ಗೃಹಸಚಿವರ ಕ್ಷೇತ್ರದಲ್ಲಿ ಇದೆಂತ ಹಾವಳಿ...

ಅನೈತಿಕ ಚಟುವಟಿಕೆಯ ಕಾರಸ್ಥಾನವಾದ ಆಗುಂಬೆ
ಆಗುಂಬೆ ಪೊಲೀಸರಿಂದ ಬಯಲಾಯ್ತು ಅನೈತಿಕ ಚಟುವಟಿಕೆ ಜಾಲ
ಎಚ್ಚರಿಕೆ ವಹಿಸದಿದ್ದರೆ ಗೃಹಸಚಿವರಿಗೆ ಕೆಟ್ಟ ಹೆಸರು
ಅಗಸರಕೋಣೆಯಲ್ಲಿ ಹುಡುಗ ಹುಡುಗಿ ಓಡಿದ್ದೆಲ್ಲಿಗೆ...?

ದಕ್ಷಿಣದ ಚಿರಾಪುಂಜಿ ಎಂದು ಕರೆಸಿಕೊಳ್ಳುವ ಆಗುಂಬೆ ಪ್ರವಾಸಿಗರ ನೆಚ್ಚಿನ ತಾಣ. ಈ ಕಾರಣಕ್ಕೆ ಇಲ್ಲಿ ಹಲವಾರು ಹೋಂ ಸ್ಟೇಗಳು ತಲೆ ಎತ್ತಿವೆ. ರೇವ್ ಪಾರ್ಟಿ, ಕಾಕ್ ಟೈಲ್ ಪಾರ್ಟಿ, ಲೇಟ್ ನೈಟ್ ಪಾರ್ಟಿ, ಇಸ್ಪೀಟ್, ಎಣ್ಣೆ, ಹುಕ್ಕಾ, ಗಾಂಜಾ ಮುಂತಾದ ಪಾರ್ಟಿಯ ಸೌಲಭ್ಯಗಳನ್ನು ಹೆಚ್ಚಿನ ಯುವ ಸಮುದಾಯವನ್ನು ಸೆಳೆಯುತ್ತಿವೆ.
ಈ ಬಗ್ಗೆ ಆಗುಂಬೆ, ತೀರ್ಥಹಳ್ಳಿ ಪೊಲೀಸರಿಗೆ ದೂರುಗಳು ಪ್ರತಿನಿತ್ಯ ಹೋಗುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಭಾನುವಾರ ಆಗುಂಬೆ ಪೊಲೀಸರು ರೈಡ್ ಮಾಡಿದ್ದು ಅಗಸರಕೋಣೆಯ ಸಮೀಪ ದಕ್ಷಿಣ ಕನ್ನಡ ಮೂಲದ ಇಬ್ಬರು ಯುವಕರು, ಓರ್ವ ಯುವತಿ ಹೋಂ ಸ್ಟೇನಲ್ಲಿದ್ದರು. ದಾಳಿಯ ವೇಳೆ ಓರ್ವ ಯುವಕ, ಯುವತಿ ಪರಾರಿಯಾಗಿದ್ದು, ಒಬ್ಬ ಸಿಕ್ಕಿಬಿದ್ದಿರುತ್ತಾ‌ನೆ.
ಪೊಲೀಸರು ದಾಳಿ ನಡೆಸಿರುವುದನ್ನು ಪ್ರತ್ಯಕ್ಷದರ್ಶಿ ಸ್ಥಳೀಯರು ಘಟನೆಯನ್ನು ವಿವರವನ್ನು ಧ್ವನಿಯೊಂದಿಗೆ ಹಂಚಿಕೊಂಡಿರುತ್ತಾರೆ. ಈ ಪ್ರಕರಣದಿಂದ ಆಗುಂಬೆ ಭಾಗದಲ್ಲಿ ತಲೆ ಎತ್ತಿರುವ ಹೋಂ ಸ್ಟೇಗಳ ಮೇಲೆ ಅನುಮಾನ ಹುಟ್ಟುವಂತೆ ಮಾಡಿದೆ. ಘಟನೆಗಳ ಮಾಹಿತಿ ಇದ್ದರು ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೆಲವು ಸಂದರ್ಭಗಳಲ್ಲಿ ಮಾತ್ರ ದಾಳಿ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ಮಾದಕ ವಸ್ತುಗಳ ಪ್ರಕರಣಗಳು ಮಲೆನಾಡಿನಲ್ಲಿ ಹೆಚ್ಚುತ್ತಿದ್ದು, ಇಂತಹ ಘಟನೆಗಳು ಸಹ್ಯಾದ್ರಿ ಶ್ರೇಣಿಯ ಘನತೆಗೆ ದಕ್ಕೆಯುಂಟು ಮಾಡುತ್ತಿದೆ. ಪೊಲೀಸರು ಕೂಡ ಮಾಹಿತಿ ಹಂಚಿಕೊಳ್ಳುವಾಗ ಹಿಂದೆ ಬಿದ್ದಿದ್ದು ಸಾರ್ವಜನಿಕರು ಮಾಹಿತಿ ನೀಡಬೇಕಾದ ಅನಿವಾರ್ಯ ಸೃಷ್ಟಿಯಾದಂತಿದೆ.
ರಾಷ್ಟ್ರಮಟ್ಟದಲ್ಲಿ ತೀರ್ಥಹಳ್ಳಿಯ ಘನತೆ ಹೆಚ್ಚಿದೆ. ಪ್ರತಿನಿತ್ಯದ ಇಂತಹ ಲಕ್ಷಾಂತರ ರೂಪಾಯಿ ಅಕ್ರಮ ದಂಧೆ ನಿಯಂತ್ರಿಸದಿದ್ದರೆ ಕ್ಷಣಿಕ ಕಾಲದಲ್ಲಿ ತೀರ್ಥಹಳ್ಳಿಯ ಘನೆತೆ ಮೂರಬಟ್ಟೆಯಾಗಲಿದೆ. ಪ್ರವಾಸಿಗರನ್ನು ಸೆಳೆಯುವ ಇಂತಹ ನೀಚ ಯೋಚನೆ, ಷಢ್ಯಂತ್ರಗಳ ಹಿಂದಿರುವರನ್ನು ಪತ್ತೆ ಹಚ್ಚಬೇಕಾಗಿದೆ. ಕೆಲವರ ಬಗ್ಗೆ ಮಾಹಿತಿ ಇದ್ದರು ಪೊಲೀಸ್ ಇಲಾಖೆ ಪ್ರಭಾವಕ್ಕೆ ಒಳಗಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಸಾರ್ವಜನಿಕರ ದೂರುಗಳ ನಡುವೆ ಗೃಹಸಚಿವರು ಕಠಿಣ ಕ್ರಮ ಕೈಗೊಳ್ಳದಿದ್ದರೆ ಆರಗ ಜ್ಞಾನೇಂದ್ರ ಅವರ ಸ್ವಚಾರಿತ್ರ್ಯಕ್ಕೆ ದಕ್ಕೆ ಉಂಟಾಗುವುದು ಖಂಡಿತ. ಈ ಬಗ್ಗೆ ಸಚಿವರು ಎಚ್ಚರ ವಹಿಸಬೇಕಾಗಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post