ಚಂದ್ರಶೇಖರ್
ಗುರೂಜಿಗೂ ತೀರ್ಥಹಳ್ಳಿಗೂ ಇದೆಯಾ ನಂಟು
ತೀರ್ಥಹಳ್ಳಿಯ ಅಳಿಯ
ಮರ್ಡರ್ ಆಗಿದ್ಯಾಕೆ...?
ವಾಸ್ತುಗುರೂಜಿ ಚಂದ್ರಶೇಖರ್ ಗುರೂಜಿ ತೀರ್ಥಹಳ್ಳಿಯ ಅಳಿಯ. ಮೊದಲ ಹೆಂಡತಿ ತೀರಿದ ನಂತರ ಮಂಡಗದ್ದೆಯ ಕಾರೆಹಕ್ಲು ಯುವತಿಯನ್ನು ವರಿಸಿದ್ದರು. ಎರಡನೇ ಹೆಂಡತಿ ಅಂಕಿತಾ ವಾಸ್ತು ಕಂಪನಿಯ ದಕ್ಷಿಣ ಭಾರತದ ಮುಖ್ಯಸ್ಥರಾಗಿದ್ದರು.
ಸರಳ ವಾಸ್ತು ಖ್ಯಾತಿಯ ಗುರೂಜಿ ಚಂದ್ರಶೇಖರ್, ಹುಬ್ಬಳ್ಳಿಯ ಉಣಕಲ್ ಕೆರೆ ಬಳಿಯ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದು, ಚಾಕು ಇರಿದು ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ. ಈಗ ಕೃತ್ಯದ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು ಕೊಲೆಯ ಘೋರತೆ ಅನಾವರಣಗೊಂಡಿದೆ. ಇಬ್ಬರು ವ್ಯಕ್ತಿಗಳು ಹೋಟೆಲ್ ಲಾಬಿಯಲ್ಲಿ ಕುಳಿತಿದ್ದ ಚಂದ್ರಶೇಖರ್ ಗುರೂಜಿಯ ಆಶೀರ್ವಾದ ಪಡೆಯುವಂತೆ ಬರುತ್ತಾರೆ. ಇದ್ದಕ್ಕಿದ್ದಂತೆ ಇಬ್ಬರೂ ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿ ಕೊನೆ ಉಸಿರಿರುವವರೆಗೂ ಚುಚ್ಚಿ ಸಾಯಿಸುತ್ತಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
