ಕೆಪಿಸಿ ಸ್ವಾಧೀನದ ಸಾಗುವಳಿ ಭೂಮಿ ಹಂಚಿಕೆಗೆ ಆಗ್ರಹ

ವರಾಹಿ ಹಿನ್ನೀರು ಜಲವಿದ್ಯುತ್‌ಗೆ ಭೂಮಿ ಬಿಟ್ಟವರ ಅಳಲು
ಮುಳುಗಡೆಯಾಗದೆ ಉಳಿದ ನೂರಾರು ಎಕರೆ ಭೂಮಿ
ಬೆಲೆಬಾಳುವ ಮರಗಳ ಕಡಿತಲೆಗಾಗಿ ಸರ್ವೆ
ಡಿನೋಟಿಫಿಕೇಷನ್‌ ಮಾಡುವಂತೆ ಒತ್ತಾಯ

ವರಾಹಿ ಸಂತ್ರಸ್ತರ ಬೇಡಿಕೆಯಲ್ಲಿಯಲ್ಲಿ ಪ್ರಮಾಣಿಕತೆ ಅಡಗಿದೆ. ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದ ತಮ್ಮದೇ ಜಮೀನು ಇದೀಗ ಕೆಪಿಸಿ ಸ್ವತ್ತಾಗಿದೆ. ರಾಜ್ಯಕ್ಕೆ ವಿದ್ಯುತ್ ನೀಡುತ್ತೇವೆ ಎಂಬ ಸದಾಶದೊಂದಿಗೆ ಆರಂಭಗೊಂಡ ಬಹುತೇಕ ಜಲಾಶಯಗಳಿಂದ ಲಕ್ಷಾಂತರ ಹೆಕ್ಟೇರ್‌ ಪ್ರದೇಶ ಮುಳುಗಡೆಗೊಂಡಿದೆ. ಹಿನ್ನೀರು ಏರಿಕೆಯಾಗುತ್ತಿದ್ದ ಕಳೆದು ಹೋದ ಸಂಸ್ಕೃತಿ, ಸಂಸ್ಕಾರ, ಜಾನಪದ, ಭವಿಷ್ಯಗಳನ್ನು ಲೆಕ್ಕಹಾಕಲು ಸಾಧ್ಯವಿಲ್ಲ. ಇಷ್ಟೆಲ್ಲ ಆಗಿದ್ದರು ಜಲಾಶಯಗಳಿಂದ ಬೇಡಿಯಷ್ಟು ವಿದ್ಯುತ್‌ ಪೂರೈಕೆ ಸಾಧ್ಯವಾಗಿಲ್ಲ. ಹೀಗಾಗಿ ಪರಮಾಣು ಸ್ಥಾವರ ಹೆಚ್ಚು ಚಾಲ್ತಿಯಲ್ಲಿದೆ. ಅದರಂತೆ ಸೋಲರ್‌, ಗಾಳಿ ವಿದ್ಯುತ್‌ ಕೂಡ ಒಂದು ಅಸ್ತ್ರ. ಅರಣ್ಯ ಉತ್ಪತ್ತಿಗಳಿಂದ ಬದುಕುತ್ತಿದ್ದ ಮಾನವ ಬದಲಾಗಿದ್ದಾನೆ. ಕಾಡುಪ್ರಾಣಿಗಳು ಜಮೀನಿನಲ್ಲಿದ್ದಾವೆ. ಈ ಚಳವಳಿ ಉಗ್ರ ಸ್ವರೂಪ ಪಡೆದಿದ್ದೇ ಆದರೆ ರಾಜ್ಯದ ನಾನಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಜಲಾಶಯಗಳ ಹಿನ್ನೀರಿನ ಸಾವಿರಾರು ಎಕರೆ ಭೂಮಿ ರೈತರ ಸ್ವತ್ತಾಗಲಿದೆ…!

ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕಿನ ಗಡಿಭಾಗದ ವರಾಹಿ ಮುಳುಗಡೆ ಪ್ರದೇಶದಲ್ಲಿ ನೂರಾರು ಎಕರೆ ಸಾಗುವಳಿ ಪ್ರದೇಶ ಕಳೆದ 25 ವರ್ಷಗಳಿಂದ ಜಲಾವೃತಗೊಂಡಿಲ್ಲ. ಈ ಪ್ರದೇಶದಲ್ಲಿ ವರಾಹಿ ಜಲಾಶಯ ನಿರ್ಮಾಣ ಮಾಡುವ ಉದ್ದೇಶದಿಂದ ಮುಳುಗಡೆಯ ಪೂರ್ಣ ಜಲಾಶಯದ ಮಟ್ಟ (ಎಫ್‌ಆರ್‌ಎಲ್)‌ ಅಂತಿಮ ಗಡಿ ರೇಖೆ ಗುರುತಿಸಲಾಗಿತ್ತು. ಅದರಂತೆ ಜಲಾಶಯದ ಮಟ್ಟದ 594.36 ಅಡಿ ಎತ್ತರ ಸುಮಾರು 1800 ವಾಸಿಗಳನ್ನು ಸಂತ್ರಸ್ತರು ಎಂದು ಗುರುತಿಸಿ ಸಾಗುವಳಿ ಪ್ರದೇಶ ಹಾಗೂ ಅರಣ್ಯ ಪ್ರದೇಶಕ್ಕೆ ನೋಟಿಫಿಕೇಶನ್‌ ಮೂಲಕ ಕೆಪಿಸಿಗೆ ವಹಿಸಿದೆ. ಪ್ರಸ್ತುತ ಕೆಪಿಸಿಯ ಸ್ವಾಧೀನದಲ್ಲಿರುವ ವರಾಹಿ ಮುಳುಗಡೆ ಪ್ರದೇಶದಲ್ಲಿ ನೂರಾರು ಎಕರೆ ಫಲವತ್ತಾದ, ಸಾಗುವಳಿಗೆ ಯೋಗ್ಯವಾದ ಭೂಮಿ ಅನಾವಶ್ಯಕವಾಗಿ ಹಾಳು ಬಿಡಲಾಗಿದೆ. ಸರ್ವೆ ಕಾರ್ಯದಲ್ಲಿ ಬೆಲೆಬಾಳುವ ಪಶ್ಚಿಮಘಟ್ಟದ ಅಮೂಲ್ಯ ಮರಗಳನ್ನು ಸಾಗಿಸುವ ಉದ್ದೇಶದಿಂದ ಹೆಚ್ಚುವರಿ ಜಮೀನು ಗುರುತಿಸಲಾಗಿದೆ. ಅಲ್ಲಿದ್ದ ಬೃಹತ್‌ ಮರಗಳನ್ನು ಸಾಗಿಸಿದ್ದು ಅವುಗಳು ಬೋಳು ಗುಡ್ಡಗಳಂತಾಗಿದ್ದಾವೆ. ಅನಾವಶ್ಯವಾಗಿ ಖಾಲಿ ಉಳಿದ ನಮ್ಮ ಜಮೀನುಗಳನ್ನು ವಾಪಾಸ್ಸು ನೀಡಬೇಕು ಎಂದು ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ವರಾಹಿ ಮುಳುಗಡೆ ಪ್ರದೇಶದ ಪರಿಹಾರ ಮತ್ತು ಪುನರ್‌ ವಸತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಡೂರು ಭಾಸ್ಕರ್‌ ಜೋಯ್ಸ್‌ ಆಗ್ರಹಿಸಿದರು.

ವರಾಹಿ ಹಿನ್ನೀರು ಜಲವಿದ್ಯುತ್‌ ಯೋಜನೆಗಾಗಿ ಗುರುತಿಸಿರುವ ಬೇಗದಾಳಿ, ಕಟ್ಟೆಕೊಪ್ಪ, ಮೇಲುಸುಂಕ, ಗುಬ್ಬಿಗ, ಯಡೂರು, ಸುಳುಗೋಡು ಮುಂತಾದ ಗ್ರಾಮಗಳಲ್ಲಿ ಇಂದಿಗೂ ನೂರಾರು ಎಕರೆ ಪ್ರದೇಶ ಮುಳುಗಡೆ ಆಗಿಲ್ಲ. ನಾವು ಅಂದು ನೆಟ್ಟಿದ್ದ ಅಡಿಕೆ, ತೆಂಗು ಮರಗಳು ಫಸಲು ನೀಡುತ್ತಿದ್ದಾವೆ. ಕೆಪಿಸಿ ಅದನ್ನು ಮಾರಲು ಮುಂದಾಗಿತ್ತು. ಆಗ ಸ್ಥಳೀಯ ಪ್ರತಿರೋಧಕ್ಕೆ ಹೆದರಿ ಕೊನೆ ಕೀಳುವ ಕೆಲಸವನ್ನು ನಿಲ್ಲಿಸಿದ್ದರು. ಇನ್ನೊಂದು ಭಾಗದಲ್ಲಿ ಅತ್ಯಲ್ಪ ಪರಿಹಾರ ಸಿಕ್ಕ ಕುಟುಂಬ ಹಾಗೂ ಅರೆಬರೆ ಪರಿಹಾರ ಸಿಕ್ಕ ಕುಟುಂಬಗಳು ಅನಿವಾರ್ಯವಾಗಿ ಮುಳುಗಡೆಯಾಗದ ಜಮೀನಿನ ಬಳಕೆ ಮಾಡುತ್ತಿದ್ದಾರೆ. ಬಗರ್‌ ಹುಕುಂ ಸಾಗುವಳಿಗೆ ಅವಕಾಶ ನೀಡುವಂತೆ ಇಲ್ಲಿನ ರೈತರಿಗೂ ಅವಕಾಶ ನೀಡಬೇಕು. ಕೇಂದ್ರ ಸರ್ಕಾರ ಡಿನೋಟಿಪಿಕೇಷನ್‌ ಮಾಡುವ ಮೂಲಕ ಕೆಪಿಸಿ ಸ್ವಾಧೀನ ಭೂಮಿಯ ಮಾಲಿಕತ್ವ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ಹಾಲಿಗೆ ಮೂರ್ತಿಗೌಡ ಮಾತನಾಡಿ, ಮುಳುಗಡೆ ವ್ಯಾಪ್ತಿಯ ಗ್ರಾಮಗಳಲ್ಲಿ ಬಗರ್‌ಹುಕುಂ ಸಾಗುವಳಿ, ವಸತಿ ನಿರ್ಮಿಸಿಕೊಂಡಿರುವ ರೈತರು, ಕೃಷಿ, ಕಾರ್ಮಿಕರಿಗೆ ಯಾವುದೇ ನಿರ್ಬಂಧ ವಿಧಿಸದೆ ಸರ್ಕಾರ ಭೂ ಮಂಜೂರು ಮಾಡಬೇಕು. ಬೇಡಿಕೆ ಈಡೇರದಿದ್ದರೆ ಹೋರಾಟದ ಹಾದಿ ಇಳಿಯಬೇಕಾಗುತ್ತದೆ. ಸರ್ಕಾರ ನೀಡಿರುವ ಅತ್ಯಲ್ಪ ಪರಿಹಾರ ಧನ ಹಿಂದಿರುಗಿಸುತ್ತೇವೆ. ಸರ್ವೆಯಲ್ಲಿ ಆಗಿರುವ ದೋಷ ರೈತರ ಗಮನಕ್ಕೆ ಬಂದಿದೆ. ಯಡೂರು, ಸುಳುಗೋಡು ಗ್ರಾಮ ಪಂಚಾಯಿತಿಯನ್ನು ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿಸಬೇಕು. ಜಿಲ್ಲಾಧಿಕಾರಿಗಳು ನೀಡಿರುವ ಶಿಫಾರಸ್ಸು ಕಡತ ಕಂದಾಯ ಇಲಾಖೆ ಆಯುಕ್ತರ ಕಚೇರಿಯಲ್ಲಿ ದೂಳುಹಿಡಿಯುತ್ತಿದೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post