ವಾಟ್ಸಪ್‌ ಪಂಡಿತ ರೋಹಿತ್‌ ಚಕ್ರತೀರ್ಥ

ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ

ಫೇಸ್‌ಬುಕ್‌ ಕಿಡಿಗೇಡಿ…

ಗಡಿಪಾರಿಗೆ ಕರವೇ ಆಗ್ರಹ

ರೋಹಿತ್‌ ಚಕ್ರತೀರ್ಥ ಕೇವಲ ಒಬ್ಬ ವಾಟ್ಸಪ್‌ ಫೇಸ್‌ ಬುಕ್‌ ಪಂಡಿತನಷ್ಟೇ. ಈ ಕಿಡಿಗೇಡಿಗೆ ಕುವೆಂಪು, ತೇಜಸ್ವಿ ಸೇರಿದಂತೆ ಮಾನವೀಯತೆಯ ಪರವಾಗಿ ನಿಲ್ಲುವ ಸಾಹಿತಿಗಳ ವಿರುದ್ದ ಬ್ರಾಹ್ಮಣರನ್ನ ಎತ್ತಿಕಟ್ಟುವುದೇ ಕೆಲಸವಾಗಿದೆ. ಇಂತಹ ಕೆಟ್ಟ ಹಿನ್ನಲೆಯ ವ್ಯಕ್ತಿಯನ್ನು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಾಲಾ ಮಕ್ಕಳ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷನನ್ನಾಗಿ ಮಾಡಿರುವುದು ಸರ್ಕಾರದ ಬೌಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಪವಿತ್ರವಾದ ನಾಡಗೀತೆಯನ್ನು ಅಶ್ಲೀಲವಾಗಿ ಅವಮಾನಿಸಿರುವ ನಾಡ ಭಾವುಟವನ್ನು ಒಳುಡುಪಿಗೆ ಹೋಲಿಸಿರುವ ಈತನನ್ನು ಕೂಡಲೇ ವಜಾಗೊಳಿಸಬೇಕಲ್ಲದೇ ಗಡಿಪಾರು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮೇಗರವಳ್ಳಿ ವೆಂಕಟೇಶ್‌ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ತಹಶೀಲ್ದಾರ್‌ ಕಚೇರಿ ಎದುರು ಕರವೇ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ತಕ್ಷಣವೇ ಈತನ್ನು ವಜಾಮಾಡಿ ಹಿಂದಿನ ಸಮಿತಿಯ ಪಠ್ಯ ಪುಸ್ತಕವನ್ನು ಸರ್ಕಾರ ಮಕ್ಕಳಿಗೆ ವಿತರಿಸಬೇಕು ಇಲ್ಲವಾದಲ್ಲಿ ಮುಂದೆ ಉಗ್ರ ಹೋರಾಟ ಖಚಿತ ಎಂದು ಎಚ್ಚರಿಸಿದ್ದಾರೆ.


ತಾಲ್ಲೂಕು ಘಟಕದ ಅಧ್ಯಕ್ಷ ಸುರೇಂದ್ರ ಮಾತನಾಡಿ, ನಾಡಗೀತೆಗೆ, ಧ್ವಜಕ್ಕೆ ಅವಮಾನಿಸುವುದು ಎಂದರೆ ರಾಜ್ಯಕ್ಕೆ ದೇಶಕ್ಕೆ ಅವಮಾನ ಮಾಡಿದಂತೆ ಇದು ದೇಶ ದ್ರೋಹಕ್ಕೆ ಸಮನಾದ ಕೆಲಸ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ರೋಹಿತ್‌ ಚಕ್ರತೀರ್ತನನ್ನು ಪಠ್ಯ ಪರಿಷ್ಕರಣ ಸಮಿತಿಯಿಂದ ತಕ್ಷಣವೇ ವಜಾಗೊಳಿಸಬೇಕು ಹಾಗೂ ಇನ್ನು ಮುಂದೆ ಆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ವಿದ್ಯಾಂಸರನ್ನು ಮಾತ್ರ ಇಂತಹ ಜವಾಬ್ದಾರಿಯುತ ಕೆಲಸಕ್ಕೆ ನೇಮಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷ ಶ್ರೀಕಾಂತ್‌ ಬೆಟ್ಟಮಕ್ಕಿ, ಪ್ರಧಾನ ಕಾರ್ಯದರ್ಶಿ ಅರ್ಜುನ ಎಸ್‌ ಮೊಗವೀರ್‌ ಬಾಳೆಬೈಲು, ಯುವ ಘಟಕ ಪ್ರಧಾನ ಕಾರ್ಯದರ್ಶಿ ಮಹೇಶ ಬೆಟ್ಟಮಕ್ಕಿ, ವಿಕ್ರಮ್‌ ಶೆಟ್ಟಿ ಬೆಟ್ಟಮಕ್ಕಿ, ಮಹಿಳಾ ಘಟಕದ ಅಧ್ಯಕ್ಷ ಜ್ಯೋತಿ ದಿಲೀಪ್‌, ವಿಜಯ ಪ್ರದ್ಮನಾಭ, ನಗರ ಘಟಕದ ಅಧ್ಯಕ್ಷ ರವಿ ಎಸ್.‌ ಎನ್.‌ ಲಕ್ಷ್ಮೀದೇವಿ, ನಾಗವೇಣಿ ಚಂದ್ರಶೇಖರ್‌, ಪ್ರತಾಪ್‌, ಸುರೇಶ್‌, ಪ್ರದೀಪ್‌ ಭಾರತೀಪುರ ಮುಂತಾದವರು ಇದ್ದರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post