"ಪೊಲೀಸರಿಂದ ನನ್ನ ಧಾರ್ಮಿಕ ಸ್ವಾತಂತ್ರಕ್ಕೆ ದಕ್ಕೆ"

ಗಾಂಧಿ ಚೌಕದಲ್ಲಿ ವ್ಯಕ್ತಿಯೋರ್ವನಿಂದ ಹೈಡ್ರಾಮ
ಹಸುಗೂಸ ಎತ್ತಿ ಹಿಡಿದು ಮಳೆಯಲ್ಲಿ ಪ್ರತಿಭಟನೆ
ಕಾರಿನಲ್ಲಿ ವಾಸವಾದ ಕುಟುಂಬಕ್ಕೆ ಕಿರುಕುಳ...?
ಮಹಿಳಾ ಮತ್ತು ಮಕ್ಕಳ ಆಯೋಗ ಎಲ್ಲಿ...?

ಬಾಲೆಗೆ ಛತ್ರಿ ಹಿಡಿದ ಮಹಾತಾಯಿ

ಪೊಲೀಸರಿಂದ ತನ್ನ ಧಾರ್ಮಿಕ ಸ್ವಾತಂತ್ರ್ಯಕ್ಕೆ ಆಡ್ಡಿಯಾಗುತ್ತಿದೆ. ಬೇಕೆಂದು ಕಿರುಕುಳ ನೀಡುತ್ತಿದ್ದಾರೆ ಎಂದು ಮಾರ್ಕ್‌ ಮಿನೇಜಸ್‌ ಭಟ್ಟಿ ಎಂಬ ವ್ಯಕ್ತಿ ತೀರ್ಥಹಳ್ಳಿಯ ಗಾಂಧಿ ಚೌಕದಲ್ಲಿ ಹಸುಗೂಸನ್ನು ಸುರಿಯುವ ಮಳೆಯಲ್ಲಿ ಒಂದೇ ಕೈಯಲ್ಲಿ ಹಿಡಿದು ತನ್ನ ಪತ್ನಿಯೊಂದಿಗೆ ಪ್ರತಿಭಟಿಸಿದ ಘಟನೆ ನಡೆದಿದೆ. ಈ ವ್ಯಕ್ತಿ ತನ್ನ ಟಾಟ ನ್ಯಾನೋ ಕಾರಿನ ಮೇಲೆ ಅಲ್ಲಾಹ್‌ನ ಸಂದೇಶ ಸಾರುವ ಘೋಷಣೆಗಳನ್ನು ಬರೆಸಿಕೊಂಡು ತಿರುಗಾಡುತ್ತಿದ್ದರು. ಅಲ್ಲದೇ ಹೋಟೆಲ್‌ ಅಲಂಕಾರ್‌ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ಹಲವು ಸಮಯದಿಂದ ಆ ಕಾರನ್ನು ಪಾರ್ಕ್‌ ಮಾಡಲಾಗಿತ್ತು. ಇದು ಭಜರಂಗದಳದ ಓರ್ವ ಕಾರ್ಯಕರ್ತನ ಕಣ್ಣಿಗೆ ಬಿದ್ದು ಆತ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಿದನಲ್ಲದೇ ಪೊಲೀಸರ ಗಮನಕ್ಕೂ ತಂದಿದ್ದ.

ಭಾನುವಾರ ಆ ಕಾರನ್ನು ಅಲ್ಲಿಂದ ತೆರವುಗೊಳಿಸಲು ಮುಂದಾದಾಗ ತೀವ್ರ ಪ್ರತಿರೋಧ ತೋರಿದ ಆ ವ್ಯಕ್ತಿಯನ್ನು ಬಂಧಿಸಲು ಬಂದಿದ್ದ ಪೊಲೀಸರು ತಬ್ಬಿಬ್ಬಾದರು, ವರದಿಗಾರರು ಆತನನ್ನು ಪಶ್ನಿಸಿದಾಗ ಇವರು ನನ್ನ ಧಾರ್ಮಿಕ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ. ಕಾರಿನಲ್ಲಿ ನನ್ನ ಸಂಸಾರವೇ ಇದೆ. ನನಗೆ ದೇವರ ಬಗ್ಗೆ ನಂಬಿಕೆ ಇದೆ. ನನ್ನ ನಂಬಿಕೆಯನ್ನು ಪ್ರಚಾರ ಮಾಡುತ್ತಾ ಯಾರಾದರೂ ಸಹೃದಯರು ಕೊಡುವ ಹಣದಿಂದ ಬದುಕುತ್ತಿರುವೆ ಇದು ತಪ್ಪು ಎಂದು ಯಾವ ಕಾನೂನು ಹೇಳಿದೆ ಅದನ್ನು ಪೊಲೀಸರು ಸಾಭೀತು ಪಡಿಸಲು ಸವಾಲು ಹಾಕಿದರು.

ಬಾಲೆಗೆ ಛತ್ರಿ ಹಿಡಿದ ಮಹಾತಾಯಿ
ಸ್ವಯಂ ಘೋಷಿತ ದೇವಮಾನವ ಸಂಸಾರ ಬೀದಿಗೆ ತಳ್ಳುತ್ತಿದ್ದಾರೆ ಎಂದು ಪ್ರಹಾಸ ನಡೆಸಿದ್ದರು. ಪ್ರತಿಭಟನೆಗಾಗಿ ಆತನದ್ದು ಎಂದು ಹೇಳಲಾದ 5 ತಿಂಗಳ ಮಗುವನ್ನು ಮಳೆಯಲ್ಲಿ ಒಂದೇ ಕೈಯಿಂದ ಎತ್ತಿ ಹಿಡಿದಿದ್ದ. ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ ನೀರಿನಿಂದ ರಕ್ಷಿಸಲು ಹೊಳೆಯಲ್ಲಿ ತೇಲುತ್ತಿರುವಾಗ ಮಗವನ್ನು ಎತ್ತಿ ಹಿಡಿದರೆ ಈ ಆಸಾಮಿ ತದ್ವಿರುದ್ದವಾಗಿ ಮೇಲಕ್ಕೆತ್ತಿ ಹಿಡಿದ್ದರು. ಇದನ್ನು ಯಾವುದೋ ಸಿನಿಮಾ ಮಾದರಿಯಲ್ಲಿ ಕಣ್ಣಿಗೆ ತುಂಬಿಕೊಳ್ಳುತ್ತಿದ್ದ ಜನರಲ್ಲಿ ಇರದ ಕರುಣೆ ಬಿಕ್ಷೆ ಬೇಡುವ ತಾಯಿಯೊಬ್ಬರು ತೋರಿಸಿದರು. ಮಳೆಯಿಂದ ಒದ್ದೆಯಾಗುತ್ತಿದ್ದ ಮಗುವನ್ನು ಕಂಡ ಬಿಕ್ಷೆ ಬೇಡುವ ಜವಾಬ್ದಾರಿಯುತವಾಗಿ ಮಗುವಿಗೆ ಮಳೆಯ ಹನಿ ತಾಗದಂತೆ ಛತ್ರಿ ಹಿಡಿದು ತಮ್ಮೊಳಗಿನ ತಾಯ್ತನವನ್ನು ಗಾಂಧಿ ಚೌಕದಲ್ಲಿ ಸೇರಿದ್ದ ಮಹಿಳಾ ಪೊಲೀಸರಾದಿಯಾಗಿ ಎಲ್ಲರ ಮುಂದಿಟ್ಟರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post