ಸ್ಥಳಕ್ಕೆ ಆರ್.ಎಂ. ಮಂಜುನಾಥ ಗೌಡ ಭೇಟಿ
ನೆರವಿನ ಭರವಸೆ ನೀಡಿದ ಮುಖಂಡರು
ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದಾಗಿ ಮನೆ ಕುಸಿತ ಸಂಭವಿಸಿದೆ. ಅದೃಷ್ಟವಶಾತ್ ಮುನ್ಸೂಚನೆ ದೊರಕಿದ ಕಾರಣ ಮನೆಯಲ್ಲಿದ್ದವರು ಹೊರಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ನಳಿನಿ ಇಂಗ್ಲಾದಿ ಎಂಬುವವರ ಮನೆಯಾಗಿದ್ದು ಅವರ ಓರ್ವ ಪುತ್ರ ವಿಕಲಚೇತನನಾಗಿದ್ದಾನೆ. ಕುಟುಂಬ ಕಡು ಬಡತನದಲ್ಲಿ ಜೀವಿಸುತ್ತಿದೆ. ಸುದ್ದಿ ತಿಳಿದಾಕ್ಷಣ ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹಾಗೂ ಮಾಜಿ ಜಿ.ಪಂ. ಸದಸ್ಯ ಹಾರೋಗೊಳಿಗೆ ಪದ್ಮನಾಭ್ ಸ್ಥಳಕ್ಕೆ ಧಾವಿಸಿ ನೆರವಿನ ಭರವಸೆ ನೀಡಿದರಲ್ಲದೇ ತಕ್ಷಣವೇ ತೀರ್ಥಹಳ್ಳಿ ತಹಶೀಲ್ದಾರ್ ಅಮೃತ್ ಅತ್ರೇಶ್ ಅವರ ಗಮನಕ್ಕೆ ತಂದು ಸರ್ಕಾರದಿಂದ ಸೂಕ್ತ ನೆರವು ದೊರಕಿಸಿಕೊಡಲು ಕೋರಿದ್ದಾರೆ.

.jpeg)