
ಒತ್ತಡದಿಂದ ರೋಗ ಹೆಚ್ಚುತ್ತಿದೆ. ಯುವ ಜನತೆ ಆರೋಗ್ಯವಾಗಿರಲು ಯೋಗ ಯೋಗ್ಯವಾದ
ಮಾರ್ಗ. ಪ್ರತಿಯೊಬ್ಬರು ಯೋಗಭ್ಯಾಸ ರೂಢಿ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಮಂಜುಳಾ ಭಜಂತ್ರಿ
ಸಲಹೆ ನೀಡಿದರು.
ಮಂಗಳವಾರ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾ,
ತಾಲ್ಲೂಕು ಪಂಚಾಯಿತಿ, ಆಯುಷ್ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ವಿವಿಧ
ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಯೋಗ ಮಾಡುವುದರಿಂದ ದುಶ್ಚಟದಿಂದ ದೂರ ಸರಿಯಬಹುದು. ಮಾನಸಿಕ ದೃಢತೆ, ದೈಹಿಕ
ಕ್ಷಮತೆ ಕಾಪಾಡಿಕೊಂಡು ಒತ್ತಡದಿಂದ ಮುಕ್ತಿ ಪಡೆಯಬಹುದು. ವೇಗದ ಜೀವನಕ್ಕೆ ಹೊಂದಿಕೊಂಡಿರುವ ಯುವ ಜನತೆ
ರೋಗಕ್ಕೆ ತುತ್ತಾಗುತ್ತಿದ್ದು ನಿಯಂತ್ರಣದ ಮಾರ್ಗವಾಗಿ ಯೋಗ ಇದೆ ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ವಿ. ಸತೀಶ್ ಶೆಟ್ಟಿ ಮಾತನಾಡಿದರು.
ಡಾ. ನಮಿತಾ ಉಡುಪ ಯೋಗ ಕುರಿತು ಉಪನ್ಯಾಸ ನೀಡಿದರು. ನೋಡಲ್ ಅಧಿಕಾರಿ ಡಾ. ರವಿಶಂಕರ್ ಉಡುಪ ಪ್ರಾಸ್ತಾವಿಕವಾಗಿ
ಮಾತನಾಡಿದರು. ತಾಲ್ಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ ವಿಜೇತರಾದ ಗಾನಶ್ರೀ, ವರ್ಷ, ನಾಗಸುಧೆ, ಭಾಷಣ
ಸ್ಪರ್ಧೆಯಲ್ಲಿ ವಿಜೇತರಾದ ಅನ್ವಿತಾ ಭಟ್, ರಾಹಿಲ, ಶೃಂಗ ಅವರುಗಳಿಗೆ ಆಯುಷ್ ಇಲಾಖೆ ವತಿಯಿಂದ ಬಹುಮಾನ
ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ
ಶೆಟ್ಟಿ,, ಮುಖ್ಯಾಧಿಕಾರಿ ಕುರಿಯಕೋಸ್, ತಾಲ್ಲೂಕು ವೈದ್ಯಾಧಿಕಾರಿ ಡಾ. ನಟರಾಜ್, ಜೆಸಿಐ ಅಧ್ಯಕ್ಷೆ
ವಿನುತಾ ಮುರುಳೀಧರ್ ಮತ್ತಿತರರು ಇದ್ದರು. ಡಾ. ಗಣೇಶ್ ಕಾಮತ್ ಸ್ವಾಗತಿಸಿದರು. ಡಾ. ಸುಚಿತ್ರಾ
ವಂದಿಸಿದರು. ಹಿರಿಯ ಪಶು ವೈದ್ಯಾಧಿಕಾರಿ ಡಾ. ಮುರುಳೀಧರ್ ನಿರೂಪಿಸಿದರು.