ಗೃಹಸಚಿವರ ಕ್ಷೇತ್ರದಲ್ಲಿ ಪೊಲೀಸರು ಫುಲ್ ಸೈಲೆಂಟ್
ಯಾರಿಗೆ ಏನೇ ಆದರೂ ರಕ್ಷಣೆ ಇಲ್ಲ..! ಕೇಸೂ ಮಾಡಲ್ಲ
ಪತಿ ಎದುರೇ ನಡೆದ ಘಟನೆ
ಆರೋಪಿಗಳ ರಕ್ಷಣೆಗೆ ಸಂಚು
ಕೇಸ್ ಮಾಡುವುದಕ್ಕೂ ಪೊಲೀಸರಿಗೆ ಭಯ
ಪೊಲೀಸರು ಯಾಕೆ ಹಿಂಗೆ..?
ಜೆಸಿ ಆಸ್ಪತ್ರೆಯಲ್ಲಿ ಪತಿ-ಪತ್ನಿ ಅಡ್ಮಿಟ್
ಗೃಹಸಚಿವರ ಕ್ಷೇತ್ರದಲ್ಲಿ ದಲಿತರಿಗೆ ಸಿಗಲ್ವ ನ್ಯಾಯ...?
ಗೃಹ ಸಚಿವರ ಸ್ವಕ್ಷೇತ್ರ ಆರಗದಲ್ಲಿ ಸೋಮವಾರ ರಾತ್ರಿ 10.30ರ ಸಮಯದಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ನಡೆದಿದೆ ಎನ್ನಲಾದ ಪ್ರಯತ್ನದ ಘಟನೆಯನ್ನು ಮುಚ್ಚಿ ಅರೋಪಿಗಳನ್ನು ರಕ್ಷಿಸುವ ಸಂಚು ಆಡಳಿತದಲ್ಲಿ ನಡೆಯುತ್ತಿದೆ. ಪಟ್ಟಣದ ಸರಕಾರಿ ಜೆಸಿ ಅಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಘಟನೆ ಕುರಿತು ಪೂರ್ಣ ಹೇಳಿಕೆಯನ್ನು ಪೊಲೀಸರಿಗೆ ನೀಡಿ ೨ದಿನ ಕಳೆದರು ಅರೋಪಿಗಳ ವಿರುದ್ಧ ಠಾಣೆಯಲ್ಲಿ ಕೇಸ್ ದಾಖಲಾಗಿಲ್ಲ.
ಘಟನೆ ಹೇಗಾಯಿತು ?
ಅರೋಗ್ಯ ಸರಿ ಇಲ್ಲದ ಕಾರಣ ಸೋಮವಾರ ಪತಿ ಜತೆ ಮಹಿಳೆ ತೀರ್ಥಹಳ್ಳಿ ಅಸ್ಪತ್ರೆಗೆ ಬಂದಿದ್ದರು.
ಆಸ್ಪತ್ರೆಯಿಂದ ಸಂಜೆ ಮನೆಗೆ ತೆರಳುತ್ತಿದ್ದ ಸಂದರ್ಭ
ದಲಿತ ದಂಪತಿಗಳ ಮೇಲೆ ಬೈಕ್ ಹರಿಬಿಟ್ಟು ಅರೋಪಿಗಳು ದೌರ್ಜನ್ಯ ಎಸಗಿದ್ದಾರೆ.
ಕುಡಿತದ ಮತ್ತಿನಲ್ಲಿದ್ದ ನಾಲ್ವರು ಯುವಕರು 2 ಬೈಕ್‌ಗಳನ್ನು ಹರಿಬಿಟ್ಟ ಕಾರಣಕ್ಕೆ
ಪತಿಯ ಕಾಲು, ತಲೆಗೆ ಏಟು ಬಿದ್ದು ಕೆಲ ಕಾಲ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಈ ಸಂದರ್ಭ ಆರೋಪಿಗಳು
ಮಹಿಳೆಯ ಬಟ್ಟೆ ಹರಿದು ನಿರ್ವಸ್ತ್ರ ಮಾಡಿದ್ದಾರೆ. ಪ್ರಜ್ಞೆ ಹೀನಾಸ್ಥಿತಿಯಲ್ಲಿದ್ದ ಮಹಿಳೆಯ ಪತಿ
ತಕ್ಷಣ ಎಚ್ಚರಗೊಂಡು ಕಿರುಚಿಕೊಂಡ ನಂತರ ಸ್ಥಳೀಯರು ಘಟನಾ ಸ್ಥಳಕ್ಕೆ ಓಡಿ ಬಂದಿದ್ದಾರೆ. ಪ್ರಕರಣ ಸೋಮವಾರ
ನಡೆದು ಪೊಲೀಸ್ ಮೆಟ್ಟಿಲೇರಿದೆ. ಆದರೂ ದಲಿತ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ ಎಂಬುದು ದಲಿತ ಸಂಘರ್ಷ
ಸಮಿತಿ ಮುಖಂಡರ ದೂರಾಗಿದೆ.
ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ದಂಪತಿಗಳು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲು ಪ್ರಯತ್ನಿಸಿದ್ದಾರೆ. ದೂರು ನೀಡದಂತೆಯೂ ಪ್ರಕರಣವನ್ನು ಮುಚ್ಚುವ ಪ್ರಯತ್ನ ನಡೆಸಿದ್ದರೆ. ಇಂತಹ ಪ್ರಕರಣಗಳು ತಾಲ್ಲೂಕಿನಲ್ಲಿ ನಿರಂತರ ನಡೆಯುತ್ತಿದೆ. ದೌರ್ಜನ್ಯಕ್ಕೆ ಒಳಗಾಗಿರುವ ದಂಪತಿಗಳು ನೇರವಾಗಿ ಹೇಳಿಕೆ ನೀಡಿದ್ದಾರೆ. ಆರೋಪಿಗಳ ಹೆಸರು ಕೂಡ ಪೊಲೀಸ್ ಸಿಬ್ಬಂದಿಗೆ ನೀಡಿದ್ದಾರೆ. ಆದರೆ ಎಫ್‌ಐಆರ್ ದಾಖಲು ಮಾಡುತ್ತಿಲ್ಲ ಎಂದು ದಲಿತ ಮುಖಂಡರ ಆರೋಪ.
