ಆಳ ಗಣಿಗಾರಿಕೆ
ಗೃಹಸಚಿವರ ರಾಜಕೀಯ ಭವಿಷ್ಯಕ್ಕೆ ಆತಂಕ
ಮರಳಿನ ಕಳ್ಳಾಟ ಅಧಿಕಾರಿಗಳು ಗಪ್ ಚುಪ್
ಮುಂಡೊಳ್ಳಿ ಕ್ವಾರಿಯಲ್ಲಿ ಎರ್ರಾಬಿರ್ರಿ ಲೂಟಿ
ಪ್ರತಿನಿತ್ಯ ಕಳ್ಳ ಸಾಗಾಣಿಕೆಯಾಗುತ್ತಿರುವ ಮರಳಿಗೆ ಲೆಕ್ಕವಿಲ್ಲ. ಇಲ್ಲಿಯವರಗೆ ಸಾವಿರಕ್ಕೂ ಹೆಚ್ಚು ಲೋಡ್ ಮರಳು ಕಳ್ಳಸಾಗಾಣಿಕೆಯಾಗಿದೆ. ಪರವಾನಿಗೆ ಪಡೆದ ಮರಳಿನ ಲೋಡ್ ಕೇವಲ 100 ರಿಂದ 150 ಮಾತ್ರ. ಅಧಿಕಾರಿಗಳಿಗೆ ಲಜ್ಜೆ, ನಾಚಿಕೆ ಇಲ್ಲದಂತಾಗಿದೆ. ಸಾರ್ವಜನಿಕರಿಗೆ ಉತ್ತರ ನೀಡಬೇಕಾದ ಆಡಳಿತ ಗಪ್ ಚುಪ್ ನಿಯಮ ಅನುಸರಿಸುತ್ತಿದೆ.
ಪ್ರತಿಪಕ್ಷಕ್ಕೆ ರಾಜಕೀಯ ಅಸ್ತ್ರ
ತೀರ್ಥಹಳ್ಳಿ ತಾಲ್ಲೂಕಿನ ಅಕ್ರಮ ಮರಳು ಸಾಗಾಟ ದಿನನಿತ್ಯ ಏರಿಕೆಯಾಗುತ್ತಿದೆ.
ಇದಕ್ಕೆ ಉದಾಹರಣೆಯಾಗಿ ಭಾನುವಾರ ಮುಂಡೊಳ್ಳಿಯಲ್ಲಿ ನೇರವಾಗಿ ನದಿಗೆ ಇಳಿದು ಆಳ ನದಿಯ ಗಣಿಗಾರಿಕೆ
ಮಾಡಲಾಗುತ್ತಿದೆ.
ತೀರ್ಥಹಳ್ಳಿಯ ಗಡಿ ಭಾಗದಲ್ಲಿ ಇರುವ ಕಾರಣಕ್ಕೆ ತಾಲ್ಲೂಕು ಆಡಳಿತ, ಜಿಲ್ಲಾಡಳಿತದಿಂದ
ಗಮನ ಹರಿಸುತ್ತಿಲ್ಲ. ಗೃಹಸಚಿವರ ಸ್ವಕ್ಷೇತ್ರ ಆಗಿರುವ ಕಾರಣಕ್ಕೆ ಅಧಿಕಾರಿಗಳು ರಾಜಕೀಯ ಪ್ರಭಾವ,
ಒತ್ತಡ ಎಂದು ಹೇಳುವ ಮೂಲಕ ಅಕ್ರಮಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ಈಗಾಗಲೇ ಗೃಹಸಚಿವರ ಕಾಲೆಳೆಯಲು ವಿರೋಧ ಪಕ್ಷ ಮುಂದಾಗಿದೆ. ಕ್ಷೇತ್ರದಲ್ಲಿನ
ಅಕ್ರಮ ಮರಳು ಗಣಿಗಾರಿಕೆ ಇನ್ನಷ್ಟು ಗೌರವಕ್ಕೆ ದಕ್ಕೆ ಮಾಡುವ ಸಾಧ್ಯತೆ ಇದೆ. ತಾಲ್ಲೂಕಿನ ಬಹುತೇಕ
ಕ್ವಾರಿಗಳ ಪರಿಸ್ಥಿತಿ ಇದೆ ಆಗಿದೆ. ಜೊತೆಗೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಲಾಭ
ನಷ್ಟದ ಲೆಕ್ಕಾಚಾರಕ್ಕೂ ಕಾರಣವಾಗಬಹುದು.
ಪ್ರಭಾವಕ್ಕೆ ಒಳಗಾಗಿ ಅಧಿಕಾರಿಗಳು ನಿಗಾ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ
ಬರುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಗಣಿ ಇಲಾಖೆಗೂ
ಮರಳು ಸಾಗಾಟದ ಲೆಕ್ಕ ನಿಕರವಾಗಿ ಇಲ್ಲ. ದಂಧೆ ಹತ್ತಿಕ್ಕುವ ಸವಾಲು ಗೃಹಸಚಿವರಿಗೆ ಇದ್ದು, ರಾಜಕೀಯ
ವಿವಾದದ ಪ್ರಶ್ನೆಯಾಗಿದೆ.
ನಿಯಂತ್ರಣದ ಜವಾಬ್ದಾರಿ ನೇರವಾಗಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಗಣಿ ಇಲಾಖೆ, ಗೃಹಸಚಿವರು ವಹಿಸಬೇಕು. ನಿಯಂತ್ರಣ ಆಗದಿದ್ದರೆ ಇದರ ನೇರ ಹೊಣೆಯನ್ನು ಗೃಹ ಸಚಿವರೇ ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ.


