ಕೊಲೆ - ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

ಇನ್ನೇನಾಗುತ್ತೋ… ಗೊತ್ತಿಲ್ಲ…?
ಕೇಸ್‌ ಸ್ಟ್ರಾಂಗ್‌ ಆಗುತ್ತೋ… ವೀಕಾಗುತ್ತೋ…

ಹೋಂ ಮಿನಿಸ್ಟರ್‌ ಕ್ಷೇತ್ರದಲ್ಲಿ ಪೊಲೀಸರು ವಿಕೇ…?

ಕೊಲೆ, ಮಾರಣಾಂತಿಕ ಹಲ್ಲೆ, ಕಳವು, ದರೋಡೆ, ಗನ್‌ ಶೂಟ್‌, ಅಕ್ರಮ ಮರಳು, ಅಕ್ರಮ ಕಲ್ಲು, ಹೆಂಡ, ಮಟ್ಕಾ, ಗಾಂಜಾ, ಇಸ್ಪೀಟು ದಂಧೆಗಳು ಎಗ್ಗಿಲದೆ ನಡುತ್ತಿದೆ. ಇಷ್ಟೆಲ್ಲ ಜ್ವಲಂತ ಸಮಸ್ಯೆಗಳು ತಾಲ್ಲೂಕು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದ್ದರು ಯಾವುದೋ ಕಠಿಣ ಕ್ರಮ ಜರುಗುತ್ತಿಲ್ಲ ಎಂಬ ಅನುಮಾನ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಹೋಂ ಮಿನಿಸ್ಟರ್‌ ಕ್ಷೇತ್ರದಲ್ಲೇ ಪೊಲೀಸರು ವೀಕ್‌ ಆದ್ರಾ ಎಂಬ ಪ್ರಶ್ನೆ ಉದ್ಬವಿಸುತ್ತಿದೆ.

ಮಹಾಲಯ ಅಮಾವಾಸ್ಯೆಯ ಕತ್ತಲೆ ಕಳೆದು ನವರಾತ್ರಿ ಆರಂಭವಾಗುತ್ತಿದ್ದಂತೆ ತೀರ್ಥಹಳ್ಳಿ ತಾಲ್ಲೂಕಿನ ಮೃಗಾವಧೆಯ ಬೆಳ್ಳಿಕೊಡುಗೆ ರಾಜು (45) ಬೆಳ್ಳಂಬೆಳಗ್ಗೆ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೊನೆಯ ಕ್ಷಣದಲ್ಲಿ ಮೃತ ವ್ಯಕ್ತಿ ಹೆಸರು ಹೇಳಿರುವುದು ಆರೋಪಿಗಳಿಗೆ ಕಂಟಕವಾಗಲಿದೆಯೇ? ಸ್ಥಳದಲ್ಲಿ ಗೃಹಸಚಿವರ ಆಪ್ತರು ಜಾಂಡಾ ಊರಿರುವುದು ತನಿಖೆ ದಿಕ್ಕು ತಪ್ಪುತ್ತಾ ಎಂಬ ಅನುಮಾನ ವ್ಯಾಪಕವಾಗುತ್ತಿದೆ.

ರಾಜು ಮೂರು ದಿನಗಳಿಂದ ಮನೆಗೆ ಬಂದಿರಲ್ಲಿಲ್ಲ. ಸೋಮವಾರ ಬೆಳಿಗ್ಗೆ ಏಕಾಏಕಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಸಾಯುವ ಭಯದಲ್ಲಿ ಮನೆ ಮುಂಭಾಗ ತಂದು ಎಸೆದಿರುವುದು ಜೀವಕ್ಕೆ ಬೆಲೆ ಇಲ್ಲವೇ ಎಂಬ ಬೇಸರ ಗ್ರಾಮಸ್ತರಲ್ಲಿ ಮೂಡುತ್ತಿದೆ. ಹಲ್ಲೆ ತೀವ್ರತೆಯಿಂದ ಕುಟುಂಬ ಸದಸ್ಯರ ಮುಂದೆ ಅಸುನೀಗಿರುವುದು ಆತಂಕ ಸೃಷ್ಟಿಸಿದೆ. ಯಾವ ಕಾರಣಕ್ಕಾಗಿ ಕೊಲೆ, ಹಲ್ಲೆ ನಡೆದಿದೆ ಎಂಬುದು ತಿಳಿದುಬಂದಿಲ್ಲ.

ಬಡತನದಲ್ಲಿ ಜೀವನ ನಡೆಸಿದ್ದ ಕುಟುಂಬದವರಿಗೆ ನ್ಯಾಯ ಸಿಗುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಪ್ರಕರಣ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇನ್ನೇನು ಮಾಡುತ್ತಾರೆ, ಕೇಸು ಸ್ಟ್ರಾಂಗ್‌ ಆಗುತ್ತೋ ಅಥವಾ ವೀಕ್‌ ಆಗುತ್ತೋ ಎಂಬ ಭಯ ಆವರಿಸಿದೆ.

ತನಿಖೆ ನಡೆಸುತ್ತಿರುವ ಪೊಲೀಸರು




ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post