ಕೊಯ್ಲಿಗೆ ಸರಿಯಾಗಿ ಅಡಿಕೆಗೆ ಸಂಕಷ್ಟ

ಅಡಿಕೆಗೆ ಅಚ್ಚೆದಿನ್‌…!
ಮುಗ್ಗರಿಸುವುದೇ ಅಡಿಕೆ ಧಾರಣೆ...?
17 ಸಾವಿರ ಟನ್‌ ಭೂತಾನ್‌ ಅಡಿಕೆ ಅಮದು
ಕನಿಷ್ಠ ಆಮದು ಬೆಲೆ ರಹಿತ ಖರೀದಿ ಅನುಮತಿ

ಅಡಿಕೆಗೆ ಈ ವರ್ಷವೂ ಕೂಡ ಕಳೆದ ವರ್ಷದ ಧಾರಣೆ ಸ್ಥಿರವಾಗಿರಲಿದೆ ಎಂದು ಬೆಳೆಗಾರ ನಿರೀಕ್ಷೆ ಮಾಡುತ್ತಿರುವಾಗಲೇ ಪ್ರತೀವರ್ಷವೂ ಅಡಿಕೆ ಮಾರುಕಟ್ಟೆಗೆ ಬರುವಾಗ ಏನಾದರೊಂದು ಖ್ಯಾತೆ ತೆಗೆದು ಧಾರಣೆ ಕುಸಿಯುವಂತೆ ಮಾಡುವುದು ಮಾಮೂಲಾಗುದೆ. ಈ ವರ್ಷ ಮುಖ್ಯವಾಗಿ ರಾಶಿ ಇಡಿ 50 ಸಾವಿರ ದಾಟಿದ ಬೆಲೆ ಹೊಂದಲಿದೆ ಎಂದು ಅಂದಾಜು ಮಾಡುತ್ತಿರುವಾಗಲೇ ಕೇಂದ್ರ ಸರ್ಕಾರ ಭೂತಾನ್‌ನಿಂದ 17 ಸಾವಿರ ಟನ್‌ ಹಸಿ ಅಡಿಕೆಯನ್ನು ಅಮದು ಮಾಡಿಕೊಳ್ಳಲು ಬುಧವಾರ ಅವಕಾಶ ಕಲ್ಪಿಸಿದೆ ಎಂದು ಪಿಟಿಐ ವರಧಿ ಮಾಡಿದೆ.

ಇದೊಂದೇ ಸುದ್ದಿ ಅಡಿಕೆ ಬೆಳೆ ಧಾರಣೆಯನ್ನು ಅಲ್ಲೋಲ ಕಲ್ಲೋಲ ಮಾಡಲಿದೆ. ಇನ್ನಷ್ಟು ಆತಂಕದ ಸುದ್ದಿ ಎಂದರೆ ಕನಿಷ್ಠ ಆಮದು ಬೆಲೆಯ (ಎಂಐಪಿ) ಷರತ್ತು ಇಲ್ಲದೆಯೇ ಈ ಪ್ರಮಾಣದ ಅಡಿಕೆಯನ್ನು ಆಮದು ಮಾಡಲು ಕಲ್ಪಿಸಲಾಗಿದೆ. ಇತ್ತೀಚೆಗಷ್ಟೇ ಗೃಹಸಚಿವ ಮತ್ತು ಅಡಿಕೆ ಟಾಸ್ಕ್‌ ಫೋರ್ಸ್‌ ಅಧ್ಯಕ್ಷ, ಸ್ವತಃ ಅಡಿಕೆ ಬೆಳೆಗಾರರೂ ಆಗಿರುವ ಆರಗ ಜ್ಞಾನೇಂದ್ರ ಅಡಿಕೆ ಧಾರಣೆ ಸ್ಥಿರವಾಗಲು ಕೇಂದ್ರ ಬಿಜೆಪಿ ಸರ್ಕಾರ ಕಾರಣ ಎಂದು ಮನತುಂಬಿ ಶ್ಲಾಘಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ದೇಶದ ಅಡಿಕೆ ಬೆಳೆಗಾರರ ಹಿತ ಕಾಯುವ ಉದ್ದೇಶದಿಂದ ಕೇಂದ್ರವು 2017ರಲ್ಲಿ ಕನಿಷ್ಠ ಆಮದು ಬೆಲೆಯು ಕೆ.ಜಿ.ಗೆ 251 ರೂಪಾಯಿ ಇರಬೇಕು ಎಂಬ ಷರತ್ತು ವಿಧಿಸಿತ್ತು. ಈ ಬೆಲೆಗಿಂತ ಕಡಿಮೆಗೆ ಆಮದು ಮಾಡಿಕೊಳ್ಳಲು ಅವಕಾಶವಿರಲಿಲ್ಲ. ಆದರೆ ಈಗ ಪ್ರತಿ ವರ್ಷ 17 ಸಾವಿರ ಟನ್‌ನಷ್ಟು ಅಡಿಕೆಯನ್ನು ಈ ಷರತ್ತು ಇಲ್ಲದೆ ಕಡಿಮೆ ಬೆಲೆಯಲ್ಲಿ ಆಮದು ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 8,500 ಟನ್ ಹಸಿ ಅಡಿಕೆಯನ್ನು ಎಂಐಪಿ ಷರತ್ತು ಇಲ್ಲದೆ ಆಮದು ಮಾಡಿಕೊಳ್ಳಬಹುದು. 2023–24ರಲ್ಲಿ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಬಹುದು. ಈ ಎಲ್ಲಾ ಆಟಗಳಿಗೆ ಕಾರಣ ಕೇಂದ್ರದ ಅತ್ಯಂತ ಪ್ರಭಾವಿ ಮಂತ್ರಿಯೊಬ್ಬರು ಬೇನಾಮಿಯಾಗಿ ಹಲವಾರು ಗುಟ್ಕಾ ಫ್ಯಾಕ್ಟರಿ ಹೊಂದಿದ್ದು ಆತನ ಹಾಗೂ ಆತನ ಹಿಂಬಾಲಕ ಉದ್ಯಮಿಗಳ ಹಿತಾಸಕ್ತಿಗಾಗಿಯೇ ಇಂತಹ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಚರ್ಚೆಯೂ ಕೇಳಿ ಬರುತ್ತಿದೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post