ಹಂದಿ ಅಣ್ಣಿ ಬರ್ಬರ ಹತ್ಯೆ

ಹಾಡಹಗಲೇ ನಿರ್ದಯವಾಗಿ ಕೊಲೆ

ನಡು ರಸ್ತೆಯಲ್ಲಿ ಹೆಣವಾದ ಹಂದಿ ಅಣ್ಣಿ

12 ವರ್ಷದ ಹಿಂದೆ ಲವ-ಕುಶ ಕೊಂದ ಆರೋಪಿ

ಮುಗಿಲು ಮುಟ್ಟಿದ ತಾಯಿಯ ರೋಧನ

ನಡು ರಸ್ತೆಯಲ್ಲೇ ಕುಖ್ಯಾತ ರೌಡಿ ಹಂದಿ ಅಣ್ಣಿ ಬರ್ಬರ ಕೊಲೆಯಾಗಿದೆ. ಬೆಳ್ಳಂಬೆಳಗ್ಗೆಯೇ ಶಿವಮೊಗ್ಗದಲ್ಲಿ ನೆತ್ತರು ಹರಿದಿದೆ. ಕುಖ್ಯಾತ ರೌಡಿಶೀಟರ್ ಹಂದಿ ಅಣ್ಣಿಯನ್ನು ಬರ್ಬರವಾಗಿ ನಡು ರಸ್ತೆಯಲ್ಲೇ ಕೊಲೆಯಾಗಿದೆ. ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಹಂದಿ ಅಣ್ಣಿ ತಾಯಿ ಸ್ಥಳಕ್ಕೆ ಬಂದು ರೋಧಿಸುತ್ತಿರುವ ದೃಶ್ಯ ಕಂಡುಬಂದಿದೆ.

ವಿನೋಬನಗರದ ಚೌಕಿ ವೃತ್ತದಲ್ಲಿ ಹಂದಿ‌ ಅಣ್ಣಿ ಸ್ಕೂಟರ್‌ನಲ್ಲಿ ಬರುತ್ತಿರುವಾಗ ಇನೋವಾ ಕಾರಿನಿಂದ ಅಡ್ಡಗಟ್ಟಿದ ಐದಾರು ಜನರ ಗುಂಪು ನಿರ್ದಯವಾಗಿ ಹತ್ಯೆ ಮಾಡಿದ್ದಾರೆ. ಬೆಳಗ್ಗೆ 10:40 ರ ಸುಮಾರಿಗೆ ಘಟನೆ ನಡೆದಿದೆ. ಮುಖ್ಯವೃತ್ತದಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. ಸುಮಾರು 12 ವರ್ಷದ ಹಿಂದೆ ಕುಖ್ಯಾತ ರೌಡಿಗಳಾದ ಲವ-ಕುಶ ಎಂಬುವವರನ್ನು ಎಪಿಎಂಸಿ ಸಮೀಪ ಕೊಲೆಗೈದ ಆರೋಪ ಹಂದಿ ಅಣ್ಣಿ ಮೇಲೆ ಇತ್ತು. ಶಿವಮೊಗ್ಗ ಸಾಗರ ರಸ್ತೆಯಲ್ಲಿರುವ ಲೇಔಟ್‌ ವ್ಯವಹಾರವೊಂದರಲ್ಲಿ  ಉಂಟಾದ ದ್ವೇಷ ಕೊಲೆಗೆ ಕಾರಣ ಎಂಬ ಮಾತುಗಳ ಕೇಳಿಬರುತ್ತಿದೆ. ಹಾಡುಹಗಲೇ ನಡು ರಸ್ತೆಯಲ್ಲಿ ಹಂದಿ ಅಣ್ಣಿ ಬರ್ಬರವಾಗಿ ಕೊಲೆಯಿಂದ ಹೆಣವಾಗಿರುವುದು ಇಡೀ ಶಿವಮೊಗ್ಗವನ್ನೇ ಬೆಚ್ಚಿ ಬೀಳಿಸಿದೆ. ಅನೇಕ ಪಾತಕ ಕೃತ್ಯಗಳಿಗೆ ಜೀವಂತ ಸಾಕ್ಷಿಯಂತಿರುವ ಶಿವಮೊಗ್ಗದಲ್ಲಿ ಪದೇ ಪದೇ ನಡು ರಸ್ತೆ ಕೊಲೆಯ ಘಟನೆಗಳು ನಡೆಯುತ್ತಿರುವುದು ಪೊಲೀಸರಿಗೂ ತಲೆನೋವು ತಂದಿದೆ. ಹಂದಿ ಅಣ್ಣಿ ಕೊಲೆಯ ಘಟನೆ ಶಿವಮೊಗ್ಗ ಪಾತಕ ಲೋಕದ ಇತಿಹಾಸ ಪುಟವನ್ನು ಮತ್ತೆ ಹುಡುಕುವಂತೆ ಮಾಡಿದೆ. ಕೊಲೆ ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಸರ್ವ ಸನ್ನದ್ದರಾಗಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post