ಹಿರೇಸರ ಹೋಂ ಸ್ಟೇನಲ್ಲಿ ಸೇರಿದ 45ಕ್ಕೂ ಹೆಚ್ಚು ಜನರ ಗುಪ್ತ ಸಭೆ

ರಿಂಗ್ ನ ಕೆಟ್ಟ ಪದ್ಧತಿಗೆ ಕುರುವಳ್ಳಿ ಬಂಡೆ ಅರ್ಹ ಹಾರಾಜುದಾರರ ಸಂಚು

ನೆಸ್ಟ್‌ ಹೋಂ ಸ್ಟೇನಲ್ಲಿ ಹಾರಜುದಾರರ ಗುಪ್ತ ಮೀಟಿಂಗ್‌
ಮೇ 25ರ ಇ-ಟೆಂಡರ್ ನಲ್ಲಿ ಸಿಂಡಿಕೇಟ್‌ಗೆ ತಯಾರಿ
ಮಲೆನಾಡಿನ ರೈತರಿಗೆ ಸಿಗದು ಕಡಿಮೆ ದರದ ಕಲ್ಲು
ಕುರುವಳ್ಳಿ ಬಂಡೆ ಟೆಂಡರ್‌ ಗೂ ಮುನ್ನ ಕೋಟ್ಯಾಂತರ ರೂಪಾಯಿ ಡೀಲ್‌
ಹಿರೇಸರ ಹೋಂ ಸ್ಟೇನಲ್ಲಿ ಸೇರಿದ 45ಕ್ಕೂ ಹೆಚ್ಚು ಜನರ ಗುಪ್ತ ಸಭೆ
ಪೊಲೀಸರು ಆ ಕಡೆ ದೃಷ್ಟಿ ಹರಿಸುವರೇ…?
ಸುಮಾರು 3 ಕೋಟಿಗೂ ಹೆಚ್ಚಿನ ಡೀಲ್‌

ಪಟ್ಟಣ ಪಂಚಾಯಿತಿ ಟೆಂಡರ್‌ ಡೀಲ್‌ ಮಾಸುವ ಮುನ್ನವೇ ಇನ್ನೊಂದು ಡೀಲ್‌ಗೆ ತೀರ್ಥಹಳ್ಳಿ ಸಾಕ್ಷಿಯಾಗಿದೆ. ಬಿಡ್ಡುದಾರರು ಪ್ರತಿಯೊಬ್ಬರಿಂದ ಹರಾಜಿಗೆ 3 ಲಕ್ಷ ರೂಪಾಯಿಯ ಕಂತು ಸಂಗ್ರಹಣೆ ಮಾಡಲಾಗಿದೆ. ಸುಮಾರು 3 ರಿಂದ 5 ಕೋಟಿ ವ್ಯವಹಾರ ನಡೆಯುವ ಸಾಧ್ಯತೆ ಇದೆ. ಹಿರೇಸರದ ಹೋಂ ಸ್ಟೇನಲ್ಲಿ ಹೊಸನಗರ, ತೀರ್ಥಹಳ್ಳಿ, ಸಾಗರದ ಅರ್ಹ ಬಿಡ್ಡುದಾರರಿಂದ ಸುಮಾರು 45ಕ್ಕೂ ಹೆಚ್ಚು ಜನರಿಂದ ಗುಪ್ತ ಸಭೆ ನಡೆಯುತ್ತಿದೆ. ಈ ಡೀಲ್‌ ಬಗ್ಗೆ ತಾಲ್ಲೂಕು ಅಡಳಿತ ಸುಮ್ಮನಿರುವುದು ಯಾಕೆ ಎಂಬ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ಸಹ್ಯಾದ್ರಿ ಬೆಟ್ಟದ ಆಯಕಟ್ಟಿನ ಪರಿಸರದಲ್ಲಿ ಸುಮಾರು 50 ವರ್ಷಗಳಿಂದ ನಡೆಯುತ್ತಿರುವ ಕಲ್ಲುಗಣಿಕಾರಿಕೆ ಇ-ಟೆಂಡರ್‌ ಮೂಲಕ ಮತ್ತೊಮ್ಮೆ ಹರಾಜು ಪ್ರಕ್ರಿಯೆ ಮೇ 25ರ ಬುಧವಾರ ನಡೆಯಲಿದೆ. ಇ-ಟೆಂಡರ್‌ನಲ್ಲಿ ಭಾಗವಹಿಸಲು ಉದ್ದೇಶಿಸಿರುವ ಕೆಲವು ಗುತ್ತಿಗೆದಾರರು ತೀರ್ಥಹಳ್ಳಿ ತಾಲ್ಲೂಕಿನ ಹಿರೇಸರ ಸಮೀಪದ ನೆಸ್ಟ್‌ ಹೋಂ ಸ್ಟೇನಲ್ಲಿ ಗುಪ್ತವಾದ ಮೀಟಿಂಗ್ ಸೇರಿಕೊಂಡಿದ್ದಾರೆ.

ಈಗಾಗಲೇ ಜನವರಿ 19 ರಂದು ಒಂದು ಹಂತದ ಟೆಂಡರ್‌ ಪ್ರಕ್ರಿಯೆ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದಿದೆ. ಅದನ್ನು ಪ್ರಶ್ನಿಸಿ ಕೋರ್ಟ್‌ ಮೊರೆ ಹೋದ ಉಮೇದುದಾರರು ಟೆಂಡರ್‌ ಪ್ರಕ್ರಿಯೆಯನ್ನು ತಡೆಹಿಡಿದಿದ್ದಾರೆ. ಸದ್ಯ 25ರ ಟೆಂಡರ್‌ ಮೇಲೆ ಬಂಡೆ ಮಾಲೀಕರ ಕಣ್ಣು ಬಿದ್ದಿದೆ.


ಬಂಡೆಯಲ್ಲೇ ಬದುಕು ನಿರ್ಮಿಸಿಕೊಂಡಿರುವ ಹಲವು ಕಾರ್ಮಿಕರು ಜೀವನ ನಿರ್ವಹಣೆ ಮಾಡಿಕೊಂಡಿದ್ದಾರೆ. ಹರಾಜು ಪ್ರಕ್ರಿಯೆಗೆ ಜಿಲ್ಲಾಡಳಿತ ಸಜ್ಜು ಮಾಡಿಕೊಂಡಾಗಲೆಲ್ಲ ಮಾಲೀಕರ ನಸುಗುನ್ನಿತನದಿಂದ ಹರಾಜು ಪ್ರಕ್ರಿಯೆ ಮೌಲ್ಯ ಕಳೆದುಕೊಳ್ಳುತ್ತಿದೆ.

ಸಿಂಡಿಕೇಟ್‌ ಮಾಡಿಕೊಳ್ಳುತ್ತಾರಂತೆ…!

ಯಾವುದೇ ಅಕ್ರಮಕ್ಕೆ ಸಾಕ್ಷಿಯಾಗದಂತೆ ಹರಾಜು ಪ್ರಕ್ರಿಯೆ ನಡೆಸುವುದು ಜಿಲ್ಲಾಡಳಿತದ ಜವಾಬ್ದಾರಿ. ಇದರಲ್ಲಿ ಮಾಲೀಕರು, ಮುಖಂಡರ ಮಾತುಗಳು ನಡೆಯದ ಕಾರಣ ಬಿಡ್ಡುದಾರರ ನಡುವೆಯೇ ದೊಡ್ಡ ಮಟ್ಟಿಗಿನ ಸಿಂಡಿಕೇಟ್‌ ಅಥವಾ ರಿಂಗ್‌ ಪದ್ಧತಿ ಮಾಡಿಕೊಳ್ಳುವ ಮೂಲಕ ಒಳ ಒಪ್ಪಂದಿಂದ ಹರಾಜು ಪ್ರಕ್ರಿಯೆ ನಡೆಲಿದೆ. ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಆಗುವ ಸಾಧ್ಯತೆ ಇರುವುದರಿಂದ ತಕ್ಷಣ ಜಿಲ್ಲಾಡಳಿತ ಸಿಂಡಿಕೇಟ್‌ ಮಾಡಿಕೊಳ್ಳುತ್ತಿರುವ ಅರ್ಹ ಟೆಂಡರ್‌ದಾರರು, ಗುತ್ತಿಗೆದಾರರು, ಉಮೇದುರಾರರ ಮೇಲೆ ಕಣ್ಣು ಹಾಯಿಸಬೇಕು. ಪೊಲೀಸ್‌ ಸಿಬಂದ್ದಿಗಳು ನೆಸ್ಟ್‌ ಹೋಂ ಸ್ಟೇನಲ್ಲಿ ಹರಾಜಿಗೆ ಸಿದ್ದತೆ ಮಾಡಿಕೊಂಡು ಒಳ ಒಪ್ಪಂದ ಮಾಡಿಕೊಳ್ಳುತ್ತಿರುವರ ಮೇಲೆ ಪೊಲೀಸರು ದೃಷ್ಟಿ ಹಾಯಿಸಬೇಕಿದೆ.

ಇಲ್ಲದಿದ್ದರೇ… ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಪೊಲೀಸರು ಹಾಗೂ ಬಿಡ್ಡುದಾರರ ನಡುವಿನ ರಿಂಗ್‌ನಲ್ಲಿ ಇಲಾಖೆಗಳು ಶಾಮೀಲಾಗಿದ್ದಾವೆ ಎಂದು ಅನುಮಾನಿಸುವ ಸಂದರ್ಭ ಎದುರಾಗಲಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post