ಹಾದಿಗಲ್ಲು ಪ್ರಕರಣದ ಆರೋಪಿ ಬಂಧನ
ದರೋಡೆಗೆ ಯತ್ನಿಸಿದವರು ಪೊಲೀಸರ ವಶ
ಕೋಣಂದೂರು ಸಮೀಪ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗ ಗ್ರಾಮದ ಸಿದ್ದಿಪುರದಲ್ಲಿ ದರೋಡೆಗೆ ಯತ್ನಿಸಿದ್ದ ಮತ್ತೊಬ್ಬ ಆರೋಪಿ ಸಿಕ್ಕಿಬಿದ್ದಿದ್ದಾನೆ. ಹುಂಚದಕಟ್ಟೆ ಸಮೀಪ ಬಸ್ ಚಾರ್ಜ್ ನೀಡುವಂತೆ ಪೀಡಿಸುತ್ತಿದ್ದ ತಿಪ್ಪೇಶಿ (28) ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿ ಹುಂಚ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ತಿಪ್ಪೇಶಿ ಕೊಪ್ಫಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಚಳಗೇರಿ ಗ್ರಾಮದವರಾಗಿದ್ದು ತಿಪ್ಪೇಶಿ ಕೋಣಂದೂರಿನಲ್ಲಿ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಇನ್ನೋರ್ವ ಕಳ್ಳ ಸಂಗಮೇಶ್ (23) ಸಿದ್ದಿಪುರ ಗ್ರಾಮಸ್ಥರು ಗುರುವಾರ ಸಂಜೆ ಪೊಲೀಸರ ವಶಕ್ಕೆ ಒಪ್ಪಿಸಿರುತ್ತಾರೆ.