ಮೇಗರವಳ್ಳಿಯಲ್ಲಿ ನಾಳೆ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ
ಮೇಗರವಳ್ಳಿ ಸಮೀಪದ
ಕರುಣಾಪುರ ಕೆಪಿಜೆಡ್ ಯುವಬ್ರಿಗೇಡ್ ವತಿಯಿಂದ 9ನೇ ವರ್ಷದ ಯುಗಾದಿ ಸಂಭ್ರಮಾಚರಣೆ ಮಾರ್ಚ್ 19ರ
ಗುರುವಾರ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರತಿ ವರ್ಷ ಯುಗಾದಿಯ
ಸಂದರ್ಭ ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಕೆಪಿಜೆಡ್ ಯುವಬ್ರಿಗೇಡ್ ನಡೆಸುತ್ತಿದೆ. 9ನೇ ವರ್ಷದ
ಸಂಭ್ರಮಾಚರಣೆ ಪ್ರಯುಕ್ತ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಅತ್ಯಂತ ಜನಪ್ರಿಯ ಮತ್ತು ದಾಖಲೆ
ಸೃಷ್ಟಿಸಿದ ಶಿವದೂತೆ ಗುಳಿಗೆ ನಾಟಕ ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ. ದೈವಾರಾಧನೆ ಮತ್ತು ಗುಳಿಗನ
ಪವಾಡದ ಕಥಾಹಂದರ ಹೊಂದಿರುವ ಈ ನಾಟಕ, ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ.
ಈವರೆಗೂ ಸುಮಾರು 700ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಇದು ರಂಗಭೂಮಿ ಇತಿಹಾಸದಲ್ಲಿ ಒಂದು
ವಿಶಿಷ್ಟ ಮೈಲಿಗಲ್ಲನ್ನು ತಲುಪಿದೆ.
ಮುಖ್ಯ ಅತಿಥಿಯಾಗಿ
ಥರ್ಡ್ ಐ ಕನ್ನಡ ವಾಹಿತಿಯ ಸಂಸ್ಥಾಪಕ ಸುಬ್ರಹ್ಮಣ್ಯ ಎಸ್ ಹಂಡಿಗೆ ಭಾಗವಹಿಸಲಿದ್ದಾರೆ. ಪ್ರಜ್ಞಾಭಾರತಿ
ಪ್ರೌಢಶಾಲೆಯ ವ್ಯವಸ್ಥಾಪಕ ಕ್ಯಾದಿಗೆರೆ ಲೋಹಿತಾಶ್ವ ದಿಕ್ಸೂಚಿ ನುಡಿಗಳನ್ನು ಆಡಲಿದ್ದಾರೆ. ಅತಿಥಿಗಳಾದ
ಆಗುಂಬೆ ಪೊಲೀಸ್ ಠಾಣೆಯ ಪಿಎಸ್‌ಐ ಶಿವನಗೌಡ, ವಲಯಾರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಕಿರಿಯ ಇಂಜಿನಿಯರ್
ಮಂಜುನಾಥ ವಹಿಸಲಿದ್ದಾರೆ. ಯುಗಾದಿ ಸಂಭ್ರಮಾಚರಣೆ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕಾಗಿ ಕೋರಿದ್ದಾರೆ.
