ಹರ್ಷ ಕೊಲೆ ಆರೋಪಿಗಳಿಗೆ ಶಿಕ್ಷೆ ಖಂಡಿತ -ಸಚಿವ

ಗೃಹಸಚಿವರ ಸಭ್ಯ ನಡೆ ಮುಳುವಾಯಿತೇ…
ಸಚಿವರ ಮಾತು ಅರ್ಥ ಮಾಡಿಕೊಳ್ಳಲಿಲ್ವಾ ಆಶ್ವಿನಿ...!
ಹೆಣ್ಣು ಮಗಳು ತಪ್ಪಾಗಿ ಅಥೈಸಿಕೊಂಡಿದ್ದಾಳೆ - ಆರಗ

ಮಾತುಕತೆ ಸಂಭಾಷಣೆ

ಆರಗ ಜ್ಞಾನೇಂದ್ರ: ಗೊತ್ತಿದೆ… ವೀಡಿಯೋ ಎಲ್ಲ ಬಂದಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಎರಡು ಟೀಂ ಬಿಟ್ಟಿದ್ದೀವಿ. ಒಬ್ಬ ಸಿಗಬೇಕು ಅಷ್ಟೇ.. ನಾವು ಎಲ್ಲವನ್ನ ಮಾಡುತ್ತಿದ್ದೇವೆ. ಮತ್ತೊಂದು ಕೇಸ್‌ ಹಾಕಿದ್ರೆ ಅವರು ಹೊರ ಬರುವ ಪರಿಸ್ಥಿತಿ ಇಲ್ಲ. ಯಾರನ್ನು ವರ್ಗಾವಣೆ ಮಾಡಿಲ್ಲ. ಈ ಹಿಂದೆ ಒಮ್ಮೆ ಅದಾಗ ವರ್ಗಾವಣೆ ಮಾಡಿದ್ದು. ಈಗ ನಾವೇ ಕರೆಸಿ ರೈಡ್‌ ಮಾಡಿದ್ದೇವೆ.

ಅಶ್ವಿನಿ: ತಪ್ಪು ಮಾಡಿದ 5 ಜನ ಇನ್ನೂ ಕೆಲಸದಲ್ಲಿ ಇದ್ದಾರಾ ಅಥವಾ ತೆಗೆದಿದ್ದೀರಾ..? ನನಗೆ ಬಂದ ಮಾಹಿತಿ ಪ್ರಕಾರ ಅವರನ್ನ ವರ್ಗಾವಣೆ ಮಾಡಿದ್ದೀರಾ ಅಂತಾ ಹೇಳುತ್ತಿದ್ದಾರೆ.

ಆರಗ ಜ್ಞಾನೇಂದ್ರ: ನಿನಗೇನಿದೆ ಅಷ್ಟೇ ಕಾಳಜಿ ನಮಗೂ ಇದೆ. ಇಲ್ಲಿವರೆಗೂ ನಾವು ನಿಮ್ಮ ಜೊತೆಯಲ್ಲಿ ನಿಂತಿದ್ದೀವಿ. ನೀನು ಫೋನ್‌ ಮಾಡಿ ಮಾತಾಡಬಹುದಿತ್ತು. ಎಲ್ಲರನ್ನು ಯಾಕೆ ಕರೆತಂದೆ.

ಅಶ್ವಿನಿ: ಸರಿ ಸರ್..‌ ಇನ್ನೊಂದು ವಾರದಲ್ಲಿ ಅವರ ವಿರುದ್ಧ ನೀವು ಕ್ರಮ ಕೈಗೊಳ್ಳಿ.

ಆರಗ ಜ್ಞಾನೇಂದ್ರ: ನೀನು ನನಗೆ ಇದೆಲ್ಲ ಹೇಳಬೇಡ. ನಿಮ್ಮ ಇಡೀ ಕುಟುಂಬದ ಜೊತೆ ನಾವಿದ್ದೇವೆ. ಅಂದ್ರೆ ಏನ್‌ ಮಾತಾಡ್ತೀಯಾ ನೀನು. ನಾವೇನ್‌ ನಿಮಗೆ ದ್ರೋಹ ಮಾಡ್ತಾ ಇದ್ದೀವಾ ನೀನು..? ಕೂಗಾಡಬೇಡ.

ಅಶ್ವಿನಿ: ಸರಿ ಸರ್‌… ನಾನು ನ್ಯಾಯ ಕೇಳೋಕೆ ಬಂದ್ರೆ ಒಳ್ಳೆಯ ಮರ್ಯಾದೆ ಕೊಟ್ಟಿದ್ದೀರಿ. ಥ್ಯಾಂಕ್  ಯೂ ಸೋ ಮಚ್.

ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವಧಾನ ಇಲ್ಲ, ಅವರು ಹೇಳಿದಂತೆ ನಾನು ಕೇಳಲು ಆಗುವುದಿಲ್ಲ. ನಾನು ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಹರ್ಷ ಕುಟುಂಬದವರು ಹೇಳಿದ ರೀತಿಯಲ್ಲಿ ನಾನು ಮಾಡಲಿಕ್ಕೆ ಆಗೊಲ್ಲ. ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಒಬ್ಬ ಗೃಹ ಸಚಿವನಾಗಿ ಆರೋಪಿಗಳನ್ನು ಎಳೆ ತಂದು ಅವರ ಮುಂದೆ ಹೊಡೆಯಲು ಆಗುತ್ತಾ ಅಥವಾ ಅವರ ಮೇಲೆ ಫೈರ್ ಮಾಡಲು ಆಗುತ್ತಾ? ಹರ್ಷ ಕೊಲೆಯಿಂದ ಅವರ ಕುಟುಂಬಕ್ಕೆ ಎಷ್ಟು ನೋವಾಗಿದೆಯೋ ಅಷ್ಟೇ ನೋವು ನನಗೂ ಆಗಿದೆ. ಹರ್ಷ ಕುಟುಂಬದ ಎಲ್ಲರೂ ಸಾಂತ್ವನ ಹೇಳಿದ್ದೇವೆ. ತೀರಿಕೊಂಡ ಹರ್ಷನನ್ನು ಬದುಕಿಸಲು ಆಗುವುದಿಲ್ಲ. ಆದರೆ ಅವರ ಆತ್ಮಕ್ಕೆ ಶಾಂತಿ ಕೊಡಿಸಲು ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುತ್ತೇವೆ.

ನಾನು ಹರ್ಷ ಕುಟುಂಬ ಭೇಟಿ ಮಾಡಿಲ್ಲಾ ಅಂತಲ್ಲ. ನಾನು ಅವರ ಕುಟುಂಬ ಭೇಟಿ ಮಾಡಿದ್ದೇನೆ. ಭೇಟಿ ಮಾಡಿದಾಗ ಅವರು ಏನೇನೋ ಮಾತನಾಡುತ್ತಾರೆ. ಯಾವತ್ತು ಮಾಡುತ್ತಿರಿ, ಯಾವ ಕ್ಷಣದಲ್ಲಿ ಮಾಡುತ್ತೀರಿ ಅಂತೆಲ್ಲಾ ಕೇಳುತ್ತಾರೆ. ಹೀಗೆ ಮಾತನಾಡಿದ್ರೆ ನಾನು ಗೃಹ ಸಚಿವನಾಗಿ ಏನು ಮಾತನಾಡಲು ಸಾಧ್ಯ? ಹಾಗಾಗಿ ಜಾಸ್ತಿ ಮಾತನಾಡುವುದಿಲ್ಲ ಎಂದಿರುವೆ. ಸಮಾಧಾನವಾಗಿ ಮಾತನಾಡಿ ಎಂದರೆ ಕೂಗಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಕೊಲೆ ಆರೋಪಿಗಳು ಜೈಲಿನಲ್ಲಿ ಪೋನ್ ಬಳಕೆ ಮಾಡಿರುವುದು ಕಂಡು ಬಂದ ತಕ್ಷಣ ಕ್ರಮ ತೆಗೆದುಕೊಂಡಿದ್ದೇವೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ಇಡೀ ಜೈಲನ್ನು ಜಾಲಾಡಿದ್ದೇವೆ. ಮೊದಲು ಸೀಜ್ ಮಾಡುವ ಪ್ರಕ್ರಿಯೆ ಮಾತ್ರ ಇತ್ತು. ಈಗ ಅವರ ಮೇಲೆ ಹಾಗೂ ಮೊಬೈಲ್ ಒಳಗೆ ಬಿಟ್ಟ ಸಿಬ್ಬಂದಿಯ ಮೇಲೂ ಎಪ್.ಐ.ಆರ್. ಆಗಿದೆ. ತಪ್ಪು ಮಾಡಿದ ಸಿಬ್ಬಂದಿಯನ್ನು ಅಮಾನತ್ತು ಮಾತ್ರ ಮಾಡುವುದಿಲ್ಲ. ಅವರನ್ನು ಅದೇ ಜೈಲಿನಲ್ಲಿ ತಂದು ಕೂರಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post