ತಾಲ್ಲೂಕು ಆಡಳಿತದ ಶ್ಲಾಘನೀಯ ಕಾರ್ಯ
ಮೃತ ಶಂಕರಪ್ಪ ಕುಟುಂಬಕ್ಕೆ ಶೀಘ್ರ ಪರಿಹಾರ
ಸಾರ್ವಜನಿಕರ ಕೆಲಸ ತ್ವರಿತವಾಗಿ ಹೀಗೇ ಮುಂದುವರೆಯಲಿ…
ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ತೂದೂರು ಗ್ರಾಮದ ಶಂಕರಪ್ಪ (55) ಗುರುವಾರ ಗದ್ದೆಯಲ್ಲಿ ಕೆಲಸ ಮಾಡುವ ಸಂದರ್ಭ ಹಳ್ಳಕ್ಕೆ ಬಿದ್ದು ಅಸುನೀಗಿದ್ದರು. ಘಟನೆ ತಿಳಿಯುತ್ತಿದ್ದಂತೆ ತಾಲ್ಲೂಕು ಅಡಳಿತ ಸ್ಥಳ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದೆ. ಶನಿವಾರ ಗೃಹಸಚಿವ ಆರಗ ಜ್ಞಾನೇಂದ್ರ 4 ಲಕ್ಷ ಮೊತ್ತದ ಚೆಕ್ ವಿತರಿಸಿ ಕುಟುಂಬಕ್ಕೆ ನೆರವಾಗಿದ್ದಾರೆ.
ಶಂಕರಪ್ಪ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ದತೆ ನಡೆಸಿದ್ದರು. ತೂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮಧುರಾಜ್ ಹೆಗ್ಡೆ ಪರಿಹಾರ, ಸರ್ಕಾರದ ಸೌಲಭ್ಯಗಳ ಮಾಹಿತಿ ನೀಡಿ ಕುಟುಂಬಕ್ಕೆ ಮನವರಿಕೆ ಮಾಡುವ ಮೂಲಕ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರು.ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶ್ರೀಪಾದ, ಮಂಡಗದ್ದೆ ರಾಜಸ್ವ ನಿರಿಕ್ಷಕ
ವಿನಯ್, ಗ್ರಾಮ ಲೆಕ್ಕಿಗ ಸಂದೀಪ್, ಮಾಳೂರು ಠಾಣೆಯ ಪಿಎಸ್‌ಐ ನವೀನ್ ಮಠಪತಿ, ಗುತ್ತಿಯಡೇಹಳ್ಳಿ
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಿದ್ದರಾಮಪ್ಪ ಮುಂತಾದ ಅಧಿಕಾರಿಗಳು ಕೃಷಿ ಕಾರ್ಮಿಕ
ಶಂಕರಪ್ಪ ಸಾವಿನ ವರದಿಯನ್ನು ತಕ್ಷಣ ನೀಡಿದ್ದರ ಫಲವಾಗಿ ಸರ್ಕಾರದಿಂದ ಪರಿಹಾರ ಶೀಘ್ರ ದೊರಕಿದೆ.
ಕುಟುಂಬದ ಅಧಾರ ಸ್ಥಂಬವಾಗಿದ್ದ ಪತಿಯನ್ನು ಕಳೆದುಕೊಂಡ ಪತ್ನಿ, ತಂದೆಯನ್ನು
ಕಳೆದುಕೊಂಡ ಮಗ ಅನಾಥರಾಗಿದ್ದಾರೆ. ಸಾವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಒಂದಿಷ್ಟು ಮಾನವೀಯ
ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಅಲ್ಪ ಪ್ರಮಾಣದ ಪರಿಹಾರ ಒದಗಿಸಲಾಗಿದೆ. ಪರಿಹಾರದಿಂದ ಕುಟುಂಬದ
ಸದಸ್ಯರಿಗೆ ಆರ್ಥಿಕ ನೆರವು ದೊರಕಿದೆ. ಇಂತಹ ಪ್ರಕರಣಗಳು ಅನೇಕ ನಡೆಯುತ್ತಿರುತ್ತದೆ. ಕೆಲವು ಪ್ರಕರಣ
ಬೆಳಕಿಗೆ ಬಾರದೆ ಮುಚ್ಚಿ ಹೋಗುತ್ತವೆ. ಅಂತಹ ಸಂದರ್ಭದಲ್ಲಿ ನೆರವಾಗಬೇಕಾಗಿರುವುದು ಜನಪ್ರತಿನಿಧಿಗಳು
ಮತ್ತು ಅಧಿಕಾರಿಗಳ ಕರ್ತವ್ಯ ಎಂಬುದನ್ನು ಈ ಪ್ರಕರಣ ಸಾಕ್ಷೀಕರಿಸಿದೆ.
ಸಾವಿನ ವರದಿ ತಿಳಿಯುತ್ತಿದ್ದಂತೆ ತೂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುರಾಜ್ ಹೆಗ್ಡೆ ಅವರು ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ತಾಲ್ಲೂಕು ಅಡಳಿತಕ್ಕೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ತುರ್ತು ಕ್ರಮ ಕೈಗೊಂಡು ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕುಟುಂಬಕ್ಕೆ ನೆರವಾದ ಎಲ್ಲರಿಗೂ ವೈಯಕ್ತಿಕವಾಗಿ ಮಧುರಾಜ್ ಹೆಗ್ಡೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಘಟನೆಗೆ ಪರಿಹಾರ ನೀಡುವಂತಹ ಕೆಲಸಕ್ಕೆ ಶ್ರಮ ವಹಿಸಿದ ಎಲ್ಲಾ ಅಧಿಕಾರಿ
ವರ್ಗದವರಿಗೂ ಹಾಗೂ ಜನಪ್ರತಿನಿಧಿಗಳಿಗೂ ನೆಲದ ಧ್ವನಿ ಓದುಗರ ಬಳಗದ ಪರವಾಗಿ ಸಂಪಾದಕೀಯ ಮಂಡಳಿಯ ಪರವಾಗಿ
ಅಭಿನಂದನೆಗಳು.

