ಗೃಹಸಚಿವರ ಕ್ಷೇತ್ರದಲ್ಲಿ ಬಂದೂಕು ಕಳವು

ಪೊಲೀಸರು ಕಕ್ಕಾಬಿಕ್ಕಿ...!
ಮೂರು ದಿನಗಳ ನಂತರ ಪ್ರಕರಣ ದಾಖಲು

ಗೃಹಸಚಿವರೇ ನಿಮ್ಮ ತವರಿನಲ್ಲಿದೆ ಆತಂಕ

ಗೃಹಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದಲ್ಲಿ ಒಂದಲ್ಲ ಒಂದು ಕಿರಿಕಿರಿ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ನೊಣಬೂರಿನಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಂತರಾಜ್‌ ಗುಂಡೇಟಿಗೆ ಬಲಿಯಾದ ನಂತರ ಕೆಲವೇ ದಿನಗಳಲ್ಲಿ ನಗರ ಸಮೀಪದ ನೇಗಿಲಯೋಣಿ ಗ್ರಾಮದಲ್ಲಿ ಅಂಬರೀಶ್‌ ಗುಂಡೇಟಿಗೆ ಜೀವತೆತ್ತಿದ್ದಾರೆ. ಇಂತಹ ಸಂದಿಗ್ದ ಕಾಲಘಟ್ಟದಲ್ಲಿ ಮನೆಯಲ್ಲಿಲಟ್ಟ ಬಂದೂಕು ಕಳವು ಪ್ರಕರಣವನ್ನು ಗೃಹಸಚಿವರು ಗಂಭೀರವಾಗಿ ಪರಿಗಣಿಸದಿದ್ದರೆ ಅನಾಹುತ ಸಂಭವಿಸಬಹುದು ಎಂಬ ಆತಂಕ ಸಾರ್ವಜನಿಕರಲ್ಲಿದೆ.

ಶೂಟ್‌ ಔಟ್‌ ಪ್ರಕರಣ ಹೆಚ್ಚಾಗುತ್ತಿರುವ ನಡುವೆ ತಾಲ್ಲೂಕಿನ ಮಂಡಗದ್ದೆಯಲ್ಲಿ ನಾಡ ಬಂದೂಕು ಕಳ್ಳತನ ಪ್ರಕರಣ ತೀರ್ಥಹಳ್ಳಿ ಕ್ಷೇತ್ರವನ್ನೇ ಬೆಚ್ಚಿಬೀಳಿಸಿದೆ. ರಾತ್ರೋ ರಾತ್ರಿ ಒಂಟಿ ಮನೆಗಳ ಮೇಲೆ ಟಾರ್ಗೆಟ್‌ ಮಾಡುತ್ತಿರುವ ಕಳ್ಳ ಕದೀಮರ ಗ್ಯಾಂಗ್‌ ಆಸ್ತಿ ದಾಖಲೆ, ಒಡವೆ, ನಗದು ಅಪಹರಿಸುತ್ತಿದ್ದವರು ಹೊಸ ಚಾಳಿಗೆ ಕೈಹಾಕಿದ್ದಾರಾ ಎಂಬ ಅನುಮಾನ ಶುರುವಾಗ ತೊಡಗಿದೆ.

ವಯೋವೃದ್ದರು ವಾಸಿಸುತ್ತಿರುವ ಮನೆಗಳ ಮೇಲೆಯೇ ಇವರ ಕೆಂಗಣ್ಣು ಬೀಳುತ್ತಿದ್ದು ಕುಟುಂಬದವರು ಜಾಗ್ರತೆ ವಹಿಸಬೇಕಾಗಿದೆ. ಅದರಲ್ಲೂ ಬಂದೂಕಿನಂತಹ ಸೂಕ್ಷ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತಹ ಸನ್ನಿವೇಶ ತಾಲ್ಲೂಕಿನಲ್ಲಿ ಇತ್ತೀಚೆಗೆ ಸೃಷ್ಟಿಯಾಗಿದೆ. ಮೊನ್ನೆ ನೇಗಿಲಯೋಗಿ ಪ್ರಕರಣದಲ್ಲೂ ತೀರ್ಥಹಳ್ಳಿ ತಾಲ್ಲೂಕಿನ ಬಂದೂಕು ಬಳಕೆಯಾಗಿದೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಈ ನಡುವೆ ಮಂಡಗದ್ದೆ ಹೊಬಳಿಯ ಪುಟ್ಟೋಡ್ಲು ಹೆಚ್.ಟಿ. ರಾಮಕೃಷ್ಣ (73) ಎಂಬುವವರಿಗೆ ಸೇರಿದ ಕಳ್ಳರು ಯಾಮಾರಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಗೃಹಸಚಿವರ ಕ್ಷೇತ್ರದಲ್ಲೇ ಬಂದೂಕು ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಮಧ್ಯೆ ಪ್ರಕರಣ ಕೇಳುತ್ತಿದ್ದಂತೆ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದು ಇನ್ನೇನು ಅಪಾಯ ಜರುಗಲಿದೆ ಎಂಬ ಆತಂಕ ನಿರ್ಮಾಣವಾಗಿದೆ. ಅಲ್ಲದೇ ಕೇಸು ಯಾವ ಕಾಯ್ದೆಯಡಿಯಲ್ಲಿ ದಾಖಲು ಮಾಡಿಕೊಳ್ಳಬೇಕು ಎಂಬ ಗೊಂದಲ ಏರ್ಪಟ್ಟಿತ್ತು. ಕೃಷಿ ಜಮೀನು ಹೊಂದಿರುವ ರೈತರು ಬೆಳೆ ಸಂರಕ್ಷಣೆಗಾಗಿ ನಾಡ ಬಂದೂಕು ಬಳಕೆ ಮಾಡಿಕೊಳ್ಳುತ್ತಿದ್ದು ಇಂತಹದ್ದೊಂದು ಪ್ರಕರಣ ರೈತರಲ್ಲೂ ಬಾರೀ ಆತಂಕಕ್ಕೆ ಕಾರಣವಾಗಿದೆ. 

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post