ಸಮೂದಾಯ ಪಾಲ್ಗೊಳ್ಳುವಿಕೆ ಶಾಲೆಯ ಅಭಿವೃದ್ದಿ - ಸಾಲೇಕೊಪ್ಪ ರಾಮಚಂದ್ರ

ಪ್ರಗತಿಯ ಹಾದಿಯಲ್ಲಿ ಬಸವಾನಿ ಸರ್ಕಾರಿ ಶಾಲೆ

ಶಾಲೆಯಿಂದ ಊರು ಬೆಳೆಯಲು ಸಾಧ್ಯ

ಹಳ್ಳಿ ಶಿಕ್ಷಣದ ಮಹತ್ವ ಪ್ರಚಾರವಾಗಲಿ

ಸಮೂದಾಯ ಪಾಲ್ಗೊಳ್ಳುವಿಕೆ ಶಾಲೆಯ ಅಭಿವೃದ್ದಿ - ಸಾಲೇಕೊಪ್ಪ ರಾಮಚಂದ್ರ

ನೆಲದ ಧ್ವನಿ
ಶಾಲೆಯ ಅಭಿವೃದ್ದಿಗೆ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ಸಂಘ ಸಂಸ್ಥೆ ನೆರವು ಅಗತ್ಯ. ಸಮೂದಾಯ ಪಾಲ್ಗೊಳ್ಳುವಿಕೆಯಿಂದ ಸರ್ಕಾರಿ ಶಾಲೆ ಉಳಿಸಲು ಸಾಧ್ಯ. ಹಳ್ಳಿಯ ಶಿಕ್ಷಣದ ಮಹತ್ವ ಪ್ರತಿಯೊಬ್ಬರಿಗೂ ಅರ್ಥವಾಗಬೇಕು ಎಂದು ತಾ.ಪಂ. ಮಾಜಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ ಹೇಳಿದರು.
ಮಂಗಳವಾರ ತಾಲ್ಲೂಕಿನ ಬಸವನಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದಾನಿಗಳ ನೆರವಿನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಶಾಲೆ ಬೆಳೆದರೆ ಊರು ಬೆಳೆಯಲು ಸಾಧ್ಯ. ಶಾಲೆಗೆ ಸರ್ಕಾರದಿಂದ 50 ಸಾವಿರ ಮೊತ್ತ ಪಿಠೋಪಕರಣ ನೀಡಲಾಗಿದೆ. ಸರ್ಕಾರಿ ಶಾಲೆ ಅಭಿವೃದ್ಧಿಗೆ ದಾನಿಗಳು ನೀಡುತ್ತಿರುವ ಸಹಕಾರ ಸ್ಮರಣೀಯ ಎಂದರು.
ದಾನಿಗಳಾದ ಕನಕರಾಜ್‌, ಬೆಂಗಳೂರು ಗೆಳೆಯರ ಬಳಗದ ಲಯನ್ಸ್ ರಾಜಶೇಖರ, ತಾಲ್ಲೂಕು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸಿರಿಬೈಲು ಧರ್ಮೇಶ್‌, ಶಿಕ್ಷಣ ಸಂಯೋಜಕಿ ಜ್ಯೋತಿ ಮಾತನಾಡಿದರು. ಶಾಲೆಗೆ ಆಟದ ಸಾಮಾಗ್ರಿ, ನೋಟ್‌ ಬುಕ್‌, ಲೇಖನಿ ಸಾಮಾಗ್ರಿಗಳನ್ನು ದಾನಿಗಳು ನೀಡಿದರು. ದಾನಿಗಳಾದ ಕನಕರಾಜ್‌, ಸುಮಿತ್ರ ದಂಪತಿಯನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಹಣಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ, ಸದಸ್ಯೆ ಸರೋಜ, ಶಾಲಾ ಎಸ್‌ಡಿಎಎಂಸಿ ಅಧ್ಯಕ್ಷ ಕೆ.ಬಿ. ಚಂದ್ರು, ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಶ್ರೀನಾಥ್‌ ಜೋಯ್ಸ್‌, ಪ್ರಮುಖರಾದ ಕನ್ನಂಗಿ ಶೇಷಾದ್ರಿಗೌಡ, ಗಿರಿಧರ್‌, ತಿಮ್ಮೇಗೌಡ, ಮಂಜುನಾಥ್‌, ಮುಖ್ಯ ಶಿಕ್ಷಕಿ ಅನಿತಾ, ಶಿಕ್ಷಕ ಹೂವಪ್ಪ ಮತ್ತಿತರರು ಇದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post