ಮಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಗೆ ದಿನಾಂಕ ನಿಗಧಿ

ಅಧ್ಯಕ್ಷರ ಆಯ್ಕೆಯಲ್ಲಿ ಪ್ರಸನ್ನ ಕುಮಾರ್ ಮಹತ್ವದ ಪಾತ್ರ ನಿರೀಕ್ಷೆ
28 ವರ್ಷಗಳ ಆಡಳಿತ ನಡೆಸಿದ ಪ್ರಸನ್ನ ಕುಮಾರ್ ನಡೆಯತ್ತ ತೀವ್ರ ಕುತೂಹಲ
ಸಂಘದ ಸಾರಥ್ಯ ವಹಿಸುವ ನೂತನ ಅಧ್ಯಕ್ಷರು‌‌‌ ಯಾರು...?

ಮಹತ್ವದ ಬೆಳವಣಿಗೆಯಿಂದಾಗಿ ತಾಲ್ಲೂಕಿನ ಅತ್ಯಂತ ಪ್ರತಿಷ್ಠಿತ ಮಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದೀಗ ಸುದ್ದಿಯಲ್ಲಿದೆ.‌ ಡಿಸೆಂಬರ್ 28ರಂದು ನೂತನ ಅಧ್ಯಕ್ಷರ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ. ಈ ನಡುವೆ ಹೊಸ ಅಧ್ಯಕ್ಷರು ಯಾರೆಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದೆ.

28 ವರ್ಷಗಳ ಸುದೀರ್ಘ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿ, ಸಂಘದ ಬೆಳವಣಿಗೆಗೆ ಶ್ರಮಿಸಿದ ಸೀಕೆ ಪ್ರಸನ್ನ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಎಲ್ಲರ ವಿಶ್ವಾಸ ಪಡೆದು ಮಹತ್ವದ ಹೊಣೆಗಾರಿಕೆ ನಿರ್ವಹಿಸುವ ಜವಾಬ್ದಾರಿ ಅವರ ಹೆಗಲೇರಿದೆ.

3 ವರ್ಷಗಳ ಹಿಂದೆ ಇದ್ದ ಒಗ್ಗಟ್ಟು ಮುಂದುವರೆಸುವ ಜವಾಬ್ದಾರಿ ಅನೇಕರ ಮೇಲಿದ್ದು ಹಿಂದಿನ ಅಧ್ಯಕ್ಷ ಪ್ರಸನ್ನ ಕುಮಾರ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸಂಘದ ಸಾರಥ್ಯ ವಹಿಸುವ ನೂತನ ಅಧ್ಯಕ್ಷರು ಸಂಘದ ಏಳಿಗೆಯಲ್ಲಿ ಯಾವ ಪರಿಣಾಮ ಬೀರುತ್ತಾರೆ ಮತ್ತು ಅವರ ಪ್ರಯೋಗಶೀಲತೆಯ ಏನು. ಸಂಘದ ಶ್ರೇಯಸ್ಸು ಮುಂತಾದ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಾಳೂರು ಸೊಸೈಟಿ ಪ್ರತಿಷ್ಠಿತ ಕಣವಾಗಿ ರೂಪುಗೊಂಡಿದೆ.

ಸುಮಾರು ಏಳೆಂಟು ಕೋಟಿ ವಾರ್ಷಿಕ ವಹಿವಾಟು ಹೊಂದಿರುವ ಮಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆ ಪ್ರತಿಷ್ಠಿತ ಕಣವಾಗಿ ರೂಪುಗೊಂಡಿದೆ. 12 ನಿರ್ದೇಶಕರ ಬಲದ ಸಂಘಕ್ಕೆ 3 ವರ್ಷದ ಹಿಂದೆ ಚುನಾವಣೆ ನಡೆದಿತ್ತು. ಈ ಸಂದರ್ಭ ಪ್ರಸನ್ನ ಕುಮಾರ್ ನಾಯಕತ್ವದ ತಂಡ ವಿಜಯಿಯಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸಂದರ್ಭ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಮುಖರ ಸಮ್ಮುಖ ನಡೆದ ಮಾತುಕತೆ ಮೂಲಕ ಪ್ರಸನ್ನ ಕುಮಾರ್‌ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಲಾಗಿತ್ತು. ಒಟ್ಟು ಅಧಿಕಾರವಧಿಯ ಐದು ವರ್ಷದಲ್ಲಿ ಎರಡೂವರೆ ವರ್ಷ ಪ್ರಸನ್ನ ಕುಮಾರ್‌ ಅಧ್ಯಕ್ಷ ಸ್ಥಾನ ನಿರ್ವಹಿಸಬೇಕು ಎಂಬ ಒಪ್ಪಂದ ಮಾಡಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿತ್ತು. ಅದರಂತೆ ಒಪ್ಪಂದದ ಅವಧಿ ಮುಗಿದು ನಾಲ್ಕಾರು ತಿಂಗಳು ಕಳೆದಿದರೂ ಪ್ರಸನ್ನ ಕುಮಾರ್ ರಾಜೀನಾಮೆ ನೀಡದೆ ಗೊಂದಲ ಏರ್ಪಟ್ಟಿತ್ತು.

ಇದೀಗ ಅವರು ರಾಜೀನಾಮೆ ನೀಡಿದ್ದು ಡಿಸೆಂಬರ್ 8 ರಂದು ಚುನಾವಣೆ ನಿಗಧಿಯಾಗಿದೆ. ಮುಂದಿನ ಅಧ್ಯಕ್ಷರ ಆಯ್ಕೆಯಲ್ಲಿ ಪ್ರಸನ್ನ ಕುಮಾರ್ ಅವರ ಕಾರ್ಯ ನಿರ್ವಹಣೆ ಕುತೂಹಲ ಮೂಡಿಸಿದ್ದು ಹೊಸ ಅಧ್ಯಕ್ಷರ ಆಯ್ಕೆಯ ಕಸರತ್ತು ತೀವ್ರಗೊಂಡಿದೆ. 28 ವರ್ಷಗಳ ಸುಧೀರ್ಘ ಕಾಲ ಅಧ್ಯಕ್ಷರಾಗಿ ಆಡಳಿತ ನಿರ್ವಹಿಸಿದ ಪ್ರಸನ್ನ ಕುಮಾರ್ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಯಾವ ಪಾತ್ರ ನಿರ್ವಹಿಸುತ್ತಾರೆ ಎಂದು ಕಾದು ನೋಡಬೇಕಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post