ಅರಣ್ಯ ಇಲಾಖೆ ಸಿಬ್ಬಂದಿ, ರೈತನ ನಡುವೆ ಪರಸ್ಪರ ಹಲ್ಲೆ

ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ರೈತನಿಂದ ಹಲ್ಲೆ

ರೈತನ ಮೇಲೆ ಅವಾಚ್ಯ ನಿಂದಿಸಿ ಹಲ್ಲೆ ನಡೆಸಿದ ಅಧಿಕಾರಿಗಳು

ಯಾರದ್ದು ಸರಿ... ಯಾರದ್ದು ತಪ್ಪು...?
ಅಕ್ರಮ ಮಣ್ಣು ತೆಗೆಯುವ ಕೃತ್ಯ ತಡೆಯಲು ಹೋದ ಅರಣ್ಯ ಸಿಬ್ಬಂದಿ, ರೈತನ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿದ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಹೆಗ್ಗೋಡು ಸಮೀಪದ ಬಿಕ್ಕೊಳ್ಳಿ ಗ್ರಾಮದಲ್ಲಿ ಜರುಗಿದೆ.
ಮೀಸಲು ಕಿರು ಅರಣ್ಯ ಪ್ರದೇಶದಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಗೊಳಿಸಿ ರೈತ ಡಾಕಪ್ಪ ಅಲಿಯಾಸ್‌ ರಾಕೇಶ್‌ (35) ಹಲ್ಲೆ ನಡೆಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಆಗುಂಬೆ ಠಾಣೆಗೆ ದೂರು ನೀಡಿದ್ದು ಪಟ್ಟಣದ ಜೆಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರೈತ ಡಾಕಪ್ಪ ಜೆಸಿ ಆಸ್ಪತ್ರೆಗೆ ದಾಖಲಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ತಳ್ಳಿ ಹಲ್ಲೆ ನಡೆಸಿದ್ದಾರೆ ಎಂದು ರೈತ ರಾಕೇಶ್‌ ದೂರು ನೀಡಿದ್ದಾರೆ.
ಕೋಡ್ಲು ಗ್ರಾಮದ ಸರ್ವೆ ನಂಬರ್‌ 139ರ ಅಲಗೇರಿ ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜೆಸಿಬಿ ಯಂತ್ರದಿಂದ ಮಣ್ಣು ತೆಗೆದು ಸಾಗಿಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ದಾಖಲಾಗಿತ್ತು. ಉಪವಲಯಾರಣ್ಯಧಿಕಾರಿ ಕಿರಣ್‌ ಕುಮಾರ್‌, ಅನಿಲ್‌ ಕುಮಾರ್‌, ಅರಣ್ಯ ರಕ್ಷಕ ಸಿಬ್ಬಂದಿಗಳಾದ ಅಭಿಷೇಕ್‌, ಗಣೇಶ್‌ ಸ್ಥಳಕ್ಕೆ ತೆರಳಿದ್ದು ವಾಗ್ವಾದ ಹಲ್ಲೆಯಲ್ಲಿ ಅಂತ್ಯವಾಗಿದೆ.
ಆಗುಂಬೆ ವಲಯಾರಣ್ಯ ವ್ಯಾಪ್ತಿಯ ಗ್ರಾಮದಲ್ಲಿ ಘಟನೆ ನಡೆದಿದ್ದು ತೀರ್ಥಹಳ್ಳಿ ಎಸಿಎಫ್‌ ಪ್ರಕಾಶ್‌, ಆಗುಂಬೆ ವಲಯಾರಣ್ಯಾಧಿಕಾರಿ ಮಧುಕರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಕಷ್ಟದಲ್ಲಿ ರೈತ
ತಾಲ್ಲೂಕಿನಲ್ಲಿ ಕಾಡುಗಳನ್ನೇ ನಂಬಿಕೊಂಡು ರೈತರು, ಬಡವರು ಜೀವನ ನಡೆಸುತ್ತಿದ್ದಾರೆ. ಕಾಡು ಅವರ ಪ್ರತಿನಿತ್ಯದ ಒಂದು ಭಾಗ. ಕಾಡಿನ ಒಳಗೆ ನಿಗ್ಗಬಾರದು ವಸ್ತು ಸಂಗ್ರಹಿಸಬಾರದು ಎಂಬ ಆದೇಶವಿದ್ದರು ಓಬೀರಾಯನ ಕಥೆ ಇಟ್ಟುಕೊಂಡು ಗಲಾಟೆ ನಡೆಸಲಾಗುತ್ತಿದೆ. ತೋಟ ರಕ್ಷಿಸಿಕೊಳ್ಳಲು ಹೊಸ ಮಣ್ಣಿನ ಅವಶ್ಯಕತೆ ಇದೆ. ಅರಣ್ಯ ಸಿಬ್ಬಂದಿ ಕೂಡ ಶಾಂತಿಯಿಂದ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ನೇರವಾಗಿ ಹಿಟ್ ಮಾಡುವ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post