ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿರುವ ತೀರ್ಥಹಳ್ಳಿ ತಾಲೂಕಿನ ಕೊಂಡ್ಲೂರು ಸರ್ಕಾರಿ ಪ್ರೌಢ ಶಾಲೆ ಉತ್ತಮ ಸಾಧನೆ ಮಾಡಿದೆ. ಮೂಲಭೂತ ಸೌಕರ್ಯ ಕೊರತೆ ನಡುವೆಯೂ ಕು. ದೀಕ್ಷಾ ಹೆಚ್.ವಿ. 625 ಅಂಕಗಳಿಗೆ ಒಟ್ಟು 620 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ.
ಶಾಲೆಯಲ್ಲಿ ಪರೀಕ್ಷೆಗೆ ಕುಳಿತ 30 ಮಂದಿ ವಿದ್ಯಾರ್ಥಿಗಳಲ್ಲಿ 13 ಮಂದಿ ಡಿಸ್ಟಿಂಕ್ಷನ್ ನಲ್ಲಿ, 12 ಮಂದಿ ಪ್ರಥಮ ದರ್ಜೆಯಲ್ಲಿ, 4 ದ್ವೀತಿಯ ದರ್ಜೆ ಉತ್ತೀರ್ಣರಾಗಿದ್ದಾರೆ. ಒಟ್ಟಾರೆಯಾಗಿ ಶೇ. 97 ಫಲಿತಾಂಶ ಬಂದಿದೆ.
![]() |
| ಸೃಷ್ಟಿ ಜೆ.ಎಸ್. 618 |
![]() |
| ಮಾನ್ಯ ಜಿ.ಎಸ್. 613 |
ಶ್ರೀ ಲಕ್ಷ್ಮಿ ಎಂ.ಎಚ್. 610 ಉತ್ತಮ ಸಾಧನೆಯನ್ನು ಮಾಡಿರುವ ಇವರನ್ನು ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ, ಪೋಷಕರನ್ನು ಮತ್ತು ಶಿಕ್ಷಕರನ್ನು, ಅಡುಗೆ ಸಿಬ್ಬಂದಿಯವರನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಮುಖ್ಯೋಪಾಧ್ಯಾಯರಾದ ಗಿರಿರಾಜ್ ಅವರು ಅಭಿನಂದಿಸಿದ್ದಾರೆ.


