ್ವಚ್ಚತೆ ಇಲ್ಲದೇ ಮನೆ ಇಲ್ಲ...

ಸ್ವಚ್ಚತೆ ಇಲ್ಲದೇ ದೇಶವಿಲ್ಲ...

ಎಂದು ಹಾಡು ಹಾಕಿಕೊಂಡು ಊರಿಗೆಲ್ಲ ಬುದ್ದಿವಾದ ಹೇಳುತ್ತಿದ್ದವರ ಧ್ವಂಧ್ವ ನಿಲುವು ಪರಿಚಯವಾಗುತ್ತಿದೆ. ಇನ್ನೆಷ್ಟು ದಿನ ಈ ನಾಟಕ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಲ್ಲದೇ ಸ್ವಚ್ವಭಾರತ ಅಭಿಯಾನ ಘೋಷಿಸಿದ ಪಕ್ಷದ ಕಾರ್ಯಕ್ರಮದಲ್ಲೇ ಬಳಕೆಯಾದ ಕುಡಿಯುವ ನೀರಿನ ಪ್ಯಾಕೆಟ್, ಖಾಲಿ ಬಾಟಲಿ, ತಿಂಡಿ ಪೊಟ್ಟಣ ಮುಂತಾದವುಗಳು ಜಾನುವಾರಿಗೆ ಆಹಾರವಾಗುತ್ತಿದೆ. ಹತ್ತಾರು ಜಾನುವಾರುಗಳು ಅದನ್ನು ಎಳೆದಾಡಿ ಊರೆಲ್ಲ ಚದುರುವಂತೆ ಮಾಡಿದೆ. ಇನ್ನು ರಭಸವಾಗಿ ಬೀಸುವ ಗಾಳಿ ಬಾಳೇಬೈಲು ಪರಿಸರದಲ್ಲಿ ಪ್ಲಾಸ್ಟಿಕ್ ಗಳನ್ನು ಚೆಲ್ಲಾಪಿಲ್ಲಿಯಾಗುವಂತೆ ಮಾಡಿದೆ. ಅಲ್ಲಲ್ಲಿ ಬಿದ್ದಿರುವ ತಿನಿಸುಗಳನ್ನು ಗೋವುಗಳು ತಿನ್ನುವ ಭರದಲ್ಲಿ ಪ್ಲಾಸ್ಟಿಕ್ ಜೊತೆಗೆ ತಿನ್ನುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಭಾರತದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಜನರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಿಮ್ಮ ಮನೆ, ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಿ ಎಂದೆಲ್ಲ ಊರಿನ ಜನರಿಗೆ ತಿಳುವಳಿಕೆ ಹೇಳುತ್ತಿದ್ದರು. ಇದೀಗ ಅವರದ್ದೇ ಕಾರ್ಯಕ್ರಮದಲ್ಲಿ ಆಗಿರುವ ಕಸ ಮಾತ್ರ ಸ್ವಚ್ಚಗೊಂಡಿಲ್ಲ. ಹೇಳುವುದು ಒಂದು ತಾವು ಮಾಡುವುದು ಇನ್ನೊಂದು ಎಂಬುದು ತೀರ್ಥಹಳ್ಳಿಗೆ ಅರ್ಥವಾದಂತಿದೆ. ಇಲ್ಲಿ ಅವರ ಧ್ವಂಧ್ವಗಳ ಆಂಗಿಕ ಮತ್ತು ವಾಚಿಕದ ನಡುವಿನ ವ್ಯತ್ಯಾಸ ಪೂರ್ಣ ಪ್ರಮಾಣದಲ್ಲಿ ಕಾಣಬಹುದಾಗಿದೆ.

ಗೃಹಸಚಿವರು ಗುಳಿಗೆ, ಜಾಪಾಳ್ ಮಾತ್ರೆ ವಿವಾದದಲ್ಲಿ ಸಿಲುಕಿಕೊಂಡಿದ್ದು ಅದರ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಸಾಕಷ್ಟು ಕಸರತ್ತು ನಡೆಯುತ್ತಿದೆ. ಕಾರ್ಯಕರ್ತರು ಈ ಹೇಳಿಕೆಗೆ ಸಮಾಜಯಿಷಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದರಿಂದ ಸ್ವಚ್ಚ ಭಾರತ ಆಂದೋಲನ ಕೈಬಿಟ್ಟಂತಿದೆ. ಹಾಗಾಗಿ ಎಪಿಎಂಸಿ ಸಮೀಪದ ಕಡೆಗೆ ಮುಖ ಕೂಡ ಹಾಕಿ ನೋಡಿದಂತೆ ಕಾಣಿಸುತ್ತಿಲ್ಲ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post