8 ದಿನಗಳ ಕಾರ್ಯಾಚರಣೆ ಆನೆ ಸೆರೆ

Operation Tusker – Elephant Arrest
ಮಳೂರು ಆನೆಗೆ ಶನಿಕಾಟ – ಆಗುಂಬೆ ಆನೆಗೆ ಶುಕ್ರದೆಸೆ
ಬಾನುಮತಿಗೆ tucker ಕೊಟ್ಟ ಗಂಡಾನೆ

Elephant helps to increase biological wealth of forest. It is proved by scientific reports that the forest where there is an elephant is prosperous. The elephant, which had arrived in Tirthahalli town, entertained the forest department for a couple of days, but finally got into trouble.

According to the Wildlife Management & Conservation Principle, catching an elephant is a violation of the Forest Act. But the forest department is trying to control the damage caused by the unscientific anti-environmental development activities of the central and state governments.

A record has now been established that an elephant can live in the forest area around Tirthahalli without any problem. The document will reach the central forest department and it will be possible to formulate models like Kasturi Rangan report, Godgil report to protect Western Ghats.

ಅದೇನೆ ಆಗಲಿ, ಅರಣ್ಯ ಸಂಪತ್ತು ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಿದ್ದರೂ ಕೂಡ ಆನೆಯಿಂದ ಆಗಬಹುದಾದ ಹಾನಿಗಳನ್ನು ಸಮೀಕ್ಷೆ ಮಾಡುವುದು ಅತ್ಯಂತ ಮಹತ್ವದ ವಿಚಾರ. ಬಡವರ ಕಷ್ಟಗಳಿಗೆ ಸ್ಪಂದಿಸದ ಅರಣ್ಯ ಇಲಾಖೆ, ಕ್ಷೇತ್ರದ ಶಾಸಕರು, ರಾಜ್ಯದ ಗೃಹಸಚಿವರು ಆದಂತಹ ಆರಗ ಜ್ಞಾನೇಂದ್ರ ತಮ್ಮ ಆಪ್ತರು, ಶ್ರೀಮಂತರ ಒಂದೇ ಗುಟುರಿಗೆ ಅರಣ್ಯ ಇಲಾಖೆಗೆ ಸವಾಲು ಹಾಕಿದ್ದರು. ಅದರ ಫಲವಾಗಿ ಬೆಂಗಳೂರಿನಿಂದ ಆನೆ ಹಿಡಿಯುವ ಅನುಮತಿ ಲಭ್ಯವಾಯಿತು.

ಅರಣ್ಯ ಇಲಾಖೆ ಈಗಾಗಲೇ ಭದ್ರಾ ಅಭಯಾರಣ್ಯ ಪ್ರದೇಶದಲ್ಲಿ ಸುಮಾರು 60ಕ್ಕೂ ಹೆಚ್ಚು ಆನೆಗಳನ್ನು ಬಿಟ್ಟಿದ್ದು ಅದಕ್ಕೆ ಇನ್ನಷ್ಟು ಜಾಗ ವಿಸ್ತರಿಸುವ ಪ್ರಯತ್ನ ಕೂಡ ಸದ್ದಿಲ್ಲದೆ ನಡೆಯುತ್ತಿದೆ. ಮೊನ್ನೆ ಮೊನ್ನೆ ಮುತ್ತಿನಕೊಪ್ಪ, ಮುಡುಬ ಮಾರ್ಗವಾಗಿ ಕಣಿವೆ ವರೆಗೂ ಆನೆ ತನ್ನ ದಾಪುಗಾಲು ಇರಿಸುವಂತೆ ಯೋಜನೆ ರೂಪಿಸಿ ಗ್ರಾಮಸ್ತರಲ್ಲಿ ಆತಂಕ ಹೆಚ್ಚಿಸಿದ್ದರು. ಇದೀಗ 8 ವರ್ಷದ ಮರಿ ಗಂಡಾನೆ ಹಿಡಿಯುವ ಸಾಧನೆ ತೋರಿದ್ದು ವಿಶೇಷವೇ ಸರಿ.

ಕುರುವಳ್ಳಿ-ವಿಠಲನಗರದಿಂದ ದೇವಂಗಿ ಅಂಕಿನಕಟ್ಟೆ ವರೆಗಿನ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಬಿದಿರು, ಬೈನೆ, ಬಾಳೆ ಮುಂತಾದ ಸಂಮೃದ್ಧ ಸಂಪತ್ಬರಿತ ಆಹಾರವನ್ನು ಹಾಯಾಗಿ ಮೆದ್ದು ತನ್ನ ಪ್ರವಾಸದ ಸತ್ಕಾರ್ಯವನ್ನು ಮೆಲುಕು ಹಾಕುತ್ತಿತ್ತು. ಅಷ್ಟರಲ್ಲಿ ದಾಳಿ ಇಟ್ಟ ಅರಣ್ಯ ಇಲಾಖೆ ಸಿಬ್ಬಂದಿಗಳ ತಂಡ ಆನೆಯನ್ನು ಕಂಗಾಲಾಗುವಂತೆ ಮಾಡಿದೆ. ಹೆಣ್ಣಾನೆ ಭಾನುಮತಿ ಬಳಸಿ ನಮ್ಮ ರಾಜಕಾರಣಿಗಳಿಗೆ ಕೆಡ್ಡ ತೋಡುವಂತೆ ಹನಿಟ್ರಾಪ್ ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ಬಹಳಷ್ಟು ಪ್ರಯತ್ನ ನಡೆಸಿದ್ದರು. ಆದರೆ ಈ ಕಾಡಿನ ಯುವಕ ಈಗಿನ್ನು ಏಳೆಂಟು ವರ್ಷ ದಾಟದ ಹಿನ್ನಲೆಯಲ್ಲಿ ಪುಸುಕ್ ಎಂದು ಚೆಲ್ಲಾಟವಾಡಿ ನಾಪತ್ತೆಯಾಗುತ್ತಿದ್ದ. ಯೌವನಾವಸ್ಥೆ ತಲುಪದ ಹಿನ್ನಲೆಯಲ್ಲಿ ಭಾನುಮತಿಯ ಹನಿಟ್ರಾಪ್ ಪ್ರಕರಣಕ್ಕೆ ಟಕ್ಕರ್ ಕೊಟ್ಟಿದ್ದಾನೆ.

ಮೈಸೂರಿನ ವನ್ಯಜೀವಿ ವಿಭಾಗದ ಡಾ.ಮುಜೀದ್ ನೇತೃತ್ವದ ನಾಲ್ಕು ಜನರ ವೈದ್ಯರ ತಂಡ ಹಾಗೂ ಶಿವಮೊಗ್ಗದ ವನ್ಯಜೀವಿ ವೈದ್ಯ ಡಾ.ವಿನಯ್ ಆನೆಯನ್ನು ಡಾಟ್ ಮಾಡಿ ಎರಡು ಬಾರಿ ಅರವಳಿಕೆ ನೀಡಿ ಆನೆ ಸೆರೆಹಿಡಿಯಲು ಸಹಕರಿಸಿದ್ದಾರೆ. ನಾಲ್ಕು ಆನೆಗಳಿದ್ದರು ಅರಣ್ಯ ಸಿಬ್ಬಂದಿಗಳು, ಮಾವುತರು, ಕಾವಾಡಿಗಳು ಕಾಲ್ನಡಿಗೆಯಲ್ಲೇ ಕೂಂಬಿಂಗ್ ಮಾಡಿ ಆನೆಯನ್ನು ಸೈಟ್ ಮಾಡಿದ್ದಾರೆ. ಆದರೆ ಆನೆಯ ಪುಸುಕು ಓಡುವ ವೇಗದಿಂದ ಆನೆ ಹಿಡಿಯುವ ಕಾರ್ಯಾಚರಣೆಗೆ ಸುಮಾರು ಏಳುದಿನ ಕಾಲಾವಕಾಶ ತೆಗೆದುಕೊಂಡಿದ್ದಾರೆ. ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ತಮ್ಮ ಜೀವ ಪಣಕ್ಕಿಟ್ಟು ಹಗಲಿರುಳು ಆನೆಯನ್ನು ಟ್ರೇಸ್ ಮಾಡಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post