ಸರಳ ಬಸ್ ನಿಲ್ದಾಣದಲ್ಲಿ ಚೇತನ್ ಮೃತದೇಹ ಪತ್ತೆ
ಹಿಟ್ ಅಂಡ್ ರನ್ ಅನುಮಾನ
ತೀರ್ಥಹಳ್ಳಿ: ತೀರ್ಥಹಳ್ಳಿ ಸಮೀಪದ ಸರಳ ಬಸ್ ನಿಲ್ದಾಣ ಯುವಕನೊಬ್ಬ ಅನಾಮಧೇಯ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಅಥವಾ ಶನಿವಾರ ಮುಂಜಾನೆ ಸಂಭವಿಸಿದೆ.
ಸರಳ ಗ್ರಾಮದ ಮೂಡಬಳ್ಳಿಯ ಶಂಕರಪ್ಪ ಪುತ್ರ ಚೇತನ್ (27) ಮೃತ ಯುವಕ.
ಸರಳ ಬಸ್ ಸ್ಟಾಪ್ ಹತ್ತಿರ ಶವ ಪತ್ತೆಯಾಗಿದೆ. ಶವದ ಮೈಮೇಲೆ ಕೆಲವು ಗಾಯಗಳಾಗಿವೆ.
ಮಧ್ಯ ರಸ್ತೆಯಲ್ಲಿ ಶವ ಪತ್ತೆಯಾಗಿದ್ದು ಬೈಕ್ ರಸ್ತೆ ಪಕ್ಕ ನಿಂತಿದೆ.