ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಹಲ್ಲೆ
ಆರೋಪಿಗಳ ವಿರುದ್ಧ ಎಫ್‌ಐಆರ್
![]() |
| ಹಲ್ಲೆಗೊಳಗಾದ ಸದಸ್ಯ ಸಚಿನ್ ಅವರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಬಿ.ಆರ್. ಮೋಹನ್, ಕಜಾಂಚಿ ಮಧುರಾಜ್ ಹೆಗ್ಡೆ, ಮಧ್ಯಮ ಸಲಹೆಗಾರ ಅರುಣ್ ಮಲ್ಲೇಸರ ಮಾಹಿತಿ ಪಡೆದರು. |
ಮುಳುಬಾಗಿಲು ಗ್ರಾಮ ಪಂಚಾಯಿತಿಯ 15ನೇ ಹಣಕಾಸಿನಲ್ಲಿ
ಮಂಜೂರಾದ 95 ಸಾವಿರ ಮೊತ್ತದ ಕಾಂಕ್ರಿಟ್ ರಸ್ತೆ ಕಾಮಗಾರಿ ವೇಳೆ ಕ್ಷುಲ್ಲಕ ಕಾರಣಕ್ಕೆ ಘರ್ಷಣೆ ಏರ್ಪಟ್ಟಿದೆ.
ಸಿದ್ದೇಶ್ವರ ಬಡವಾಣೆಯಲ್ಲಿ ನಡೆಯುತ್ತಿದ್ದ ಕಾಮಗಾರಿ ವೀಕ್ಷಣೆ ವೇಳೆ ಗ್ರಾ.ಪಂ. ಸದಸ್ಯನ ಮೇರೆ ಐವರು ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ಎದೆಯ ಭಾಗ ಮತ್ತು ಕಾಲು ತೀವ್ರವಾದ ಗಾಯಗಳಾಗಿದೆ. ಚಿಕಿತ್ಸೆಗಾಗಿ ತಾಲ್ಲೂಕು ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿನ್ ದೂರಿನಂತೆ ಮಹಮ್ಮದ್ ಇಲಿಯಾಸ್, ಫೈಸಲ್, ಫೈರೋಜ್ ಮತ್ತು ಸಮದ್ ಮೇಲೆ ತೀರ್ಥಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
.jpeg)
