ಸುಳ್ಳು ವಂಶವೃಕ್ಷ ನೀಡಿ ಆಸ್ತಿ ಕಬಳಿಕೆ

ಅಪರಾಧಿಗಳಿಗೆ 6 ವರ್ಷ ಕಠಿಣ ಜೈಲು ಶಿಕ್ಷೆ
ಬದುಕಿರುವ ವ್ಯಕ್ತಿಯ ಮೃತ ಪ್ರಮಾಣ ಪತ್ರದ ಸುಳ್ಳು ದಾಖಲೆ

ಬದುಕಿರುವ ವ್ಯಕ್ತಿಯ ಹೆಸರಿಗೆ ಮೃತಪಟ್ಟಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿ ಅವಿಭಕ್ತ ಕುಟುಂಬದ ಆಸ್ತಿ ಲಪಟಾಯಿಸಿದ ಅಪರಾಧಿಗಳಿಗೆ ತೀರ್ಥಹಳ್ಳಿ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 6 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಹಾರೋಗೊಳಿಗೆ ಗ್ರಾಮದ ಕಡಿದಾಳು ವಾಸಿ ತಿಮ್ಮಪ್ಪಗೌಡ ಹೆಸರಿನಲ್ಲಿದ್ದ 5 ಎಕರೆ 36 ಗುಂಟೆ ಜಮೀನು ಅವಿಭಕ್ತ ಕುಟುಂಬದ ಆಸ್ತಿ ಆಗಿದೆ. ತಿಮ್ಮಪ್ಪ ಗೌಡರ ಮರಣ ನಂತರ ಪತ್ನಿ ಈರಮ್ಮ ಹೆಸರಿಗೆ ಪೌತಿ ಖಾತೆ ದಾಖಲಾಗಿರುತ್ತದೆ. ಪದ್ಮಾವತಿ ಕೋಂ ಶಿವಣ್ಣ ಈರಮ್ಮ ಅವರ ಪುತ್ರಿಯಾಗಿದ್ದು ಆಸ್ತಿಯನ್ನು ಕೊಡದೆ ಮೋಸ ಮಾಡುವ ಉದ್ದೇಶದಿಂದ ಮೃತಪಟ್ಟಿದ್ದಾರೆ ಎಂದು ಸುಳ್ಳು ವಂಶವೃಕ್ಷ ಸೃಷ್ಟಿಸಿ ಅವಿಭಕ್ತ ಕುಟುಂಬದ ಆಸ್ತಿ ಲಪಟಾಯಿಸಿರುವುದು ವಿಚಾರಣೆ ವೇಳೆ ಬಹಿರಂಗಗೊಂಡಿದೆ.

2010 ಡಿಸೆಂಬರ್‌ 22ರಂದು ಪತ್ರರಾದ ಕೆ.ಸಿ.ಅನಿಲ್‌ ಕುಮಾರ್‌, ಕೆ.ಸಿ. ಅಮೃತ್‌ಕುಮಾರ್‌ ಸುಳ್ಳು ವಂಶವೃಕ್ಷ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಆಸ್ತಿ ನೊಂದಾಯಿಸಿಕೊಂಡಿರುತ್ತಾರೆ. ವಿಷಯ ತಿಳಿದ ಪದ್ಮಾವತಿ ತೀರ್ಥಹಳ್ಳಿ ಠಾಣೆಗೆ ದೂರು ದಾಖಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಆಗಿನ ತನಿಖಾಧಿಕಾರಿ ಪಿಎಸ್‌ಐ ಭರತ್‌ ಕುಮಾರ್‌ ಆರೋಪಿಗಳ ವಿರುದ್ಧ ಐಪಿಸಿ ಕಲಂ 406, 418, 465, 471, 420, ಸ/ವಾ 34 ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

406ರಡಿ ಅಡಿ 3 ವರ್ಷ ಕಠಿಣ ಕಾರಗೃಹ ವಾಸ ಮತ್ತು 10ಸಾವಿರ ದಂಡ, 418ರಡಿ 1 ವರ್ಷ ಕಠಿಣ ಕಾರಾಗೃಹ ವಾಸ ಮತ್ತು 10 ಸಾವಿರ ದಂಡ, 465ರಡಿ 1 ವರ್ಷ ಕಠಿಣ ಕಾರಾಗೃಹ ಮತ್ತು 10 ಸಾವಿರ ದಂಡ, 471ರಡಿ 6 ತಿಂಗಳು ಕಠಿಣ ಕಾರಾಗೃಹ ವಾಸ 10 ಸಾವಿರ ದಂಡ, 420ರಡಿ 6 ತಿಂಗಳು ಕಠಿಣ ಕಾರಾಗೃಹ ವಾಸ ಮತ್ತು 10 ಸಾವಿರ ದಂಡ ವಿಧಿಸಿದ್ದು ಎಲ್ಲಾ ಶಿಕ್ಷೆಯನ್ನು ಪ್ರತ್ಯೇಕ, ಪ್ರತ್ಯೇಕ ಅನುಭವಿಸುವಂತೆ ಆದೇಶಿಸಿರುತ್ತದೆ. ದಂಡ ಕಟ್ಟಲು ವಿಫಲವಾದರೆ ಎಲ್ಲಾ ಪ್ರಕರಣದಲ್ಲೂ 6 ತಿಂಗಳು ಪತ್ರೇಕ ಸಾದ ಕಾರಗೃಹ ವಾಸ ಅನುಭವಿಸಲು ಆದೇಶಿಸಿದೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಡಿ.ಬಿನು ಪ್ರಕರಣದ ವಿಚಾರಣೆ ನಡೆಸಿದ್ದು ಸಹಾಯಕ ಸರ್ಕಾರಿ ಅಭಿಯೋಜಕ  ಪ್ರೇಮಲೀಲಾ ಡಿ.ಜೆ. ವಾದ ಮಂಡಿಸಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post