ಕುಪ್ಪಳ್ಳಿಯಿಂದ ಕಾಂಗ್ರೆಸ್ ಪಾದಯಾತ್ರೆ ಎಚ್ಚರಿಕೆ
ದೇಶ ದ್ರೋಹಿ ಪ್ರಕರಣಕ್ಕೆ ಆಗ್ರಹ
ದೇಶ ವಾಸಿಗಳನ್ನು ಅವಮಾನಿಸುವ ಪ್ರಯತ್ನ ರೋಹಿತ್ ಚಕ್ರತೀರ್ಥನಿಂದ ನಡೆದಿದೆ. ಪಠ್ಯ ಕ್ರಮವನ್ನು ಬದಲಾಯಿಸಿ ನಾಡಗೀತೆಗೆ ಅವಮಾನಿಸಿರುವ ರೋಹಿತ್ ಚಕ್ರತೀರ್ಥ ದೇಶವಾಸಿಗಳ ದ್ರೋಹಿ. ಇತಿಹಾಸ ಪ್ರಜ್ಞೆ ಇಲ್ಲದ ರೋಹಿತ್ ಚಕ್ರತೀರ್ಥ ದೇಶವನ್ನು ಇಬ್ಬಾಗಿಸುವ ಕುತಂತ್ರ ನಡೆಸುತ್ತಿದ್ದು ಆತನ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸಬೇಕು - ಮುಡುಬ ರಾಘವೇಂದ್ರ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ನಾರಾಯಣಗುರು, ಪಿ. ಲಂಕೇಶ್, ಅಂಬೇಡ್ಕರ್, ಬಸವಣ್ಣನವರ ಪಠ್ಯವನ್ನು ಕೈ ಬಿಡಲಾಗಿದೆ. ಶಾಲೆಯಿಂದಲೇ ಕೇಸರೀಕರಣ ಸಿದ್ದತೆ ನಡೆದಿದೆ. ಮಕ್ಕಳ ಭವಿಷ್ಯದ ಹೊಣೆ ಹೊತ್ತು ಬಿಜೆಪಿ ಸರ್ಕಾರ ರೋಹಿತ್ ಚಕ್ರತೀರ್ಥ ವಜಾಗೊಳಿಸಬೇಕು. ಇಲ್ಲದಿದ್ದರೆ ಕುಪ್ಪಳ್ಳಿಯಿಂದ ಪಾದಯಾತ್ರೆ ನಡೆಸುವುದಾಗಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ ನೇತೃತ್ವದ ಪ್ರತಿಭಟನಾ ಸಭೆ ಆಗ್ರಹಿಸಿತುನಾಡಗೀತೆ, ಕುವೆಂಪು ಅವರಿಗೆ ಅವಮಾನಿಸಿ ಶಿಕ್ಷಣ ಕ್ಷೇತ್ರವನ್ನು ಕಲುಷಿತ ಮಾಡಿದ್ದಾರೆ. ಇಂತಹವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಕಿಮ್ಮನೆ ರತ್ನಾಕರ ಅವರ ನೇತೃತ್ವದಲ್ಲಿ ಕುಪ್ಪಳ್ಳಿಯಿಂದ ಪಾದಯಾತ್ರೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಟಮಕ್ಕಿ ಮಹಬಲೇಶ್,
ಇತಿಹಾಸ ತಿರುಚುವ ಕೆಲಸ ಹಿಂದಿನಿಂದ ನಡೆದಿದೆ. ಮುಸ್ಸದಿ ರಾಜಕಾರಣಿ ವಾಜಪೇಯಿ ಕಾಲದಿಂದಲೇ ಕೇಸರಿ
ಸಾಹಿತ್ಯ ಆರಂಭವಾಗಿದೆ. ಮಕ್ಕಳಲ್ಲಿ ವಿಷಬೀಜ ಬಿತ್ತುವ ಕೆಲಸ ಸರಿಯಲ್ಲ. ಭಾರತ ಸರ್ವ ಜನಾಂಗದ ಶಾಂತಿಯ
ತೋಟ ಎಂದರು.
ಸೂಲಿಬೆಲೆಯ ಚಿನ್ನದ ರಸ್ತೆಯಲ್ಲಿ ಮಲೆನಾಡಿಗರು ಹೂಟಿ ಮಾಡುತ್ತಿದ್ದಾರೆ. ಅಂದೇ
ಸಂತತಿಯ ಚಕ್ರತೀರ್ಥನಿಂದ ಕನ್ನಡಕ್ಕೆ ಅಪಮಾನವಾಗಿದೆ. ಆಡಳಿತ ಪಕ್ಷಕ್ಕೆ ರೈತ ನಾಯಕ ರಾಕೇಶ್ ಟಿಕಾಯತ್
ಅವರಿಗೆ ಭದ್ರತೆ ನೀಡಲು ಸಾಧ್ಯವಾಗಿಲ್ಲ ಎಂದು ಯುವ ಕಾಂಗ್ರೆಸ್
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಕೆಳಕೆರೆ ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಸದಸ್ಯರಾದ ಬಿ.ಗಣಪತಿ, ಸುಶೀಲ, ಗೀತಾ, ಮಂಜುಳ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕೆಳಕೆರೆ ದಿವಾಕರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ, ಮುಖಂಡರಾದ ಅಮ್ರಪಾಲಿ ಸುರೇಶ್, ಸಿಂಧುವಾಡಿ ಸತೀಶ್, ಪ್ರಶಾಂತ್ ಮುಂತಾದವರು ಇದ್ದರು.


