ನೆಲ್ಲಿಸರ ಕ್ಯಾಂಪ್ ಮೀನುಗಾರರ ಮೇಲೆ ಹಲ್ಲೆ
ವೈದ್ಯರಿಂದ ಮಾಹಿತಿ ಪಡೆದ ಆರ್ ಎಂಎಂ
ಮಂಡಗದ್ದೆ ಸಮೀಪದ ನೆಲ್ಲಿಸರ ಕ್ಯಾಂಪ್ ಬಳಿ ನಡೆದ ಮಾರಣಾಂತಿಕ ಹಲ್ಲೆಯಿಂದ ಚಿಕಿತ್ಸೆ ಪಡೆಯುತ್ತಿರುವ ಯುವಕರ ಆರೋಗ್ಯವನ್ನು ರಾಜ್ಯ ಕಾಂಗ್ರೆಸ್ ಸಹಕಾರ ವಿಭಾಗದ ಸಂಚಾಲಕ ಡಾ.ಆರ್.ಎಂ. ಮಂಜುನಾಥ ಗೌಡ ವಿಚಾರಿಸಿದರು.
ಘಟನೆ ಮಾಹಿತಿ ಪಡೆಯುತ್ತಿದ್ದಂತೆ ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ ಗೌಡ ಮೆಗ್ಗಾನ್ ಆಸ್ಪತ್ರೆಗೆ ತೆರಳಿದ್ದಾರೆ. ವೈದ್ಯಾಧಿಕಾರಿಗಳೊಂದಿಗೆ ಆರೋಗ್ಯದ ಕುರಿತು ಚರ್ಚಿಸಿ, ಚಿಕಿತ್ಸೆಯ ಮಾಹಿತಿ ಪಡೆದಿದ್ದಾರೆ.