ಯೋಜನೆಗಳ ಉಪಯೋಗ ಆಗಬೇಕಿದೆ
ತಜ್ಞರ ಮಾಹಿತಿ ಅಗತ್ಯವಾಗಿ ಪಡೆಯಿರಿ – ಆರಗ ಜ್ಞಾನೇಂದ್ರ
ಸಲಹೆ
![]() |
| ಶುಕ್ರವಾರ ತೀರ್ಥಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ಗೃಹಸಚಿವ ಆರಗ ಜ್ಞಾನೇಂದ್ರ ಕೃಷಿ ಇಲಾಖೆಯ "ಕೃಷಿ ಸಂಜೀವಿನಿ" ಲ್ಯಾಬ್ ಟು ಲ್ಯಾಂಡ್ ವಾಹನಕ್ಕೆ ಚಾಲನೆ ನೀಡಿದರು. |
ಬೇರೆಲ್ಲಾ ಇಲಾಖೆಗಳಿಗೆ ಹೋಲಿಸಿದರೆ ಕೃಷಿ ಇಲಾಖೆಯ
ಮಾಹಿತಿ ಬಹಳ ನಿಧಾನವಾಗಿ ರೈತರು ಪಡೆಯುತ್ತಿದ್ದಾರೆ. ಸವಲತ್ತು ಪಡೆದವರು ಪಕ್ಕದವರಿಗೆ ತಿಳಿಸದಂತೆ
ಮುಚ್ಚುಮರೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಜಮಾ ಮಾಡಿದ 10 ಸಾವಿರ ಹಣ ಪಡೆದವರು ಯಾರು ಎಂದು ಕೇಳಿದಾಗ
ನಿಧಾನವಾಗಿ ಒಬ್ಬೊಬ್ಬರೇ ಕೈಎತ್ತುತ್ತಾರೆ ಎಂದು ವಿನೋದವಾಗಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಒಬ್ಬರ ಮಾಹಿತಿ ಮತ್ತೊಬ್ಬರು ಹಂಚಿಕೊಂಡಾಗ ಆಧುನಿಕ
ಕೃಷಿ ವಿಸ್ತರಣೆ ಆಗುತ್ತದೆ. ತಜ್ಞರು ಜಮೀನಿಗೆ ಅಗತ್ಯವಾದ ಔಷಧೋಪಚಾರ, ಬೆಳೆ, ಧನಸಹಾಯ ಮುಂತಾದ ಮಾಹಿತಿ
ನೀಡುತ್ತಾರೆ. ಅವರಿಂದ ಮಾಹಿತಿ ಪಡೆದುಕೊಂಡು ಹೆಚ್ಚು ಜನರಿಗೆ ತಿಳಿಸುವ ಕಾರ್ಯ ಆಗಬೇಕು ಎಂದರು.
ರೈತರು ಕೈಸುಟ್ಟುಕೊಳ್ಳಬಾರದು ಅಂತ ಬೆಳೆವಿಮೆ ಮಾಡಿದ್ದಾರೆ. ಭತ್ತಕ್ಕೆ ಆಗಸ್ಟ್ 16, ಅಡಿಕೆಗೆ 31 ಜೂನ್ ಒಳಗಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬಹುದು. ರೈತರ ಬದುಕನ್ನು ಹಸನು ಮಾಡುವ ಕೆಲಸ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಮಣ್ಣಿನ ಪರೀಕ್ಷೆಗಾಗಿ ನೂತನ ವಾಹನ ನೀಡಿದ್ದೇವೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
